More

    ನಾಯಿಯನ್ನು ಪ್ರತಿನಿತ್ಯ ವಾಕಿಂಗ್​ ಕರೆದುಕೊಂಡು ಹೋಗುವ ಈಕೆಯ ತಿಂಗಳ ಸಂಪಾದನೆ ಕೇಳಿದರೆ ದಂಗಾಗುತ್ತೀರಾ

    ವದೆಹಲಿ: ನಾವು ನೋಡಿದಂತೆ ಹೆಚ್ಚಿನ ಮನೆಗಳಲ್ಲಿ ನಾಯಿಯನ್ನು ಸಾಕುಪ್ರಾಣಿಯಾಗಿ ಸಾಕಲಾಗುತ್ತದೆ. ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎಲ್ಲರಿಗೂ ನಾಯಿ ಎಂದರೆ ತುಂಬಾ ಇಷ್ಟ. ಅದರಲ್ಲಿ ಅನೇಕ ಜನರು ನಾಯಿಗಳನ್ನು ಸ್ಟೇಟಸ್ ಸಿಂಬಲ್ ಆಗಿ ಸಾಕುತ್ತಾರೆ. ಅದೇ ರೀತಿ ಇ್ಲಲಿ ಮಹಿಳೆಯೊಬ್ಬರು ನಾಯಿಯನ್ನು ವಾಕಿಂಗ್​ ಕರೆದುಕೊಂಡು ಹೋಗುವ ಮೂಲಕ ತಿಂಗಳಿಗೆ ಲಕ್ಷಾಂತರ ರೂಪಾಯಿ ಸಂಪಾದನೆ ಮಾಡುತ್ತಿದ್ದಾರೆ.

    ನಾರ್ವಿಚ್​ ಮೂಲದ ಯುವತಿ ಗ್ರೇಸ್ ಬಟ್ಟರಿ ಬರಿಸ್ಟಾ(28) ಕಾಫಿ ಕೆಫೆಯಲ್ಲಿ ಕೆಲಸ ಮಾಡುತ್ತಿದ್ದರು. ತಮ್ಮ ಮನೆಯಲ್ಲಿ ನಾಯಿಯೊಂದನ್ನು ಸಾಕಿದ್ದು, ಬಿಡುವಿನ ಸಮಯದಲ್ಲಿ ಅದನ್ನು ವಾಕಿಂಗ್​ ಕರೆದುಕೊಂಡು ಹೋಗುತ್ತಿದ್ದರು. ಆದರೆ, ಮುಂದಿನ ದಿನಗಳಲ್ಲಿ ಇದನ್ನೇ ವೃತ್ತಿಯಾಗಿಸಿಕೊಂಡ ಈಕೆ ಈಗ ತಿಂಗಳಿಗೆ ಲಕ್ಷಾಂತರ ರೂಪಾಯಿ ಸಂಪಾದನೆ ಮಾಡುತ್ತಿರುವುದು ಎಲ್ಲರ ಹುಬ್ಬೇರಿಸಿದೆ.

    ಒಂದು ದಿನ ಅಕೇಯ ಸ್ನೇಹಿತೆ ತಮಾಷೆಯಾಗಿ ನೀನು ನಿನ್ನ ನಾಯಿಯನ್ನು ವಾಕಿಂಗ್​​​ಗೆ ಕರೆದುಕೊಂಡು ಹೋಗುವಾಗ, ನನ್ನ ಮನೆಯ ನಾಯಿಯನ್ನು ಏಕೆ ಕರೆದುಕೊಂಡು ಹೋಗಬಾರದು ಎಂದು ಹೇಳಿದ್ದಾಳೆ. ಇಲ್ಲಿಂದ ಪ್ರಾರಂಭವಾದ ಈಕೆಯ ವೃತ್ತಿ ಇದೀಗಾ ದಿನದಲ್ಲಿ ನೂರಾರು ನಾಯಿಗಳನ್ನು ವಾಕಿಂಗ್​​ಗೆ ಕರೆದುಕೊಂಡು ಹೋಗುವಷ್ಟರ ಮಟ್ಟಿಗೆ ಬಂದು ತಲುಪಿದೆ.

    Dogwalker

    ಇದನ್ನೂ ಓದಿ: ಪ್ರೇಕ್ಷಕರಲ್ಲಿ ನಿರಾಸೆ ಮೂಡಿಸಿದ ಅನಿಮಲ್​; ಚಿತ್ರತಂಡ ಕೊಟ್ಟ ಸ್ಪಷ್ಟನೆ ಹೀಗಿದೆ

    ಇದನ್ನೇ ವೃತ್ತಿಯನ್ನಾಗಿಸಿಕೊಂಡ ಗ್ರೇಸ್ ಬರಿಸ್ಟಾ 2019ರಲ್ಲಿ ಇದಕ್ಕಾಗಿಯೇ ಒಂದು ಕಂಪನಿಯನ್ನು ತೆರೆದಳು ಮತ್ತು ಪ್ರತಿನಿತ್ಯ ಆರು ಘಂಟೆಗಳ ಕಾಲ ನಾಯಿಯನ್ನು ವಾಕಿಂಗ್​ ಕರೆದುಕೊಂಡು ಹೋಗಲು ಪ್ರಾರಂಭಿಸಿದ್ದಳು. ಅದಕ್ಕೆ ಪ್ರತಿಯಾಗಿ ನಾಯಿ ಮಾಲೀಕರು ಅವಳಿಗೆ ಹಣವನ್ನು ನೀಡುತ್ತಾರೆ. ಆರಂಭದಲ್ಲಿ ಕೇವಲ ಎರಡು-ನಾಲ್ಕು ಗ್ರಾಹಕರನ್ನು ಹೊಂದಿದ್ದ ಈಕೆ ಈಗ ನೂರಾರು ಗ್ರಾಹಕರನ್ನು ಹೊಂದಿದ್ದಾಳೆ. ಇದರಿಂದಾಗಿ ಅವರು 42 ಸಾವಿರ ಪೌಂಡ್ ಗಳಿಸುತ್ತಾಳೆ. ಖರ್ಚು ತೆಗೆದರೆ ತಿಂಗಳಿಗೆ ಸರಿ ಸುಮಾರು 34 ಲಕ್ಷ ರೂ. ಸಂಪಾದಿಸುತ್ತಾಳೆ.

    ಇತ್ತ ಈ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗುತ್ತಿದ್ದಂತೆ ಕಮೆಂಟ್​ ಮಾಡಿರುವ ನೆಟ್ಟಿಗರು ನಿಮ್ಮ ಕಂಪನಿಯಲ್ಲಿ ಕೆಲಸ ಇದ್ದರೆ ಹೇಳಿ ನಾವು ಈ ಕೂಡಲೇ ಸೇರುತ್ತೇವೆ ಎಂದು ಕಮೆಂಟ್​ ಮಾಡಿದ್ದಾರೆ. ಇತ್ತ ಮಹಿಳೆಯ ನಡೆಗೆ ಹಲವರು ಮೆಚ್ಚುಗೆ ಸೂಚಿಸಿ ಕಮೆಂಟ್​ ಮಾಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts