More

  ಸೋಂಕಿತರ ಮೇಲೆ ಪಾಕ್​ ಗೂಢಚರ ಸಂಸ್ಥೆ ಕಣ್ಣು! ಶುರುವಾಯ್ತು ಹೀಗೊಂದು ಪ್ರಯೋಗ

  ಇಸ್ಲಾಮಾಬಾದ್‌: ಭಾರತದ ಮೇಲೆ ಸಂಚು ಹೂಡುವಲ್ಲಿಯೇ ನಿರತವಾಗಿರುವ ಪಾಕಿಸ್ತಾನ, ಇದೀಗ ತನ್ನ ದೇಶದ ಕರೊನಾ ಸೋಂಕಿತರತ್ತವೂ ಗಮನ ಹರಿಸಿದೆ.

  ಇದಾಗಲೇ 69,496 ಸೋಂಕಿತರನ್ನು ಹೊಂದಿರುವ ಪಾಕಿಸ್ತಾನದಲ್ಲಿ 1,483 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಕರೊನಾ ಸೋಂಕಿತರು ಹಾಗೂ ಆರೋಗ್ಯ ಕಾರ್ಯಕರ್ತರ ವಿಷಯದಲ್ಲಿ ತೀವ್ರ ನಿರ್ಲಕ್ಷ್ಯ ತಾಳುತ್ತಿರುವ ಪಾಕಿಸ್ತಾನ ಇದೀಗ ಹೊಸ ತಂತ್ರಜ್ಞಾನವನ್ನು ರೂಪಿಸಿದೆ.

  ಇದನ್ನೂ ಓದಿ: ಪಾಲಕರನ್ನು ಕರೆದೊಯ್ದರೂ ಶರಣಾಗದ ಉಗ್ರರನ್ನು ಹೊಡೆದುರುಳಿಸಿದ ಸೇನೆ

  ಅದೇನೆಂದರೆ ಕರೊನಾ ಸೋಂಕಿತರ ಮೇಲೆ ಕಣ್ಣಿಡಲು ಸಾಧ್ಯವಾಗುತ್ತಿಲ್ಲ ಎನ್ನುವ ಕಾರಣಕ್ಕೆ ಉಗ್ರರ ಮೇಲೆ ಕಣ್ಣಿಡುವಂತೆ ಕರೊನಾ ಸೋಂಕಿತರ ಮೇಲೂ ಕಣ್ಣು ಇಡುವಂಥ ತಂತ್ರಜ್ಞಾನದ ಮೊರೆ ಹೋಗಿದ್ದಾರೆ ಪಾಕ್​ ಪ್ರಧಾನಿ ಇಮ್ರಾನ್​ ಖಾನ್​. ಈ ಹಿನ್ನೆಲೆಯಲ್ಲಿ ಸೋಂಕಿತರ ಮೇಲೆ ಕಣ್ಣಿಡಲು ಪಾಕಿಸ್ತಾನದ ಗೂಢಚರ ಸಂಸ್ಥೆ ಐಎಸ್​ಐಗೆ ಜವಾಬ್ದಾರಿ ವಹಿಸಲಾಗಿದೆ.

  ತಂತ್ರಜ್ಞಾನ ಆಧಾರಿತವಾಗಿ ಕರೊನಾ ಸೋಂಕಿತರನ್ನು ಐಎಸ್​ಐ ಟ್ರ್ಯಾಕ್‌ ಮಾಡುತ್ತಿದೆ. ಅಂದರೆ, ಸೋಂಕಿತರು ಎಲ್ಲೆಲ್ಲಿ ಸಂಚರಿಸುತ್ತಿದ್ದಾರೆ, ಯಾರ ಸಂಪರ್ಕಕ್ಕೆ ಬರುತ್ತಿದ್ದಾರೆ ಎಂಬಿತ್ಯಾದಿ ಮಾಹಿತಿಯನ್ನು ಸಂಗ್ರಹಿಸುವ ತಂತ್ರಜ್ಞಾನದ ಮೂಲಕ ಪತ್ತೆ ಕಾರ್ಯ ನಡೆದಿದೆ. ಇಲ್ಲಿಯವರೆಗೆ ಇದನ್ನು ಉಗ್ರರ ಸುಳಿವು ಪತ್ತೆ ಹಚ್ಚಲು ಬಳಸಲಾಗುತ್ತಿತ್ತು. ಅದನ್ನೀಗ ಕರೊನಾ ಸೋಂಕಿತರ ಮೇಲೆ ಪ್ರಯೋಗ ಮಾಡಲಾಗುತ್ತಿದೆ.

  ಇದನ್ನೂ ಓದಿ:  ಕರೊನಾದ ಮತ್ತೊಂದು ತಲೆನೋವು: ಲಕ್ಷಣಗಳೇ ಇಲ್ಲದ ಶೇ.28 ಮಂದಿಗೆ ಸೋಂಕು!

  ತಮಗೆ ಸೋಂಕು ಬಂದಿದೆ ಎಂದರೂ ತಪ್ಪಿಸಿಕೊಳ್ಳುತ್ತಿರುವವರು, ತಲೆ ಮರೆಸಿಕೊಳ್ಳುತ್ತಿರುವವರು, ಚಿಕಿತ್ಸೆಗೆ ಹಾಜರಾಗದವರು, ಆಸ್ಪತ್ರೆಯಿಂದ ಹಾಗೂ ಕ್ವಾರಂಟೈನ್‌ನಿಂದ ತಪ್ಪಿಸಿಕೊಳ್ಳುವವರು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸೋಂಕಿನ ಸಂಖ್ಯೆ ಶರವೇಗದಲ್ಲಿ ಪಾಕಿಸ್ತಾನವನ್ನು ಆಕ್ರಮಿಸುತ್ತಿದೆ. ಇದು ಅಲ್ಲಿಯ ಪ್ರಧಾನಿಗೆ ತಲೆನೋವು ತಂದಿದೆ. ಆದ್ದರಿಂದ ಸೋಂಕಿತರನ್ನು ಉಗ್ರರಿಗೆ ಬಳಸುವ ತಂತ್ರಜ್ಞಾನದ ಮೂಲಕ ಕಂಡುಹಿಡಿಯಲು ಇದೀಗ ಸರ್ಕಾರ ಮುಂದಾಗಿದೆ. ಇವರನ್ನು ನಿಯಂತ್ರಿಸುವುದು ಐಎಸ್‌ಐಗೆ ಹೊಣೆ ವಹಿಸಿದ್ದಾರೆ ಎನ್ನಲಾಗಿದೆ.

  See also  463 ರೂಪಾಯಿ ಪಾವತಿಸಿ ಬಸ್​ನಲ್ಲಿ ಪ್ರಯಾಣಿಸಿದ ಕೋಳಿ! ಹುಬ್ಬೇರಿಸಿದ ಕಂಡಕ್ಟರ್​

  ಜಿಯೋ ಫೆನ್ಸಿಂಗ್‌ ಮತ್ತು ಫೋನ್‌ ಮಾನಿಟರಿಂಗ್‌ ವ್ಯವಸ್ಥೆಯ ಮೂಲಕ ಪತ್ತೆ ಹಚ್ಚಲಾಗುತ್ತದೆ. ಐಎಸ್‌ಐ ಅಧಿಕಾರಿಗಳು ಸ್ಥಳೀಯ ಮತ್ತು ಪ್ರಾಂತ್ಯದ ಸರ್ಕಾರದ ಮುಖ್ಯಸ್ಥರೊಂದಿಗೆ ನೇರ ಸಂಪರ್ಕದಲ್ಲಿದ್ದು ಕರೊನಾ ರೋಗಿಗಳ ಮಾಹಿತಿಗಳನ್ನು ನೋಡುತ್ತಿದ್ದಾರೆ (ಏಜೆನ್ಸೀಸ್​)

  VIDEO: ರೋಗ ನಿರೋಧಕ ಶಕ್ತಿಗೆ ಆಯುರ್ವೇದ, ಯೋಗ ಪರಿಣಾಮಕಾರಿ: ‘ಮನ್​ ಕೀ ಬಾತ್​’ನಲ್ಲಿ ಪ್ರಧಾನಿ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts