More

    ಬಿಗ್​ಬಾಸ್​ ಗ್ರ್ಯಾಂಡ್​ ಫಿನಾಲೆ; ಶೋ ಮುಗಿಯುವುದಕ್ಕೂ ಮುನ್ನ ಸ್ಫರ್ಧಿಗಳಿಗೆ ಸಿಕ್ತು ಬಂಪರ್ ಆಫರ್​

    ಬೆಂಗಳೂರು: ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್​ಬಾಸ್​ ಅಂತಿಮ ಹಂತ ತಲುಪಿದ್ದು, ಫಿನಾಲೆಗೆ ಮೊದಲ ಸಂಚಿಕ ಮುಗಿದಿದ್ದು, ಎರಡನೇ ಸಂಚಿಕೆಗಾಗಿ ವೀಕ್ಷಕರು ಕಾಯುತ್ತಿದ್ದಾರೆ. ಈ ಬಾರಿಯ ಬಿಗ್​ಬಾಸ್​ ಆವೃತ್ತಿ ಜನರ ಗಮನವನ್ನು ಹೆಚ್ಚು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಈಗಾಗಲೇ ಫಿನಾಲೆ ಆರಂಭವಾಗಿದ್ದು, ಮೊದಲ ಸಂಚಿಕೆಯಲ್ಲಿ ತುಕಾಲಿ ಸಂತೋಷ್​ ಎಲಿಮಿನೇಟ್​ ಆಗಿ ಮನೆಯಿಂದ ಹೊರ ಬಂದಿದ್ದಾರೆ.

    ಸಂಗೀತಾ ಶೃಂಗೇರಿ, ವರ್ತೂರು ಸಂತೋಷ್, ವಿನಯ್ ಗೌಡ, ಡ್ರೋನ್ ಪ್ರತಾಪ್, ಕಾರ್ತಿಕ್ ಮಹೇಶ್ ಈ ಐವರ ಪೈಕಿ ಒಬ್ಬರು ವಿನ್ನರ್​ ಆಗಲಿದ್ದು, ರನ್ನರ್​ ಅಪ್​ ಹೊರತುಪಡಿಸಿದರೆ ಉಳಿದವರು ಮನೆಗೆ ಬರಿಗೈಲಿ ತೆರಳಲಿದ್ದಾರೆ. ಆದರೆ, ಬಿಗ್​ಬಾಸ್​ ಮುಗಿಯುವುದಕ್ಕೂ ಮುನ್ನವೇ ಮನೆಯ ಇಬ್ಬರು ಸ್ಫರ್ಧಿಗಳಿಗೆ ಬಂಪರ್​ ಆಫರ್​ ಒಂದು ದೊರೆತ್ತಿದ್ದು, ಉಳಿದ ಸದಸ್ಯರ ಹುಬ್ಬೇರುವಂತೆ ಮಾಡಿದೆ.

    ಬಿಗ್​ಬಾಸ್​ ಮನೆಗೆ ಶನಿವಾರ ಗಿಚ್ಚಿ ಗಿಲಿಗಿಲಿ ತಂಡ ಭೇಟಿ ನೀಡಿತ್ತು. ಈ ವೇಳೆ ನಿರೂಪಕ ನಿರಂಜನ್​ ದೇಶಪಾಂಡೆ ಮನೆಯ ಸದಸ್ಯರನ್ನು ಮುಂದೆ ಕೂರಿಸಿಕೊಂಡು ತಮಾಷೆಯ ಸ್ಕಿಟ್ ಒಂದನ್ನು ಮಾಡಿದರು. ಕಿಚ್ಚ ಸುದೀಪ್​ ಅವರ ನಟನೆಯು ವೀರ ಮದಕರಿ ಚಿತ್ರದ ಹಾಡೊಂದನ್ನು ಬಳಸಿಕೊಂಡು ಸ್ಪರ್ಧಿಗಳ ವ್ಯಕ್ತಿತ್ವವನ್ನು ತಮಾಷೆಯಾಗಿ ಹಾಡಿದರು. ನಿರಂಜನ್​ರ ಹಾಡು ಕೇಳಿ ಮನೆಯ ಸದಸ್ಯರು ನಕ್ಕು ಸುಸ್ತಾಗಿದ್ದರು.

    ಇದನ್ನೂ ಓದಿ: ನಾಯಿಯನ್ನು ಪ್ರತಿನಿತ್ಯ ವಾಕಿಂಗ್​ ಕರೆದುಕೊಂಡು ಹೋಗುವ ಈಕೆಯ ತಿಂಗಳ ಸಂಪಾದನೆ ಕೇಳಿದರೆ ದಂಗಾಗುತ್ತೀರಾ

    ಈ ವೇಳೆ ನಿರಂಜನ್​ ದೇಶಪಾಂಡೆ ಮಹತ್ವದ ಘೋಷಣೆ ಒಂದನ್ನು ಮಾಡಿದ್ದು, ಬಿಗ್​ಬಾಸ್​ ಮುಗಿದ ಕೂಡಲೇ ಸ್ಫರ್ಧಿಗಳಾದ ವರ್ತೂರ್​ ಸಂತೋಷ್​ ಹಾಗೂ ಡ್ರೋನ್​ ಪ್ರತಾಪ್​ ಗಿಚ್ಚಿ ಗಿಲಿಗಿಲಿಯನ್ನು ಕೂಡಿಕೊಳ್ಳಲಿದ್ದಾರೆ ಎಂದು ಘೋಷಿಸಿದ್ದಾರೆ. ನಿರಂಜನ್​ ದೇಶಪಾಂಡೆ ಈ ವಿಚಾರವನ್ನು ಘೋಷಿಸುತ್ತಿದ್ದಂತೆ ಬಿಗ್​ಬಾಸ್​ ಮನೆಮಂದಿ​ ಒಂದು ಕ್ಷಣ ಆಶ್ವರ್ಯಕ್ಕೆ ಒಳಗಾಗಿದ್ದು ತಕ್ಷಣವೇ ಒಬ್ಬರ ಮುಖವನ್ನು ಮತ್ತೊಬ್ಬರು ನೋಡಿಕೊಂಡಿದ್ದಾರೆ.

    ಕೊನೆಗೆ, ವರ್ತೂರು ಸಂತೋಷ್ ಅನ್ನು ವೇದಿಕೆಗೆ ಕರೆದ ನಿರಂಜನ್, ವರ್ತೂರು ಕೈಯಲ್ಲಿ ಖಾಲಿ ಪೇಪರ್​ಗೆ ಸಹಿ ಹಾಕಿಸಿಕೊಂಡರು. ನೀವು ನಮ್ಮ ತಂಡ ಸೇರಲಿದ್ದೀರಿ ಮಾತ್ರವಲ್ಲದೆ, ನಮ್ಮ ಗಿಚ್ಚಿ-ಗಿಲಿಗಿಲಿ ಹೊಸ ಸೀಸನ್ ಗೆ ಸ್ಪಾನ್ಸರ್ ನೀಡುತ್ತಿದ್ದೀರಿ ಎಂದು ಈ ಒಪ್ಪಂದದಲ್ಲಿ ಬರೆದಿದೆ ಎಂದರು. ನಿರಂಜನ್ ಮಾತಿಗೆ ವರ್ತೂರು ಶಾಕ್ ಆದರು. ನಿರಂಜನ್ ಹೇಳಿದಂತೆ ಡ್ರೋನ್ ಪ್ರತಾಪ್ ಹಾಗೂ ವರ್ತೂರು ಸಂತೋಷ್ ನಿಜಕ್ಕೂ ಗಿಚ್ಚಿ-ಗಿಲಿಗಿಲಿ ಸೇರುತ್ತಿಲ್ಲ. ಬದಲಿಗೆ ನಿರಂಜನ್ ದೇಶಪಾಂಡೆ ತಮಾಷೆ ಮಾಡಿದ್ದಾಗಿ ಮನೆಯಿಂದ ಹೊರಹೋಗುವ ಮುನ್ನ ಸ್ಪಷ್ಟನೆ ನೀಡಿ ತೆರಳಿದ್ದಾರೆ.

    ಫಿನಾಲೆ ಪ್ರಯುಕ್ತ ಬಿಗ್​ಬಾಸ್​ ಮನೆಯೊಳಗೆ ಬಂದಿದ್ದ ಗಿಚ್ಚಿ ಗಿಲಿಗಿಲಿ ತಂಡ ಪ್ರತಿ ಸದಸ್ಯರ ಬಗ್ಗೆ ಒಂದೊಂದು ಹಾಡುಗಳನ್ನು ಕಟ್ಟಿಕೊಂಡು ಬಂದಿದ್ದರು. ಸದಸ್ಯರು ಮನೆಯಲ್ಲಿ ಆಡಿದ ರೀತಿ, ಅವರ ವ್ಯಕ್ತಿತ್ವವಕ್ಕೆ ಸೂಟ್ ಆಗುವಂತೆ ತಮಾಷೆಭರಿತ ಹಾಡುಗಳಿಗೆ ಹೆಜ್ಜೆ ಹಾಕಿ ಸದಸ್ಯರು ಹಾಗೂ ಪ್ರೇಕ್ಷಕರನ್ನು ಕೆಲಕಾಲ ಮನರಂಜಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts