ನವದೆಹಲಿ: ಐಸಿಸಿಯ ನೂತನ ಅಧ್ಯಕ್ಷ ಜಯ್ ಷಾ ಅವರು ಈ ಗಾದಿಗೆ ಏರಿದ ನಂತರ ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಾಗುತ್ತಿದ್ದಾರೆ. ಈ ಪೈಕಿ ಜಯ್ ಷಾ ಬಗ್ಗೆ ಹೆಚ್ಚು ಮಾತನಾಡುತ್ತಿರುವವರು ಎಂದರೆ ಅದು ಪಾಕಿಸ್ತಾನದ ಮಾಜಿ ಹಾಗೂ ಹಾಲಿ ಆಟಗಾರರು ಎಂದರೆ ತಪ್ಪಾಗಲಾರದು. ಪಾಕಿಸ್ತಾನದ ಆತಿಥ್ಯದಲ್ಲಿ ನಡೆಯಲಿರುವ ಚಾಂಪಿಯನ್ಸ್ ಈಗಾಗಲೇ ಭಾರತ ಹಾಗೂ ಆತಿಥೇಯ ರಾಷ್ಟ್ರದ ನಡುವಿನ ಕಿತ್ತಾಟಕ್ಕೆ ಹೆಚ್ಚು ಸದ್ದು ಮಾಡುತ್ತಿದ್ದು, ಟೀಮ್ ಇಂಡಿಯಾ ಮಾತ್ರ ಶತ್ರು ರಾಷ್ಟ್ರದಲ್ಲಿ ಯಾವುದೇ ಕಾರಣಕ್ಕೂ ಆಡುವುದಿಲ್ಲ ಎಂದು ಈಗಾಗಲೇ ಹೇಳಿದೆ. ತಮ್ಮ ಬೇಳೆ ಬೇಯಬೇಕೆಂಬ ಉದ್ಧೇಶದಿಂದ
ಒಂದು ವೇಳೆ ಭಾರತ ಪಾಕ್ಗೆ ಹೋಗದಿದ್ದರೆ ಆರ್ಥಿಕ ಸಂಕಷ್ಟದ ಬಯದಲ್ಲಿರುವ ಅಲ್ಲಿನ ಕ್ರಿಕೆಟ್ ಮಂಡಳಿ ಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಜಯ್ ಷಾ ಅವರ ಆಯ್ಕೆಯನ್ನು ವಿರೋಧಿಸದೆ ತಮಗೆ ಅನುಕೂಲವಾಗುವ ನಿಟ್ಟಿನಲ್ಲಿ ಪಿಸಿಬಿ ಪ್ಲ್ಯಾನ್ ಹಾಕಿಕೊಂಡಿತ್ತು. ಆದರೆ, ಪಾಕಿಸ್ತಾನ ಕ್ರಿಕೆಟ್ ಮಂಡಳಿ ಹಾಕಿಕೊಂಡಿದ್ದ ಲೆಕ್ಕಾಚಾರವೆಲ್ಲವೂ ತಲೆಕೆಳಗಾಗಿದ್ದು, ಈ ಬಗ್ಗೆ ಪಾಕಿಸ್ತಾನ ಕ್ರಿಕೆಟ್ ತಂಡದ ಭಾರತ ಮೂಲದ ಮಾಜಿ ಆಟಗಾರ ಡ್ಯಾನಿಶ್ ಕನೇರಿಯಾ ಮಾತನಾಡಿದ್ದಾರೆ.
ಜೀ ನ್ಯೂಸ್ಗೆ ನೀಡಿರುವ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿರುವ ಡ್ಯಾನಿಶ್, ಭದ್ರತಾ ಕಾಳಜಿಯಿಂದ ಭಾರತ ತಂಡವು ಪಾಕ್ಗೆ ಬರಬಾರದು ಮತ್ತು ಪಿಸಿಬಿ ಅಧ್ಯಕ್ಷರು ಹೇಳುವ ಪ್ರಕಾರ ಪ್ರಸ್ತುತ ಪಾಕಿಸ್ತಾನದಲ್ಲಿ ಕ್ರೀಡಾಂಗಣಗಳು ಸರಿ ಮಾಡಲಾಗುತ್ತಿದ್ದು, ಅವರ ಹೇಳಿಕೆಯ ಪ್ರಕರಾವೇ ಪಾಕಿಸ್ತಾನದಲ್ಲಿ ಮೂಲಸೌಕರ್ಯವಿಲ್ಲವೆಂದು ಸ್ಪಷ್ಟವಾಗಿ ಎತ್ತಿ ತೋರಿಸುತ್ತದೆ. ಟೀಮ್ ಇಂಡಿಯಾ ಉನ್ನತ ಶ್ರೇಣಿಯ ತಂಡಗಳಲ್ಲಿ ಒಂದಾಗಿದ್ದು, ಇಣುಕಿ ನೋಡುವ ಅಂತರರಾಷ್ಟ್ರೀಯ ಸೌಲಭ್ಯಗಳಿಲ್ಲದ ದೇಶಕ್ಕೆ ಅವರು ಆಡಲು ಏಕೆ ಬರುತ್ತಾರೆ.
ಇದನ್ನೂ ಓದಿ: ಪಶು ಸಂಗೋಪನಾ ಚಟುವಟಿಕೆ ವಿಸ್ತರಿಸಿ
ಬಿಸಿಸಿಐ ಕಾರ್ಯದರ್ಶಿಯಾಗಿ ಜಯ್ ಷಾ ಕೆಲಸ ಮಾಡಿದ ರೀತಿ ನಿಜಕ್ಕೂ ಶ್ಲಾಘನೀಯವಾಗಿದ್ದು, ಅವರು ದೇಶೀಯ ಕ್ರಿಕೆಟ್ಅನ್ನು ಅಭಿವೃದ್ಧಿಪಡಿಸಿದ ರೀತಿಯನ್ನು ಇಡೀ ವಿಶ್ವವೇ ತಿರುಗಿ ನೋಡುತ್ತಿದೆ. ಐಸಿಸಿಯಲ್ಲಿ ಒಟ್ಟು 16 ನಸದಸ್ಯ ರಾಷ್ಟ್ರಗಳ ಪೈಕಿ 15 ದೇಶಗಳು ಜಯ್ ಷಾ ಪರ ಮತ ಹಾಕಿದ್ದಾರೆ. ಭಾರತದೊಂದಿಗೆ ಆರೋಗ್ಯಕರ ಸಂಬಂಧವನ್ನು ಹೊಂದಲು ಬಯಸುತ್ತೇವೆ ಎಂದು ತೋರಿಸಲು ಪಾಕಿಸ್ತಾನವು ಅವರಿಗೆ ಮತ ಹಾಕಬೇಕಾಗಿತ್ತು. ಆದರೆ, ಪಾಕಿಸ್ತಾನವು ಜಯ್ ಷಾ ಅವರ ಆಯ್ಕೆಯನ್ನು ವಿರೋಧಿಸಿದ್ದು, ಅವರ ಅಹಂಕಾರವನ್ನು ಎತ್ತಿ ತೋರಿಸುತ್ತದೆ.
ಈ ವಿಚಾರ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬ ವಿಚಾರ ಇವರಿಗೆ ತಿಳಿದಿಲ್ಲ ಎನಿಸುತ್ತದೆ. ಏಕೆಂದರೆ ಬಿಸಿಸಿಐ ವಿಶ್ವದ ಶ್ರೀಮಂತ ಟೂರ್ನಿ ಐಪಿಎಲ್ ಆಯೋಜಿಸುವ ಮೂಲಕ ಆದಾಯವನ್ನು ವೃದ್ಧಿಸಿಕೊಳ್ಳುತ್ತದೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿ ಇವರು ಹಾಗೂ ಜಯ್ ಷಾ ಅವರನ್ನು ನೋಡಿ ಏನನ್ನಾದರೂ ಕಲಿಯಬೇಕು ಮತ್ತು ಐಸಿಸಿ ನೇತೃತ್ವದಲ್ಲಿ ಕಾರ್ಯಕ್ರಮಗಳು ನಡೆದರೆ ಅದನ್ನು ಬೆಂಬಲಿಸಬೇಕು ಎಂದು ಡ್ಯಾನಿಶ್ ಕನೇರಿಯಾ ಪಾಕ್ ಕ್ರಿಕೆಟ್ ಮಂಡಳಿಗೆ ಸಲಹೆ ನೀಡಿದ್ದಾರೆ.