ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ ಏನಾಗುತ್ತದೆ? ಉದ್ಯೋಗ ಸಿಗುತ್ತದೆಯೇ ಅಥವಾ ಇಲ್ಲವೇ? ಮದುವೆ ಆಗುತ್ತಾ? ಜೀವನದಲ್ಲಿ ಸೆಟಲ್ ಆಗ್ತೀನಾ? ಎಂಬಿತ್ಯಾದಿ ವಿಚಾರಗಳನ್ನು ತಿಳಿದುಕೊಳ್ಳುವ ಆಸಕ್ತಿಯನ್ನು ಜನರು ತೋರಿಸುತ್ತಾರೆ. ಆದರೆ, ಕೆಲವರಿಗೆ ಈ ಜ್ಯೋತಿಷ್ಯದ ಮೇಲೆ ನಂಬಿಕೆ ಇರುವುದಿಲ್ಲ. ಆದರೂ ಬಹುತೇಕ ಮಂದಿ ಜಾತಕವನ್ನು ನಂಬುತ್ತಾರೆ. ಈ ಕಾರಣಕ್ಕೆ ಜ್ಯೋತಿಷಿಗಳಿಗೆ ತುಂಬಾ ಬೇಡಿಕೆ ಇದೆ.
ಅಂದಹಾಗೆ ನಮ್ಮ ಗ್ರಹಗತಿ ಆಧಾರದ ಮೇಲೆ ನಮ್ಮ ಜೀವನದ ಆಗು-ಹೋಗುಗಳನ್ನು ತಿಳಿದುಕೊಳ್ಳುವ ನಿಟ್ಟಿನಲ್ಲಿ ಜ್ಯೋತಿಷ್ಯ ಶಾಸ್ತ್ರ ಬಹಳ ಮುಖ್ಯವಾಗಿದೆ. ಜ್ಯೋತಿಷ್ಯದಲ್ಲಿ ಹಲವು ವಿಧಾನಗಳಿರುವುದು ನಿಮಗೆಲ್ಲರಿಗೂ ಗೊತ್ತೇ ಇದೆ. ಅದರಲ್ಲಿ ಹಸ್ತ ಸಾಮುದ್ರಿಕಾ ಕೂಡ ಒಂದು. ಹಸ್ತ ಸಾಮುದ್ರಿಕ ಎಂದರೆ ಹಸ್ತದ ಮೇಲಿನ ರೇಖೆಗಳ ಆಧಾರದ ಮೇಲೆ ಭವಿಷ್ಯವನ್ನು ಊಹಿಸುವುದು. ಈ ಹಸ್ತಸಾಮುದ್ರಿಕ ಶಾಸ್ತ್ರವನ್ನು ನಂಬುವ ಅನೇಕ ಜನರಿದ್ದಾರೆ. ಅವರಲ್ಲಿ ಸಾಮಾನ್ಯ ನಾಗರಿಕರಷ್ಟೇ ಅಲ್ಲ ಸೆಲೆಬ್ರಿಟಿಗಳು ಕೂಡ ಇದ್ದಾರೆ.
ನಮ್ಮ ಅಂಗೈನಲ್ಲಿ ವಿವಿಧ ರೀತಿಯ ರೇಖೆಗಳು ಅಥವಾ ಗೀರುಗಳಿವೆ. ಈ ಗೆರೆಗಳಿಂದಾಗಿ ಕೆಲವೊಂದು ಚಿಹ್ನೆಗಳು ಕೂಡ ರಚನೆಯಾಗಿವೆ. ಒಬ್ಬೊಬ್ಬರಲ್ಲೂ ಒಂದೊಂದು ರೀತಿಯ ಚಿಹ್ನೆಗಳಿರುತ್ತವೆ. ಕೆಲವರಲ್ಲಿ ಹಸ್ತದ ಮಧ್ಯಭಾಗದ ರೇಖೆಗಳ ನಡುವೆ ‘X’ ಆಕಾರದಲ್ಲಿ ಗುರುತು ಇರುತ್ತದೆ. ಪ್ರಪಂಚದಲ್ಲಿ ಕೇವಲ 5 ಪ್ರತಿಶತ ಜನರು ಮಾತ್ರ ಈ ಗುರುತು ಹೊಂದಿರುತ್ತಾರೆ. ಹಸ್ತದ ಮೇಲೆ ಎಕ್ಸ್ ಆಕಾರದ ಗುರುತು ಹೊಂದಿರುವುದರ ಅರ್ಥ ಏನೆಂದು ನಾವೀಗ ತಿಳಿದುಕೊಳ್ಳೋಣ.
ಹಸ್ತದ ಮಧ್ಯ ಭಾಗದಲ್ಲಿ X ಮಾರ್ಕ್ ಇರುವವರು ತುಂಬಾ ಪ್ರತಿಭಾವಂತರು ಎಂದರ್ಥ. ಈ ವ್ಯಕ್ತಿಗಳು ಯಶಸ್ಸಿನ ಹಾದಿಯಲ್ಲಿ ನಡೆಯುವುದಲ್ಲದೆ ಇತರರನ್ನು ಆ ದಾರಿಯಲ್ಲಿ ಮುನ್ನಡೆಸುತ್ತಾರೆ. ಈ ಚಿಹ್ನೆಯನ್ನು ಹೊಂದಿರುವ ಜನರು ಜಗತ್ತನ್ನು ಸಹ ಗೆಲ್ಲುತ್ತಾರಂತೆ! ಜಗತ್ತನ್ನು ಗೆದ್ದ ಅಲೆಕ್ಸಾಂಡರ್ ತನ್ನ ತೋಳಿನ ಮೇಲೆ ಈ X ಚಿಹ್ನೆಯನ್ನು ಹೊಂದಿದ್ದನು. ಅಲ್ಲದೆ, ಅಲೆಕ್ಸಾಂಡರ್ ಕೂಡ ತನ್ನ ಅಂಗೈ ಗೆರೆಗಳ ಮೇಲೆ ಬಲವಾದ ನಂಬಿಕೆಯನ್ನು ಹೊಂದಿದ್ದನು ಎಂದು ಇತಿಹಾಸ ಹೇಳುತ್ತದೆ.
ಮಾಸ್ಕೋದ ಎಚ್ಟಿಐ ವಿಶ್ವವಿದ್ಯಾನಿಲಯದ ವಿಜ್ಞಾನಿಗಳು ಅನೇಕ ಕೈ ರೇಖೆಗಳ ಮೇಲೆ ಈಗಾಗಲೇ ಸಂಶೋಧನೆ ಮಾಡಿದ್ದಾರೆ. ಅಮೆರಿಕದ ಮಾಜಿ ಅಧ್ಯಕ್ಷ ಅಬ್ರಹಾಂ ಲಿಂಕನ್ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಕೈಯಲ್ಲೂ ಈ X ಗುರುತು ಇತ್ತು ಎಂದು ವಿಜ್ಞಾನಿಗಳು ಮಾಹಿತಿ ನೀಡಿದ್ದಾರೆ.
ಸಂಶೋಧನೆಯ ಪ್ರಕಾರ, ಎರಡೂ ಕೈಗಳಲ್ಲಿ X ಗುರುತು ಇದ್ದರೆ, ಅವರು ಪ್ರತಿಭಾವಂತರು ಹಾಗೂ ಪ್ರಬಲರು ಎಂಬರ್ಥವನ್ನು ಸೂಚಿಸುತ್ತದೆ. ಅಲ್ಲದೆ X ಗುರುತು ಹೊಂದಿರುವರಿಗೆ ಮೋಸ ಮಾಡುವುದು ತುಂಬಾನೇ ಕಷ್ಟ ಎನ್ನಲಾಗಿದೆ. ಇನ್ನು X ಚಿಹ್ನೆಯನ್ನು ಹೊಂದಿರುವ ಜನರು ದೈಹಿಕವಾಗಿ ಮತ್ತು ಮಾನಸಿಕವಾಗಿ ತುಂಬಾ ಬಲಶಾಲಿಯಾಗಿರುತ್ತಾರೆ. ಈ ಜನರು ಸಮಾಜದಲ್ಲಿ ಪ್ರಸಿದ್ಧರು ಮತ್ತು ಹೆಚ್ಚು ಗೌರವಾನ್ವಿತರು ಎಂದು ಸಂಶೋಧಕರು ಹೇಳಿದ್ದಾರೆ. (ಏಜೆನ್ಸೀಸ್)
ನಿಮ್ಮ ಅಂಗೈನಲ್ಲಿ M ಚಿಹ್ನೆ ಇದೆಯಾ ನೋಡಿ… ಇದರ ಅರ್ಥ ತಿಳಿದ್ರೆ ನಿಮ್ಮ ಹುಬ್ಬೇರೋದು ಖಚಿತ!
ಮಾಂಸಕ್ಕಾಗಿ ಕೊಲ್ಲಬೇಡಿ ನಾವು ಸಹಾಯ ಮಾಡ್ತೀವಿ: ನಮೀಬಿಯಾ ಪ್ರಾಣಿಗಳ ರಕ್ಷಣೆಗೆ ಮಿಡಿದ ಅನಂತ್ ಅಂಬಾನಿಯ ವಂತಾರಾ
ಮನುಷ್ಯರ ವಿರುದ್ಧ ಸೇಡಿನ ಸಮರ: ತೋಳಗಳ ಅಟ್ಟಹಾಸ ಹಿಂದಿದೆ ಮರಿಗಳನ್ನು ಕಳೆದುಕೊಂಡ ಆಕ್ರಂದನ