ನವದೆಹಲಿ: 2025ರ ಫೆಬ್ರವರಿ-ಮಾರ್ಚ್ ತಿಂಗಳಲ್ಲಿ ಪಾಕಿಸ್ತಾನದ ಆತಿಥ್ಯದಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿ (Champions Trophy) ಶುರುವಾಗುವುದಕ್ಕೂ ಮುಂಚಿನಿಂದಲೇ ಒಂದು ಕಾರಣಕ್ಕೆ ಸದ್ದು ಮಾಡುತ್ತಿದೆ. ಭಾರತ (India) ಹಾಗೂ ಪಾಕಿಸ್ತಾನ (Pakistan) ನಡುವಿನ ಕಿತ್ತಾಟದಿಂದಾಗಿ ಈಗಾಗಲೇ ಟೂರ್ನಿ ಸಾಕಷ್ಟು ಹೈಪ್ ಪಡೆದುಕೊಂಡಿದ್ದು, ಹಾಲಿ ಚಾಂಪಿಯನ್ಸ್ ನೆಲದಲ್ಲಿ ಯಾವುದೇ ಕಾರಣಕ್ಕೂ ಆಡುವುದಿಲ್ಲ ಎಂದು ಭಾರತ ಕಡ್ಡಿ ಮುರಿದಂತೆ ತನ್ನ ನಿರ್ಧಾರವನ್ನು ಪ್ರಕಟಿಸಿದ್ದು, ಹೈಬ್ರಿಡ್ ಮಾದರಿಯಲ್ಲಿ ನಡೆಸಿದರೆ ಮಾತ್ರ ಆಡುವುದಾಗಿ ಹೇಳಿದೆ. ಆದರೆ, ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB) ಭಾರತ ತನ್ನ ನೆಲದಲ್ಲಿ ಬಂದು ಆಡಬೇಕೆಂದು ಪಟ್ಟು ಹಿಡಿದು ಕುಳಿತಿದೆ.
ಇದೀಗ ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ಕೋಚ್ ರಶೀದ್ ಲತೀಫ್ (Rashid Latif) ಈ ಬಗ್ಗೆ ಮಾತನಾಡಿದ್ದು, ಭಾರತ ಒಂದು ವೇಳೆ ಚಾಂಪಿಯನ್ಸ್ ಟ್ರೋಫಿ (Champions Trophy) ಆಡಲು ಪಾಕಿಸ್ತಾನಕ್ಕೆ ಬರದಿದ್ದರೆ ಪಿಸಿಬಿ ಕೂಡ ದೊಡ್ಡ ಹೆಜ್ಜೆಯನ್ನೇ ಇಡಬೇಕಾಗುತ್ತದೆ. ಈ ಬಗ್ಗೆ ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಮಾತನಾಡಿದ್ದು, ಭಾರತದ ನಡೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಮಾತನಾಡಿರುವ ಲತೀಫ್ (Rashid Latif), ಇದು ದ್ವಿಪಕ್ಷೀಯ ಸರಣಿ ಅಥವಾ ಏಷ್ಯಾ ಕಪ್ ಆಗಿದ್ದರೆ, ಭಾರತವು ಆಡಬೇಕೆ ಅಥವಾ ಬೇಡವೇ ಎಂದು ತಂಡಗಳನ್ನು ಕೇಳಲಾಗುತ್ತದೆ. ಆದರೆ, ಇದು ಐಸಿಸಿ (ICC) ನಡೆಸುವ ಟೂರ್ನಿಯಾಗಿದ್ದು, 2024-2031ರವರೆಗೆ ಒಪ್ಪಂದಗಳನ್ನು ಮಾಡಿಕೊಳ್ಳಲಾಗಿದೆ. ಒಂದು ತಂಡವು ಭಾಗವಹಿಸಲು ನಿರಾಕರಿಸಿದರೆ, ಅವರ ಕರೆಯನ್ನು ಸಮರ್ಥಿಸಿಕೊಳ್ಳಲು ಐಸಿಸಿಗೆ ಬಲವಾದ ಕಾರಣವನ್ನು ನೀಡಬೇಕು.
ನೀವು ಭದ್ರತೆಯ ಕಾರಣ (Security Reasons) ನೀಡಿ ಟೂರ್ನಿಯಿಂದ ಹಿಂದೆ ಸರಿಯುತ್ತಿರುವುದು ಕಾರಣವೇ ಅಲ್ಲಾ. ಹಾಗಿದ್ದರೆ ನ್ಯೂಜಿಲೆಂಡ್, ಆಸ್ಟ್ರೇಲಿಯಾ, ಇಂಗ್ಲೆಂಡ್ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಪಾಕಿಸ್ತಾನದಲ್ಲಿ ಆಡಲು ಕಾತುರದಿಂದ ಕಾಯುತ್ತಿವೆ. ಇಂದು ಐಸಿಸಿ ಅಸ್ತಿತ್ವದಲ್ಲಿರುವುದೇ ಭಾರತ ಹಾಗೂ ಪಾಕಿಸ್ತಾನದಿಂದ. ಭಾರತದಂತೆ ಪಾಕಿಸ್ತಾನ ಸರ್ಕಾರವೂ ನಾವು ಆಡುವುದಿಲ್ಲ ಎಂದು ಹೇಳಿದರೆ, ಯಾರೂ ಪಂದ್ಯವನ್ನು ವೀಕ್ಷಿಸುವುದಿಲ್ಲ. ಇದರಿಂದ ಐಸಿಸಿಗೆ ಯಾವುದೇ ಪ್ರಯೋಜನವಾಗುವುದಿಲ್ಲ.
ಒಂದು ವೇಳೆ ಭಾರತ ಪಾಕಿಸ್ತಾನದ ನೆಲದಲ್ಲಿ ಆಡಲು ಬರದಿದ್ದರೆ ನಾವು ಕೂಡ ಮುಂದಿನ ದಿನಗಳಲ್ಲಿ ಐಸಿಸಿ ನಡೆಸುವ ಟೂರ್ನಮೆಂಟ್ಗಳಿಂದ ಹೊರಗುಳಿಯುತ್ತೇವೆ. ಭಾರತದಂತೆ ನಾವು ಕೂಡ ದೊಡ್ಡ ಹೆಜ್ಜೆಯನ್ನ ಇಡಬೇಕಾಗುತ್ತದೆ ಎಂದು ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ಕೋಚ್ ರಶೀದ್ ಲತೀಫ್ (Rashid Latif) ಹೇಳಿದ್ದಾರೆ.
ಕಿಚ್ಚನ ಎದುರೇ ಹನುಮಂತ ಆಡಿದ ಮಾತುಗಳಿಗೆ ದಂಗಾದ Bigg Boss ಮನೆ ಮಂದಿ; ಭೇಷ್ ಎಂದ ನೆಟ್ಟಿಗರು