

ಲಾಹೋರ್: ಭಾರತಕ್ಕೆ ಅತೀ ಅಗತ್ಯ ಬೇಕಾದ ಉಗ್ರ ಹಫೀಜ್ ಸಯೀದ್ಗೆ ಪಾಕಿಸ್ತಾನದ ಉಗ್ರ ನಿಗ್ರಹ ಕೋರ್ಟ್ ಒಂದು ಇಂದು 15 ವರ್ಷಗಳ ಜೈಲು ಶಿಕ್ಷೆ ಘೋಷಿಸಿದೆ. ಟೆರರ್ ಫಂಡಿಂಗ್ ಕೇಸ್ಗಳ ವಿಚಾರಣೆ ನಡೆಸುತ್ತಿರುವ ಕೋರ್ಟ್ ಈಗಾಗಲೇ ಟೆರರ್ ಫಂಡಿಂಗ್ನ ನಾಲ್ಕು ಕೇಸ್ಗಳಲ್ಲಿ ಒಟ್ಟು 21 ವರ್ಷಗಳ ಕಾರಾಗೃಹ ವಾಸದ ಶಿಕ್ಷೆ ವಿಧಿಸಿದೆ.
15 ವರ್ಷಗಳ ಸೆರೆವಾಸದ ಜತೆಗೆ ಹಫೀಜ್ 2 ಲಕ್ಷ ರೂಪಾಯಿ ದಂಡವನ್ನೂ ಪಾವತಿಸಬೇಕು. ಕೋರ್ಟ್ ಇಂದು ವಿಧಿಸಿದ ತೀರ್ಪು ಸೇರಿದರೆ 70 ವರ್ಷ ವಯಸ್ಸಿನ ಹಫೀಜ್ ಸಯೀದ್ ಐದು ಕೇಸ್ಗಳಲ್ಲಿ ಒಟ್ಟು 36 ವರ್ಷ ಸೆರೆವಾಸವನ್ನು ಕೋಟ್ ಲಾಖ್ಪತ್ ಕಾರಾಗೃಹದಲ್ಲಿ ಅನುಭವಿಸಬೇಕಾಗುತ್ತದೆ.
ಜಮಾತ್ ಉದ್ ದಾವಾ (ಜೆಯುಡಿ) ಸಂಸ್ಥಾಪಕ ಹಫೀಜ್ ಸಯೀದ್ ಮುಂಬಯಿ ಉಗ್ರ ದಾಳಿಯ ಸಂಚುಕೋರನಾಗಿದ್ದು, ಆತನನ್ನು ಹಸ್ತಾಂತರಿಸುವಂತೆ ಭಾರತ ಬೇಡಿಕೆ ಇರಿಸಿದೆ. ಜಾಗತಿಕವಾಗಿಯೂ ಆತನನ್ನು ಉಗ್ರನೆಂದು ಘೋಷಿಸಿದ್ದು, ಬಂಧನದಲ್ಲಿರಿಸುಂವತೆ ಪಾಕಿಸ್ಥಾನದ ಮೇಲೆ ಅಮೆರಿಕವೂ ಒತ್ತಡ ಹೇರಿತ್ತು. (ಏಜೆನ್ಸೀಸ್)
ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್ಗಾಗಿ ನಮ್ಮ ಫೇಸ್ಬುಕ್ ಪುಟ ಲೈಕ್ ಮಾಡಿ ಮತ್ತು ಫಾಲೋ ಮಾಡಿ..