ಬೆಂಗಳೂರು: ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್ಬಾಸ್ (Bigg Boss) ಆರಂಭವಾಗಿ ಆರು ವಾರಗಳಾಗುತ್ತ ಬಂದಿದ್ದು, ಒಂದಿಲ್ಲೊಂದು ಕಾರಣಕ್ಕೆ ಪ್ರೇಕ್ಷಕರನ್ನು ಮನರಂಜಿಸುವಲ್ಲಿ ಯಶಸ್ವಿಯಾಗಿದೆ. ಈ ವಾರ ನೀಡಲಾಗಿದ್ದ ಟಾಸ್ಕ್ಗಳಲ್ಲಿ ಉತ್ತಮವಾಗಿ ಆಡುವ ಮೂಲಕ ಸ್ಫರ್ಧಿಗಳು ಪ್ರೇಕ್ಷಕರ ಮನ ಗೆದ್ದಿದ್ದು, ಈ ವಾರ ಕೂಡ ಪ್ರೇಕ್ಷಕರಿಗೆ ಭರ್ಜರಿ ರಸದೌತಣ ನೀಡುವುದರಲ್ಲಿ ಯಾವುದೇ ಅನುಮಾನವಿಲ್ಲ.
ವಾರದ ಪಂಚಾಯಿತಿಯಲ್ಲಿ ನಿರೂಪಕ ಕಿಚ್ಚ ಸುದೀಪ್ (Kichcha Sudeep) ಅವರು ಸ್ಫರ್ಧಿಗಳ ಒಂದಷ್ಟು ವಿಚಾರಗಳ ಬಗ್ಗೆ ಚರ್ಚೆ ನಡೆಸುತ್ತಾರೆ. ಗೊತ್ತಿಲ್ಲದೆ ತಪ್ಪು ಮಾಡಿದವರಿಗೆ ಮತ್ತೊಮ್ಮೆ ಮಾಡದಂತೆ ಸಲಹೆ ನೀಡುತ್ತಾರೆ. ಗೊತ್ತಿದ್ದು ತಪ್ಪು ಮಾಡಿದವರಿಗೆ ಎಚ್ಚರಿಕೆ ಕೊಡುತ್ತಾರೆ. ಆದರೆ, ಈ ವಾರದ ಸಂಚಿಕೆಗೆ ಸಂಬಂಧಿಸಿದಂತೆ ವಾಹಿನಿ ಎರಡು ಪ್ರೋಮೋಗಳನ್ನು ಬಿಡುಗಡೆ ಮಾಡಿದ್ದು, ನಿರೂಪಕ ಸುದೀಪ್ ಮಾತನಾಡಿರುವ ವಿಚಾರ ಎಲ್ಲರ ಗಮನ ಸೆಳೆಯುತ್ತಿದೆ.
ಯುದ್ಧದಲ್ಲಿ ಗೆದ್ದವರು ಯಾರು ಬಿದ್ದವರು ಯಾರು?
ವಾರದ ಕತೆ ಕಿಚ್ಚನ ಜೊತೆ | ಇಂದು ರಾತ್ರಿ 9#BiggBossKannada11 #BBK11 #HosaAdhyaya #ColorsKannada #BannaHosadaagideBandhaBigiyaagide #ಕಲರ್ಫುಲ್ಕತೆ #colorfulstory #Kicchasudeepa #BBKPromo pic.twitter.com/9WhCPgUtV9
— Colors Kannada (@ColorsKannada) November 9, 2024
ಈ ವಾರ ಬಿಗ್ಬಾಸ್ (Bigg Boss) ನೀಡಿದ್ದ ಟಾಸ್ಕ್ನಲ್ಲಿ ಹಲವು ಘಟನೆಗಳು ನಡೆದಿದೆ.ಜಗಳ. ದ್ರೋಹ, ಒಳೊಪ್ಪಂದ, ಸ್ನೇಹಗಳು ಮುರಿದಿವೆ, ಕೆಲವು ಹೊಸ ಸ್ನೇಹಗಳು ಹುಟ್ಟಿವೆ. ಎಲ್ಲವನ್ನೂ ಗಮನಿಸಿರುವ ಸುದೀಪ್ ಈ ವಾರ ಉಗ್ರಂ ಮಂಜುಗೆ ಚಾಟಿ ಬೀಸುತ್ತಾರಾ ಎಂದು ಕಾದು ನೋಡಬೇಕಿದೆ. ಇದಲ್ಲದರ ಜೊತೆಗೆ ಹನುಮಂತ (Hanumantha) ಮುಗ್ದಾನಾ ಎಂಬ ಪ್ರಶ್ನೆಯನ್ನು ಸುದೀಪ್ (Sudeep) ಮನೆಯವರ ಬಳಿ ಕೇಳುತ್ತಾರೆ. ಇದಕ್ಕೆ ಉತ್ತರಿಸುವ ಸ್ಫರ್ಧಿಗಳು ಹನುಮಂತ ಅಂದುಕೊಂಡಷ್ಟು ಇನ್ನೋಸೆಂಟ್ ಇಲ್ಲಾ ಎಂದು ಹೇಳುತ್ತಾರೆ. ಆತ ತೋರಿಸಿಕೊಳ್ಳುತ್ತಿರುವಷ್ಟು ಇನ್ನೋಸೆಂಟ್ ಅಲ್ಲಾ ಎಂದು ಸ್ಫರ್ಧಿಗಳು ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಹನುಮಂತ ಇಲ್ಲಿ ಬಂದಿರುವವರೆಲ್ಲಾ ಇನ್ನೋಸೆಂಟ್. ಯಾರು ಗೊತ್ತಿಲ್ದಂಗೆ ನಾಟಕ ಮಾಡುತ್ತಿದ್ದಾರೆ. ಈ ವಿಚಾರವಾಗಿ ನನ್ನನ್ನು ಇಟ್ಟುಕೊಂಡಿದ್ದಾರೆ ಎಂದು ಉತ್ತರಿಸುತ್ತಾರೆ.
ಯುದ್ಧದಲ್ಲಿ ಗೆದ್ದವರು ಯಾರು ಬಿದ್ದವರು ಯಾರು?, ಹನುಮಂತ ಮುಗ್ದಾನಾ? ಎಂಬ ಶೀರ್ಷಿಕೆಯಡಿ ಎರಡು ಪ್ರೋಮೋಗಳನ್ನು ಬಿಡುಗಡೆ ಮಾಡಲಾಗಿದ್ದು, ವಾರದ ಕಥೆ ವೀಕ್ಷಿಸಲು ಜನರು ಕಾತುರದಿಂದ ಕಾಯುತ್ತಿದ್ದಾರೆ. ಮಾನಸಾ ಅವರು ಕಳೆದ ವಾರ ಬಿಗ್ ಬಾಸ್ ಮನೆಯಿಂದ ಹೊರಬಿದ್ದರು. ಈ ವಾರ ಯಾರು ಹೊರಗೆ ಹೋಗುತ್ತಾರೆ ಎಂಬ ಕೌತುಕ ಮೂಡಿದೆ. ಈ ವಾರ ಒಟ್ಟು ಏಳು ಮಂದಿ ನಾಮಿನೇಟ್ ಆಗಿದ್ದು, ಧರ್ಮ ಕೀರ್ತಿರಾಜ್, ಭವ್ಯಾ, ಚೈತ್ರಾ ಕುಂದಾಪುರ, ತ್ರಿವಿಕ್ರಮ್, ಮೋಕ್ಷಿತಾ ಪೈ, ಗೋಲ್ಡ್ ಸುರೇಶ್ ಹಾಗೂ ಧನರಾಜ್ ನಾಮಿನೇಟ್ ಆಗಿದ್ದಾರೆ. ಆರನೇ ವಾರ ಯಾರು ಮನೆಯಿಂದ ಎಲಿಮಿನೇಟ್ ಆಗಲಿದ್ದಾರೆ ಎಂದು ಕಾದು ನೋಡಬೇಕಿದೆ.
ಹನುಮಂತ ಮುಗ್ದಾನಾ?
ವಾರದ ಕತೆ ಕಿಚ್ಚನ ಜೊತೆ | ಇಂದು ರಾತ್ರಿ 9#BiggBossKannada11 #BBK11 #HosaAdhyaya #ColorsKannada #BannaHosadaagideBandhaBigiyaagide #ಕಲರ್ಫುಲ್ಕತೆ #colorfulstory #Kicchasudeepa #BBKPromo pic.twitter.com/gnaLaY7czu
— Colors Kannada (@ColorsKannada) November 9, 2024
ಸಾಲ ವಾಪಸ್ ಕೊಡುವಂತೆ ಒತ್ತಡ ಹೇರಿದ್ದಕ್ಕೆ ಅಪ್ರಾಪ್ತರಿಂದ Firing; ಓರ್ವ ಸಾವು, ಇಬ್ಬರು ಗಂಭೀರ