ನಿಮ್ಮ ಅಂಗೈನಲ್ಲಿ ಈ ಚಿಹ್ನೆ ಇದೆಯಾ ನೋಡಿ… ಇದ್ರೆ ಎಂದಿಗೂ ಹಣಕಾಸಿನ ಸಮಸ್ಯೆಗಳು ಎದುರಾಗಲ್ಲ | Palmistry

Palmistry

ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ ಏನಾಗುತ್ತದೆ? ಉದ್ಯೋಗ ಸಿಗುತ್ತದೆಯೇ ಅಥವಾ ಇಲ್ಲವೇ? ಮದುವೆ ಆಗುತ್ತಾ? ಜೀವನದಲ್ಲಿ ಸೆಟಲ್​ ಆಗ್ತೀನಾ? ಎಂಬಿತ್ಯಾದಿ ವಿಚಾರಗಳನ್ನು ತಿಳಿದುಕೊಳ್ಳುವ ಆಸಕ್ತಿಯನ್ನು ಜನರು ತೋರಿಸುತ್ತಾರೆ. ಆದರೆ, ಕೆಲವರಿಗೆ ಈ ಜ್ಯೋತಿಷ್ಯದ ಮೇಲೆ ನಂಬಿಕೆ ಇರುವುದಿಲ್ಲ. ಆದರೂ ಬಹುತೇಕ ಮಂದಿ ಜಾತಕವನ್ನು ನಂಬುತ್ತಾರೆ. ಈ ಕಾರಣಕ್ಕೆ ಜ್ಯೋತಿಷಿಗಳಿಗೆ ತುಂಬಾ ಬೇಡಿಕೆ ಇದೆ.

ಅಂದಹಾಗೆ ನಮ್ಮ ಗ್ರಹಗತಿ ಆಧಾರದ ಮೇಲೆ ನಮ್ಮ ಜೀವನದ ಆಗು-ಹೋಗುಗಳನ್ನು ತಿಳಿದುಕೊಳ್ಳುವ ನಿಟ್ಟಿನಲ್ಲಿ ಜ್ಯೋತಿಷ್ಯ ಶಾಸ್ತ್ರ ಬಹಳ ಮುಖ್ಯವಾಗಿದೆ. ಜ್ಯೋತಿಷ್ಯದಲ್ಲಿ ಹಲವು ವಿಧಾನಗಳಿರುವುದು ನಿಮಗೆಲ್ಲರಿಗೂ ಗೊತ್ತೇ ಇದೆ. ಅದರಲ್ಲಿ ಹಸ್ತ ಸಾಮುದ್ರಿಕಾ ( Palmistry ) ಕೂಡ ಒಂದು. ಹಸ್ತ ಸಾಮುದ್ರಿಕ ಎಂದರೆ ಹಸ್ತದ ಮೇಲಿನ ರೇಖೆಗಳ ಆಧಾರದ ಮೇಲೆ ಭವಿಷ್ಯವನ್ನು ಊಹಿಸುವುದು. ಈ ಹಸ್ತಸಾಮುದ್ರಿಕ ಶಾಸ್ತ್ರವನ್ನು ನಂಬುವ ಅನೇಕ ಜನರಿದ್ದಾರೆ. ಅವರಲ್ಲಿ ಸಾಮಾನ್ಯ ನಾಗರಿಕರಷ್ಟೇ ಅಲ್ಲ ಸೆಲೆಬ್ರಿಟಿಗಳು ಕೂಡ ಇದ್ದಾರೆ.

ಇದನ್ನೂ ಓದಿ: ಬಾಳೆಹಣ್ಣು ತಿಂದ ನಂತರ ನೀರು ಕುಡಿದರೆ ಏನಾಗುತ್ತದೆ? ಇಲ್ಲಿದೆ ನೋಡಿ ಉಪಯುಕ್ತ ಮಾಹಿತಿ… Banana

ನಮ್ಮ ಅಂಗೈನಲ್ಲಿ ವಿವಿಧ ರೀತಿಯ ರೇಖೆಗಳು ಅಥವಾ ಗೀರುಗಳಿವೆ. ಈ ಗೆರೆಗಳಿಂದಾಗಿ ಕೆಲವೊಂದು ಚಿಹ್ನೆಗಳು ಕೂಡ ರಚನೆಯಾಗಿವೆ. ಒಬ್ಬೊಬ್ಬರಲ್ಲೂ ಒಂದೊಂದು ರೀತಿಯ ಚಿಹ್ನೆಗಳಿರುತ್ತವೆ. ಕೆಲವರಲ್ಲಿ ಆಂಗ್ಲ ಅಕ್ಷರ A ಚಿಹ್ನೆಯು ಕೂಡ ಇರುತ್ತದೆ. ಅಂಗೈನಲ್ಲಿ A ಚಿಹ್ನೆ ಹೊಂದಿರುವುದರ ಅರ್ಥ ಏನೆಂದು ನಾವೀಗ ತಿಳಿದುಕೊಳ್ಳೋಣ.

Palmistry 1

ಹಸ್ತಸಾಮುದ್ರಿಕ ಶಾಸ್ತ್ರದ ಪ್ರಕಾರ ಅಂಗೈನಲ್ಲಿ A ಚಿಹ್ನೆ ಇರುವವರು ತುಂಬಾ ಅಪರೂಪ. ಅಂಗೈಯಲ್ಲಿ A ಚಿಹ್ನೆ ಹೊಂದಿರುವ ವ್ಯಕ್ತಿ ತುಂಬಾ ಅದೃಷ್ಟವಂತರು. ಅವರ ಆರ್ಥಿಕ ಸ್ಥಿತಿ ತುಂಬಾ ಚೆನ್ನಾಗಿರುತ್ತೆ. ಈ ಜನರು ಎಲ್ಲಾ ಭೌತಿಕ ಸುಖಗಳನ್ನು ಅನುಭವಿಸುತ್ತಾರೆ. ಅಲ್ಲದೆ, ಅವರ ಮೇಲೆ ದೇವರ ವಿಶೇಷ ಆಶೀರ್ವಾದ ಇರುತ್ತದೆ.

ಹೆಚ್ಚು ನಂಬಿಕೆಯುಳ್ಳವರು

ಕೈಯಲ್ಲಿ A ಚಿಹ್ನೆಯನ್ನು ಹೊಂದಿರುವ ವ್ಯಕ್ತಿಯು ಅದೃಷ್ಟಶಾಲಿ ಮತ್ತು ವ್ಯವಹಾರದಲ್ಲಿ ಉತ್ತಮ ಹೆಸರನ್ನು ಗಳಿಸುತ್ತಾನೆ. ಅಂತಹ ಜನರು ಪ್ರಾಯೋಗಿಕರು. ಅಲ್ಲದೆ, ಈ ಜನರು ಯಾವುದೇ ಪರಿಸ್ಥಿತಿಯಲ್ಲಿ ಸಂತೋಷವಾಗಿರುತ್ತಾರೆ. ಈ ಜನರು ತಮ್ಮ ಕುಟುಂಬದ ಸದಸ್ಯರನ್ನು ತಮ್ಮೊಂದಿಗೆ ಕರೆದುಕೊಂಡು ಹೋಗುತ್ತಾರೆ. ಇವರು ಹೆಚ್ಚು ನಂಬಿಕೆಯುಳ್ಳವರು.

ದಾನಶೀಲರು

ಅಂಗೈಯಲ್ಲಿ ‘A’ ಚಿಹ್ನೆಯನ್ನು ಹೊಂದಿರುವುದು ಮಂಗಳಕರವೆಂದು ಪರಿಗಣಿಸಲಾಗಿದೆ. ಅಂತಹ ವ್ಯಕ್ತಿಯಲ್ಲಿ ಮಾನವೀಯತೆ ಇರುತ್ತದೆ. ಅವರು ಯಾವಾಗಲೂ ಸಹಾಯ ಮಾಡಲು ಸಿದ್ಧರಾಗಿರುತ್ತಾರೆ. ಇವರು ದಾನಶೀಲರಾಗಿರುತ್ತಾರೆ. ಈ ಜನರು ಬುದ್ಧಿವಂತರು ಮತ್ತು ದೂರದೃಷ್ಟಿಯುಳ್ಳವರೂ ಆಗಿರುತ್ತಾರೆ. ಈ ಜನರು ತಾವು ಅಂದುಕೊಂಡ ಕೆಲಸವನ್ನು ಪೂರ್ಣಗೊಳಿಸುತ್ತಾರೆ.

ಇದನ್ನೂ ಓದಿ: ಆಪ್ತರಕ್ಷಕ ಸಿನಿಮಾದಲ್ಲಿ ಎಲ್ಲರನ್ನು ಭಯಬೀಳಿಸಿದ್ದ ಸಂಧ್ಯಾ ಈಗ ಹೇಗಿದ್ದಾರೆ ನೋಡಿ… ನಟಿಗೆ ಇಷ್ಟು ದೊಡ್ಡ ಮಗಳಿದ್ದಾಳಾ? Sandhya

ಹಣಕಾಸು ಸಮಸ್ಯೆ ಎದುರಾಗಲ್ಲ

ಕೈಯಲ್ಲಿ ‘A’ ಚಿಹ್ನೆಯನ್ನು ಹೊಂದಿರುವ ಜನರು ಆತ್ಮವಿಶ್ವಾಸದಿಂದ ತುಂಬಿರುತ್ತಾರೆ. ಅಲ್ಲದೆ, ಈ ಜನರು ಪ್ರಾಮಾಣಿಕರು. ಇವರು ಸೋಮಾರಿತನವನ್ನು ಇಷ್ಟಪಡುವುದಿಲ್ಲ. ಈ ಜನರು ಅಪಾರ ಸಂಪತ್ತಿನ ಒಡೆಯರು. ಇವರು ಶಾಂತಿ ಪ್ರಿಯರು. ಇವರು ಜೀವನದಲ್ಲಿ ಯಾವುದೇ ಹಣಕಾಸಿನ ಸಮಸ್ಯೆಗಳನ್ನು ಎದುರಿಸುವುದಿಲ್ಲ. ಏಕೆಂದರೆ, ವ್ಯವಹಾರವನ್ನು ಉತ್ತಮವಾಗಿ ನಿರ್ವಹಿಸುತ್ತಾರೆ. ಅಂದರೆ, ಲೆಕ್ಕಪತ್ರದಲ್ಲಿ ಪಕ್ಕಾ ಆಗಿರುತ್ತಾರೆ. ಈ ಜನರು ತಮ್ಮ ಸಂಗಾತಿ ಮತ್ತು ಕುಟುಂಬವನ್ನು ತುಂಬಾ ಪ್ರೀತಿಸುತ್ತಾರೆ. ಧಾರ್ಮಿಕ ಚಟುವಟಿಕೆಗಳಲ್ಲಿ ಹೆಚ್ಚು ತೊಡಗಿಸಿಕೊಳ್ಳುತ್ತಾರೆ.

ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು, ಜ್ಯೋತಿಷಿಗಳು, ಪಂಚಾಂಗಗಳು, ನಂಬಿಕೆಗಳು ಹಾಗೂ ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದನ್ನು ವಿಜಯವಾಣಿ ವೆಬ್​ಸೈಟ್​ ಜವಾಬ್ದಾರರಾಗಿರುವುದಿಲ್ಲ.

ನಿಮ್ಮ ಅಂಗೈನಲ್ಲಿ H ಚಿಹ್ನೆ ಇದೆಯಾ ನೋಡಿ… ಇದರ ಅರ್ಥ ತಿಳಿದ್ರೆ ನಿಮ್ಮ ಹುಬ್ಬೇರೋದು ಖಚಿತ! Palmistry

ನಿಮ್ಮ ಅಂಗೈನಲ್ಲಿ X ಚಿಹ್ನೆ ಇದೆಯಾ ನೋಡಿ… ಇದರ ಅರ್ಥ ತಿಳಿದ್ರೆ ನೀವು ಬೆರಗಾಗೋದು ಖಚಿತ!

Share This Article

ಪಿತ್ತಕೋಶದ ಕಲ್ಲು; ಸಮಸ್ಯೆ ತಪ್ಪಿಸಲು ಈ ಪದಾರ್ಥಗಳಿಂದ ದೂರವಿರಿ | Health Tips

ಮೂತ್ರಪಿಂಡದಲ್ಲಿ ಮಾತ್ರ ಕಲ್ಲುಗಳಾಗುತ್ತದೆ ಎಂದು ನೀವು ಭಾವಿಸುತ್ತೀರಾ? ನೀವು ಹಾಗೆ ಭಾವಿಸಿದರೆ ಅದು ತಪ್ಪು. ಏಕೆಂದರೆ…

30-40ನೇ ವಯಸ್ಸಿನಲ್ಲಿ ಜೀವನವನ್ನು ಹೇಗೆ ನಡೆಸಬೇಕು; ವೃದ್ಧಾಪ್ಯದ ಮೇಲೆ ಬೀರುವ ಪರಿಣಾಮದ ಡೀಟೇಲ್ಸ್​ ಇಲ್ಲಿದೆ | Health Tips

ಪ್ರೌಢವಸ್ಥೆ ಮತ್ತು ಯೌವನದಲ್ಲಿ ದೇಹವು ಉತ್ತಮ ಸ್ಥಿತಿಯಲ್ಲಿರುತ್ತದೆ. ಪ್ರತಿಯೊಂದು ಸ್ನಾಯು ಮತ್ತು ಅಂಗವು ಶಕ್ತಿಯಿಂದಿರುತ್ತದೆ. ಈ…

Night Shift Work : ರಾತ್ರಿ ಪಾಳಿಯಲ್ಲಿ ಕೆಲಸ ಮಾಡುತ್ತಿದ್ದೀರಾ?ಹಾಗಿದ್ರೆ ಈ ಸುದ್ದಿ ನಿಮಗಾಗಿ..

ಇತ್ತೀಚಿನ ದಿನಗಳಲ್ಲಿ ಅನೇಕ ಜನರು ಕಚೇರಿಗಳಲ್ಲಿ ರಾತ್ರಿ ಪಾಳಿಯಲ್ಲಿ (Night Shift Work) ಕೆಲಸ ಮಾಡುತ್ತಿದ್ದಾರೆ.…