ಮೀನ್ ಸಾರು ಮಾಡಲು ಹೆಲ್ಪ್​ ಮಾಡು ಎಂದಿದ್ದೆ ತಪ್ಪಾಯ್ತು; ಅಣ್ಣನ ಪ್ರಾಣ ತೆಗೆದೆಬಿಟ್ಟ

FIsh Sambar
Published on

ಅಮರಾವತಿ: ಮೀನಿನ ಸಾರನ್ನು ತಯಾರಿಸಲು ಮಸಾಲೆ ಅರೆಯುವ ವಿಚಾರವಾಗಿ ಶುರುವಾದ ಗಲಾಟೆ ಒಬ್ಬರ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಆಂಧ್ರಪ್ರದೇಶದ ಶ್ರೀ ಸತ್ಯಸಾಯಿ ಜಿಲ್ಲೆಯಲ್ಲಿ ನಡೆದಿದೆ. ಘಟನೆ ಸಂಬಂಧ ಪೊಲೀಸರು ಆರೋಪಿ ವೇಂಕಟೇಶ್​ನನ್ನು ವಶಕ್ಕೆ ಪಡೆದಿದ್ದು, ಮೃತ ದುರ್ದೈವಿಯನ್ನು ಸಂಜೀವ್​ ಎಂದು ಗುರುತಿಸಲಾಗಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು, ಶ್ರೀ ಸತ್ಯಸಾಯಿ ಜಿಲ್ಲೆಯ ತನಕಲ್ಲು ಮಂಡಲದ ನಡಿಮಿಕುಂಟಪಲ್ಲಿ ಗ್ರಾಮದ ಸಂಜೀವ್ ಮತ್ತು ವೆಂಕಟೇಶ್ ಇಬ್ಬರು ಅಣ್ಣ ತಮ್ಮ ಎಂದು ತಿಳಿದು ಬಂದಿದೆ. ಇವರಿಬ್ಬರು ಜೀವನೋಪಾಯಕ್ಕಾಗಿ ಕೂಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.

Assault

ಇತ್ತೀಚಿಗೆ ಸಂಜೀವ್​ ಪತ್ನಿ ಊರಿಗೆ ತೆರಳಿದ್ದು, ಆತ ಮಾರುಕಟ್ಟೆಗೆ ತೆರಳಿ ಮೀನು ತಂದು ತಮ್ಮ ವೆಂಕಟೇಶ್​ ಪತ್ನಿಗೆ ನೀಡಿ ಸಾಂಬಾರ್​ ತಯಾರಿಸುವಂತೆ ಸೂಚಿಸಿದ್ದಾನೆ. ಬಳಿಕ ಅಣ್ಣ ತಮ್ಮ ಇಬ್ಬರು ಕುಡಿಯಲು ಶುರು ಮಾಡಿದ್ದು, ಮೀನಿನ ಸಾರು ಬೇಗ ಬೇಯಿಸುವ ಸಲುವಾಗಿ, ಸಂಜೀವ್ ವೆಂಕಟೇಶನನ್ನು ಮಸಾಲೆ ತಯಾರಿಸಲು ಸಹಾಯ ಮಾಡುವಂತೆ ಪದೇ ಪದೇ ಕೀಟಲೆ ಮಾಡಿದ್ದಾನೆ.

ಇದರಿಂದ ಇಬ್ಬರ ನಡುವೆ ಜಗಳ ಶುರುವಾಗಿದ್ದು, ಕಿರಿಯ ಸಹೋದರ ವೆಂಕಟೇಶ್ ಕುಡಿದ ಮತ್ತಿನಲ್ಲಿ ದೊಣ್ಣೆ ತಂದು ಅಣ್ಣ ಸಂಜೀವನ ಮೇಲೆ ಹಲ್ಲೆ ನಡೆಸಿದ್ದಾನೆ. ಪರಿಣಾಮ ಸಂಜೀವ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಮೀನಿನ ಸಾರಿಗೆ ಮಸಾಲೆ ಅರೆಯುವ ವಿಚಾರವಾಗಿ ಶುರುವಾದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದೆ. ಘಟನೆ ಸಂಬಂಧ ಆರೋಪಿಯನ್ನು ವಶಕ್ಕೆ ಪಡೆಯಲಾಗಿದ್ದು, ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net