

ಇಸ್ಲಾಮಾಬಾದ್: ಕಳೆದ ಹಣಕಾಸು ವರ್ಷದಲ್ಲಿ ಪಾಕಿಸ್ತಾನದಲ್ಲಿ ಬಡತನವು ಶೇಕಡಾ 39.4ಕ್ಕೆ ಏರಿದೆ ಎಂದು ವಿಶ್ವ ಬ್ಯಾಂಕ್ ಹೇಳಿದೆ. ಕಳಪೆ ಆರ್ಥಿಕ ಪರಿಸ್ಥಿತಿಗಳಿಂದಾಗಿ 1.25 ಕೋಟಿಗೂ ಹೆಚ್ಚು ಜನರು ಬಡತನಕ್ಕೆ ಸಿಲುಕಿದ್ದಾರೆ. ಆರ್ಥಿಕ ಸ್ಥಿರತೆ ಸಾಧಿಸಲು ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಪಾಕಿಸ್ತಾನವನ್ನು ವಿಶ್ವಬ್ಯಾಂಕ್ ಒತ್ತಾಯಿಸಿದೆ.
ಪಾಕಿಸ್ತಾನದಲ್ಲಿ ಬಡತನವು ಒಂದು ವರ್ಷದಲ್ಲಿ 34.2 ಪ್ರತಿಶತದಿಂದ 39.4 ಪ್ರತಿಶತಕ್ಕೆ ಏರಿದೆ. ಇದರೊಂದಿಗೆ 1.25 ಕೋಟಿಗೂ ಹೆಚ್ಚು ಜನರು ಬಡತನ ರೇಖೆಗಿಂತ ಕೆಳಗಿದ್ದಾರೆ. ಸುಮಾರು 95 ದಶಲಕ್ಷ ಪಾಕಿಸ್ತಾನಿಗಳು ಈಗ ಬಡತನದಲ್ಲಿದ್ದಾರೆ ಎಂದು ವಿಶ್ವ ಬ್ಯಾಂಕ್ ಹೇಳಿದೆ.
ಆರ್ಥಿಕತೆಯ ಶೇಕಡಾ 7ಕ್ಕಿಂತ ಹೆಚ್ಚು ಹಣಕಾಸಿನ ಹೊಂದಾಣಿಕೆಯ ಮೂಲಕ ಆರ್ಥಿಕ ಸ್ಥಿರತೆ ಸಾಧಿಸುವ ಪ್ರಯತ್ನದಲ್ಲಿ ವ್ಯರ್ಥ ವೆಚ್ಚವನ್ನು ಕಡಿತಗೊಳಿಸುವಂತೆ ಪಾಕಿಸ್ತಾನವನ್ನು ಜಾಗತಿಕ ಸಾಲದಾತ ಒತ್ತಾಯಿಸಿದೆ. ಸರ್ಕಾರದ ಆದಾಯವನ್ನು ಬಲಪಡಿಸಲು ತೆರಿಗೆ ವಿನಾಯಿತಿ ಯನ್ನು ಹಿಂತೆಗೆದುಕೊಳ್ಳುವ ಮೂಲಕ ಮತ್ತು ರಿಯಲ್ ಎಸ್ಟೇಟ್ ಮತ್ತು ಕೃಷಿ ಕ್ಷೇತ್ರಗಳ ಮೇಲಿನ ತೆರಿಗೆ ಹೆಚ್ಚಿಸುವ ಮೂಲಕ ಆದಾಯ&ಜಿಡಿಪಿ ಅನುಪಾತವನ್ನು 5 ಪ್ರತಿಶತದಷ್ಟು ಸುಧಾರಿಸುವ ಕ್ರಮಗಳನ್ನು ವಿವರಿಸಿದೆ.