ಪಶು ಸಂಗೋಪನಾ ಚಟುವಟಿಕೆ ವಿಸ್ತರಿಸಿ

K venkatesh

ಬೆಂಗಳೂರು: ಪಶುಸಂಗೋಪನಾ ಇಲಾಖೆ ಯಿಂದ ರಾಜ್ಯದಲ್ಲಿ ಹೆಚ್ಚುವರಿಯಾಗಿ 5,000 ಕೃತಕ ಗರ್ಭಧಾರಣೆ ಕೇಂದ್ರ ಗಾ ಸ್ಥಾಪಿಸಲು 250 ಕೋಟಿ ರೂ. ಅನುದಾನ, 125-150 ಪಶುಚಿಕಿತ್ಸಾ ವಾಹನ ಒದಗಿಸಬೇಕು ಎಂದು ಪಶುಸಂಗೋಪನಾ ಸಚಿವ ಕೆ. ವೆಂಕಟೇಶ್ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ.

ಕೇಂದ್ರ ಪಶುಸಂಗೋಪನಾ ಸಚಿವ ರಾಜೀವ್ ರಂಜನ್ ಸಿಂಗ್ ಅಧ್ಯಕ್ಷತೆಯಲ್ಲಿ ಒಡಿಶಾದ ಭುವನೇಶ್ವರದಲ್ಲಿ ಏರ್ಪಡಿಸಿದ್ದ ಮುಂಗಾರು ಸಭೆಯಲ್ಲಿ ಈ ಮನವಿ ಸಲ್ಲಿಸಿದರು. ಪ್ರಸ್ತುತ ಕೃತಕ ಗರ್ಭಧಾರಣೆ ಸೇವೆಯನ್ನು 15,000 ಗ್ರಾಮಗಳಲ್ಲಿ ಒದಗಿಸಲಾಗುತ್ತಿದೆ. ಇದನ್ನು ವಿಸ್ತರಿಸಲು ಅನುವಾಗುವಂತೆ 250 ಕೋಟಿ ರೂ. ಅನುದಾನ ಬಿಡುಗಡೆ ಎಂದು ಬೇಡಿಕೆ ಸಲ್ಲಿಸಿದ್ದಾರೆ.

K venkatesh

ಸದರಿ ಸಭೆಯಲ್ಲಿ ಜಾನುವಾರು ನೀತಿ/ಕಾರ್ಯಕ್ರಮಗಳು/ಯೋಜನೆಗಳ ವಿವಿಧ ಅಂಶಗಳ ಕುರಿತು ಪ್ರಸ್ತುತಿಗಳು, ಚರ್ಚೆಗಳು ಮತ್ತು ಸಂವಾದಗಳು ನಡೆದವು.

  • ಪ್ರಸ್ತುತ ಕೃತಕ ಗರ್ಭಧಾರಣೆ ಸೇವೆಯನ್ನು ಕೇವಲ 15000 ಗ್ರಾಮಗಳಲ್ಲಿ ಒದಗಿಸಲಾಗುತ್ತಿದೆ. ಇದನ್ನು ಅಂದಾಜು 29700 ಗ್ರಾಮಗಳಿಗೆ ವಿಸ್ತರಿಸಲು ಅನುವಾಗುವಂತೆ ಹೆಚ್ಚುವರಿಯಾಗಿ 5000 ಕೃತಕ ಗರ್ಭಧಾರಣೆ ಕೇಂದ್ರಗಳನ್ನು ರಾಜ್ಯದಲ್ಲಿ ಸ್ಥಾಪಿಸಲೂ ರೂ 250.00 ಕೋಟಿ ಅನುದಾನ ಬಿಡುಗಡೆ.
  • ಹಾಲು ಉತ್ಪಾದನೆ ಹೆಚ್ಚಿಸುವ ನಿಟ್ಟಿನಲ್ಲಿ ಇಲಾಖೆಯ ವೀರ್ಯ ಸಂಸ್ಕರಣಾ ಕೇಂದ್ರಗಳಿಗೆ 20 ಆಮದು ಮಾಡಿಕೊಳ್ಳಲಾದ ಉತ್ಕೃಷ್ಟ ಗುಣಮಟ್ಟದ ಜರ್ಸಿ ಹಾಗೂ 20 ಹೆಚ್‌ ಎಫ್‌ ಹೋರಿಗಳನ್ನು ಹಂಚಿಕೆ ಮಾಡುವುದು.
  • ಸಂಚಾರಿ ಪಶುಚಿಕಿತ್ಸಾ ಘಟಕಗಳಲ್ಲಿ ಪಶುಚಿಕಿತ್ಸಾ ಪ್ರಕರಣಗಳು ಹೆಚ್ಚಾಗುತ್ತಿದ್ದು, ಈ ಬೇಡಿಕೆಯನ್ನು ಪೂರೈಸಲು ಅನುವಾಗುವಂತೆ ಹೆಚ್ಚುವರಿಯಾಗಿ 125-150 ಸಂಚಾರಿ ಪಶುಚಿಕಿತ್ಸಾ ವಾಹನಗಳನ್ನು ಪೂರೈಸುವುದು.
  • ಸಂಚಾರಿ ಪಶುಚಿಕಿತ್ಸಾ ಘಟಕಗಳ ಸೇವೆಯನ್ನು ವೃದ್ಧಿ ಪಡಿಸುವ ನಿಟ್ಟಿನಲ್ಲಿ ಪಶುಪಾಲನಾ ಇಲಾಖೆಯಲ್ಲಿ ಸ್ಥಾಪಿಸಲ್ಪಟ್ಟಿರುವ call centre (ಕರೆ ಕೇಂದ್ರ) ನಲ್ಲಿ ಹೆಚ್ಚುವರಿಯಾಗಿ 10 ಪಶುವೈದ್ಯರನ್ನು ಹಾಗೂ 30-35 ಕಾರ್ಯನಿರ್ವಾಹಕರನ್ನು (Call centre executives) ಒದಗಿಸುವುದು.
  • ಹಿಂದಿನ ಸಾಲಿನಲ್ಲಿ ಜಾನುವಾರು ವಿಮೆ ಕುರಿತು ರೂ 3.33 ಕೋಟಿ ಅನುದಾನ ಮಾತ್ರ ಬಿಡುಗಡೆಯಾಗಿದ್ದು, ಕೇವಲ 17290 ಜಾನುವಾರುಗಳನ್ನು ವಿಮೆಗೊಳಪಡಿಸಲಾಯಿತು. ಕನಿಷ್ಠ 1 ಲಕ್ಷ ರಾಸುಗಳನ್ನು ವಿಮೆಗೊಳಪಡಿಸಲು ಅನುವಾಗುವಂತೆ ರೂ 22.10 ಕೋಟಿ ಆರ್ಥಿಕ ನೆರವನ್ನು ಒದಗಿಸುವುದು.
  • MAITRI ಕಾರ್ಯಕ್ರತರಿಗೆ ಒದಗಿಸಲಾಗುತ್ತಿರುವ tapering grant ಅನುದಾವನ್ನು ಮಾಸಿಕ ರೂ 1500/- ರಿಂದ ರೂ 3000/- ಕ್ಕೆ ಹೆಚ್ಚಿಸುವುದು.
  • ಹಾಲಿ ಕರ್ನಾಟಕ ರಾಜ್ಯದ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ರ ವರಿಂದ ಉದ್ಘಾಟಿಸಲ್ಪಟ್ಟ ಶ್ರೀ ಭಾವುರಾವ್‌ ಪಶುವೈದ್ಯಕೀಯ ಕಾಲೇಜು, ಅಥಣಿ ಇಲ್ಲಿಗೆ 2024-25 ನೇ ಶೈಕ್ಷಣಿಕ ಸಾಲಿನಿಂದಲೇ ಪ್ರವೇಶ ಅನುಮತಿಗಾಗಿ ಉದ್ದೇಶ ಪತ್ರ/ಅನುಮತಿ ಪತ್ರ (Letter of intent/Letter of permission)

Share This Article

ಪೇರಲೆ ಹಣ್ಣಿನಲ್ಲಿ ಮಾತ್ರವಲ್ಲ ಎಲೆಗಳಲ್ಲೂ ಇದೆ ಔಷಧೀಯ ಗುಣ; ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಈ ಎಲೆಗಳನ್ನು ಜಗಿದ್ರೆ ಸಾಕು.. Guava Leaves Benefits

ಬೆಂಗಳೂರು:  ಸೀಸನಲ್ ಹಣ್ಣುಗಳಲ್ಲಿ ಪೇರಲ ಕೂಡ ಒಂದು. ಪೇರಲ ಹಣ್ಣುಗಳು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಅದಕ್ಕೇ…

ಒಂದು ಬಾರಿ ಇದನ್ನು ಕುಡಿದರೆ ಸಾಕು ನಿಮ್ಮ ಹೊಟ್ಟೆ ಫುಲ್​ ಕ್ಲೀನ್ ಆಗಿಬಿಡುತ್ತೆ! Stomach problems

ತಿಂದ ಆಹಾರ ಸರಿಯಾಗಿ ಜೀರ್ಣವಾಗದಿದ್ದರೆ ಆ ನೋವು ( Stomach problems ) ಅಥವಾ ಕಿರಿಕಿರಿ…

Health Tips : ಸಕ್ಕರೆ ಕಾಯಿಲೆಯಿಂದ ಬಳಲುತ್ತೀದ್ದೀರಾ? ಬೆಳ್ಳಂಬೆಳಗ್ಗೆ ಕರಿಬೇವಿನ ಎಲೆಯ ನೀರನ್ನು ಕುಡಿಯಿರಿ ಸಾಕು

ಬೆಂಗಳೂರು: ಕರಿಬೇವು ಕೇವಲ ಬೆಳಗಿನ ತಿಂಡಿಗೆ ರುಚಿ ಕೊಡಲು ಒಗ್ಗರಣೆಗೆ ಮಾತ್ರ ಮೀಸಲಾಗಿಲ್ಲ. ಕರಿಬೇವಿನ ಎಲೆಗಳು…