

ಚೆನ್ನೈ: ಕಾಲಿವುಡ್ನಲ್ಲಿ ಪ್ರತಿಯೊಬ್ಬ ನಟನು ತಮ್ಮದೇ ಆದ ಅಭಿಮಾನಿ ಬಳವನ್ನು ಹೊಂದಿದ್ದಾರೆ. ಈ ಪೈಕಿ ನೋಡುವುದಾದರೆ ಸೂಪರ್ಸ್ಟಾರ್ ರಜನಿಕಾಂತ್, ದಳಪತಿ ವಿಜಯ್ ಅಪಾರ ಅಭಿಮಾನಿಗಳನ್ನು ಹೊಂದಿದ್ದು, ಆಗಿಂದಾಗೆ ಸಾಮಾಜಿಕ ಜಾಲತಾಣಗಳಲ್ಲಿ ಇವರ ಅಭಿಮಾನಿಗಳ ನಡುವೆ ಸ್ಟಾರ್ವಾರ್ ನಡೆಯುತ್ತಿರುತ್ತದೆ.
ತಮ್ಮ ಐಶ್ವರ್ಯ ನಿರ್ದೇಶನದ ಲಾಲ್ ಸಲಾಂ ಚಿತ್ರದ ಆಡಿಯೋ ಲಾಂಚ್ನಲ್ಲಿ ಸ್ಟಾರ್ವಾರ್ ಕುರಿತು ಮಾತನಾಡಿರುವ ರಜನಿಕಾಂತ್, ನಾನು ಈ ಹಿಂದೆ ಹೇಳಿದ ಕಾಗೆ ಹಾಗೂ ಹೆದ್ದಿನ ಕಥೆಯನ್ನು ವಿಭಿನ್ನವಾಗಿ ವ್ಯಾಖ್ಯಾನಿಸಲಾಗಿದೆ. ಇದು ನನಗೆ ತುಂಬಾ ನೋವನ್ನುಂಟು ಮಾಡಿದೆ ಎಂದು ರಜನಿ ಹೇಳಿದ್ದಾರೆ.
ನಾನು ಜೈಲರ್ ಆಡಿಯೋ ಬಿಡುಗಡೆ ಕಾರ್ಯಕ್ರಮದಲ್ಲಿ ಹೇಳಲಾದ ಕಾಗೆ ಹಾಗೂ ಹದ್ದಿನ ಕಥೆಯನ್ನು ಬೇರೊಂದು ರೀತಿಯಲ್ಲಿ ಅರ್ಥೈಸಲಾಗಿದ್ದು, ಇದು ನನಗೆ ತುಂಬಾ ನೋವುಂಟು ಮಾಡಿದೆ. ವಿಜಯ್ ನನ್ನ ಕಣ್ಣ ಮುಂದೆ ಬೆಳೆದ ಹುಡುಗ. ಧರ್ಮತಿನ್ ತಲೈವನ್ ಚಿತ್ರದ ಚಿತ್ರೀಕರಣ ವೇಳೆ ಆತನಿಗೆ 13 ವರ್ಷ ಶೂಟಿಂಗ್ ಮುಗಿದ ಬಳಿಕ ಎಸ್.ಎ. ಚಂದ್ರಶೇಖರ್ ಆತನನ್ನು ನನಗೆ ಪರಿಚಯಿಸಿದ್ದರು. ವಿಜಯ್ ನನಗೆ ನಟನೆ ಕಡೆ ಒಲವಿರುವುದಾಗಿ ಹೇಳಿದ್ದರು. ಆದರೆ, ನಾನು ಮೊದಲು ವಿಧ್ಯಾಭ್ಯಾಸ ಮುಗಿಸಿಕೊಳ್ಳಿ ಎಂದುಇ ಸಲಹೆ ನೀಡಿದ್ದೆ.
ಆ ಬಳಿಕ ವಿಜಯ್ ನಟನಾಗಿ ಬೆಳೆದು ಇಂದು ಉನ್ನತ ಸ್ಥಾನದಲ್ಲಿದ್ದಾನೆ. ಆತನ ಶಿಸ್ತು, ಪರಿಶ್ರಮ, ಪ್ರತಿಭೆಯೆ ಮುಖ್ಯ ಕಾರಣ. ಆತ ಮುಂದಿನ ದಿನಗಳಲ್ಲಿ ರಾಜಕೀಯಕ್ಕೆ ಬರುತ್ತಾನೆಂದು ಹೇಳುತ್ತಾರೆ. ನನ್ನ ಮತ್ತು ಅವನ ನಡುವೆ ಪೈಪೋಟಿ ಇದೆ ಎಂದು ಮಾತನಾಡುತ್ತಾರೆ. ಆದರೆ, ವಿಜಯ್ ಹಾಗೂ ನನ್ನ ಪ್ರಕಾರ ನಮಗೆ ನಾವೇ ಸ್ಫರ್ಧಿಗಳು ನಮಗೆ ಯಾರು ಪ್ರತಿಸ್ಫರ್ಧಿಗಳಿಲ್ಲ. ನಾನು ಅಭಿಮಾನಿಗಳಲ್ಲಿ ಕೇಳಿಕೊಳ್ಳುವುದೇನೆಂದರೆ ದಯವಿಟ್ಟು ನಮ್ಮ ನಡುವ ಹೋಲಿಕೆ ಮಾಡಬೇಡಿ ಎಂದು ಸೂಪರ್ಸ್ಟಾರ್ ರಜಿನಿಕಾಂತ್ ವಿನಂತಿಸಿದ್ದಾರೆ.