More

    ಕುಡಿದ ನಶೆಯಲ್ಲಿ ಕೆಲಸಗಾರನಿಗೆ ಹಿಗ್ಗಾಮುಗ್ಗಾ ಥಳಿಸಿದ ಖ್ಯಾತ ಗಾಯಕ; ವಿಡಿಯೋ ವೈರಲ್

    ನವದೆಹಲಿ: ಆರ್ಥಿಕ ಸಂಕಷ್ಟದಿಂದಾಗಿ ತೀವ್ರವಾಗಿ ಕಂಗೆಟ್ಟಿರುವ ಪಾಕಿಸ್ತಾನ ಜಾಗತಿಕ ವೇದಿಕೆಗಳಲ್ಲಿ ತೀವ್ರ ಅಪಹಾಸ್ಯಕ್ಕೆ ಗುರಿಯಾಗುತ್ತಿದ್ದು, ಅಲ್ಲಿನ ರಾಜಕಾರಣಿಗಳು, ಸಿನಿಮಾ ನಟರು, ಮಾಜಿ ಕ್ರಿಕೆಟಿಗರು ಹಾಗೂ ಸೇನೆ ಅಧಿಕಾರಿಗಳು ಭಾರತದ ಬಗ್ಗೆ ಹೇಳಿಕೆಗಳನ್ನು ನೀಡಿ ಟ್ರೋಲ್​ ಆಗುತ್ತಿರುವುದು ಹೊಸ ವಿಚಾರವೇನಲ್ಲ.

    ಇದೀಗ ಹೊಸ ವಿಚಾರದಲ್ಲಿ ಪಾಕಿಸ್ತಾನ ಮೂಲದ ಖ್ಯಾತ ಗಾಯಕರೊಬ್ಬರು ಕ್ಷುಲಕ ವಿಚಾರಕ್ಕೆ ಕೆಲಸಗಾರನ ಮೇಲೆ ಚಪ್ಪಲಿಯಿಂದ ಹೊಡೆದು ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ಸಾಕಷ್ಟು ಖಂಡನೆಗೆ ಗುರಿಯಾಗಿದೆ.

    ಇದನ್ನೂ ಓದಿ: ಇಂಡಿಯಾ ಒಕ್ಕೂಟಕ್ಕೆ ಶಾಕ್​; ಮುಖ್ಯಮಂತ್ರಿ ಸ್ಥಾನಕ್ಕೆ ನಿತೀಶ್​ ಕುಮಾರ್​ ರಾಜೀನಾಮೆ

    ವೈರಲ್ ಆಗಿರುವ ವಿಡಿಯೋದಲ್ಲಿ ಲೆಜೆಂಡರಿ ಪಾಕಿಸ್ತಾನಿ ಗಾಯಕ ರಾಹತ್ ಫತೇಹ್ ಅಲಿ ಖಾನ್ ಕುಡಿದ ಮತ್ತಿನಲ್ಲಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಮಾಡುತ್ತಿರುವುದನ್ನು ನೋಡಬಹುದಾಗಿದೆ. ಬಳಿಕ ನನ್ನ ಬಾಟಲಿ ಎಲ್ಲಿದೆ ಎಂದು ಕೇಳುವ ಅವರು ಏಕಾಏಕಿ ತಮ್ಮ ಚಪ್ಪಲಿಯನ್ನು ತೆಗೆದು ವ್ಯಕ್ತಿಯನ್ನು ನೆಲಕ್ಕೆ ತಳ್ಳಿ ಅಮಾನುಷವಾಗಿ ಹಲ್ಲೆ ನಡೆಸುತ್ತಿರುವುದನ್ನು ನೋಡಬಹುದಾಗಿದೆ.

    ಇತ್ತ ವಿಡಿಯೋ ವೈರಲ್​ ಆದ ಬೆನ್ನಲ್ಲೇ ಸ್ಪಷ್ಟನೆ ನೀಡಿರುವ ರಾಹತ್​ ಫತೇಹ್​ ಅಲಿ ಖಾನ್​ ಕಾಣೆಯಾಗಿದ್ದ ಬಾಟಲಿಯಲ್ಲಿ ಇದಿದ್ದು, ಮದ್ಯವಲ್ಲ ಪವಿತ್ರವಾದ ನೀರು ಎಂದು ಹೇಳಿದ್ದಾರೆ. ವ್ಯಕ್ತಿ ಮೇಲೆ ಹಲ್ಲೆ ಮಾಡಿರುವ ಕುರಿತು ಯಾವುದೇ ಮಾತನಾಡದಿರುವುದು ಹಲವರ ಆಕ್ಷೇಪಕ್ಕೆ ಗುರಿಯಾಗಿದೆ. ಗಾಯಕ ರಾಹತ್ ಫತೇಹ್ ಅಲಿ ಈ ರೀತಿ ಸುದ್ದಿಯಾಗುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ವಿದೇಶಿ ಹಣ ಕಳ್ಳಸಾಗಾಣೆ ಮಾಡಿದ ಆರೋಪದ ಮೇಲೆ ಅವರನ್ನು ವಶಕ್ಕೆ ಪಡೆದು ಬಿಡುಗಡೆ ಮಾಡಲಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts