ನವದೆಹಲಿ: ಭಯೋತ್ಪಾದನೆ, ಆರ್ಥಿಕ ಸಂಕಷ್ಟದಿಂದ ಕಂಗೆಟ್ಟಿರುವ ಪಾಕಿಸ್ತಾನವು ದಿನ ಬೆಳಗಾದರೆ ವಿಶ್ವದ ಮುಂದೆ ಒಂದಿಲ್ಲೊಂದು ಕಾರಣಕ್ಕೆ ಬೆತ್ತಲಾಗುತ್ತಿರುತ್ತದೆ. ಇಷ್ಟಾದರೂ ಬುದ್ದಿ ಕಲಿಯದ ಪಾಕಿಸ್ತಾನವು ಭಾರತದ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡಿ ಟೀಕೆಗೆ ಗುರಿಯಾಗುವುದರಿಂದ ಮಾತ್ರ ತಪ್ಪಿಸಿಕೊಳ್ಳುವುದಿಲ್ಲ. ಇದೀಗ ಪಾಕ್ ಕ್ರಿಕೆಟ್ ತಂಡದ ಅಭಿಮಾನಿಯೋರ್ವ ಟೀಮ್ ಇಂಡಿಯಾ ಮಾಜಿ ಆಟಗಾರ ಇರ್ಫಾನ್ ಪಠಾಣ್ ಕುರಿತು ಮಾಡಿರುವ ಕಮೆಂಟ್ ಕೆಂಗಣ್ಣಿಗೆ ಗುರಿಯಾಗಿದ್ದು, ಈ ಬಗ್ಗೆ ಮಾಜಿ ಸ್ಪಿನ್ನರ್ ಹರ್ಭಜನ್ ಸಿಂಗ್ ಖಡಕ್ ಆಗಿ ರಿಪ್ಲೈ ಮಾಡಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋ ನೋಡುವುದಾದರೆ ಆ್ಯಂಕರ್ ಒಬ್ಬರು ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಬಾಬರ್ ಅಜಂ ಅವರಿಗೆ ಸಂದರ್ಶನ ನೀಡುವಂತೆ ಅವರ ಹಿಂದೆಯೇ ಮೈಕ್ ಹಿಡಿದು ಹೋಗುತ್ತಾರೆ. ಸಂದರ್ಶನ್ ನೀಡಿಲು ಬಾಬರ್ ನಿರಾಕರಿಸುತ್ತಾರೆ. ಈ ವಿಡಿಯೋವನ್ನು ಪೋಸ್ಟ್ ಬಾಬರ್ ಅಜಂ ಫ್ಯಾನ್ ಪೇಜ್ ಪೋಸ್ಟ್ ಮಾಡಿದ್ದು, ಆ್ಯಂಕರ್ಅನ್ನು ಇರ್ಫಾನ್ ಪಠಾಣ್ ಎಂದು ತಪ್ಪಾಗಿ ಅರ್ಥೈಸಿ ಪೋಸ್ಟ್ ಮಾಡಲಾಗಿದೆ. ಸಂದರ್ಶನಕ್ಕಾಗಿ ಬಾಬರ್ ಅವರನ್ನು ಇರ್ಫಾನ್ ಬೇಡಿಕೊಂಡರು ಎಂದು ಅಡಿಬರಹ ನೀಡಲಾಗಿದೆ.
ಇದನ್ನೂ ಓದಿ: ಕಡುಬಡತನ, ಪಿಯುಸಿಯಲ್ಲಿ ನಾಲ್ಕು ಸಬ್ಜೆಕ್ಟ್ ಫೇಲ್; ಛಲಬಿಡದೆ ಒಂದಲ್ಲಾ ಎಂಟು ಸರ್ಕಾರಿ ಕೆಲಸಕ್ಕೆ ಆಯ್ಕೆಯಾಗಿದ್ದರು ಪರಶುರಾಮ್
ಇತ್ತ ಈ ಪೋಸ್ಟ್ಗೆ ಪ್ರತಿಕ್ರಿಯಿಸಿರುವ ಟೀಮ್ ಇಂಡಿಯಾ ಮಾಜಿ ಸ್ಪಿನ್ನರ್, ರಾಜ್ಯಸಭಾ ಸದಸ್ಯ ಹರ್ಭಜನ್ ಸಿಂಗ್, ಈ ವಿಡಿಯೋದಲ್ಲಿ ಇರ್ಫಾನ್ ಪಠಾಣ್ ಎಲ್ಲಿದ್ದಾರೆ. ಮೊದಲಿಗೆ ನಿಮಗೆ ಹೇಗೆ ಮಾತನಾಡಬೇಕೆಂಬ ಮರ್ಯಾದೆ ಇಲ್ಲ. ಈಗ ನಿಮ್ಮ ಕಣ್ಣುಗಳ ಕೆಲಸ ಮಾಡುವುದನ್ನು ನಿಲ್ಲಿಸಿದ್ದೀರಾ,. ಒಂದು ವೇಳೆ ಇಂಗ್ಲೀಷ್ನಲ್ಲಿ ಏನಾದರೂ ಪ್ರಶ್ನೆ ಕೇಳಿದರೆ ದೊಡ್ಡ ಜಗಳವಾಗುತ್ತೇನೋ ಎಂದು ತಿರುಗೇಟು ನೀಡಿದ್ದಾರೆ.
ಇತ್ತ ಹರ್ಭಜನ್ ಪೋಸ್ಟ್ಗೆ ಪ್ರತಿಕ್ರಿಯಿಸಿರುವ ಇರ್ಫಾನ್ ಪಠಾಣ್, ಸುಳ್ಳು ಹೇಳುವ ಮೂಲಕ ಜನರನ್ನು ತಲುಪಲು ಬಯಸಿದ್ದಾರೆ. ಪಾಜಿ ನಿರ್ಲಕ್ಷಿಸಿ ಎಂದು ರಿಪ್ಲೈ ಮಾಡಿದ್ದಾರೆ. ಪಾಕ್ನ ಕ್ರಿಕೆಟ್ ಅಭಿಮಾನಿಗಳು ಭಾರತೀಯ ಆಟಗಾರರ ಕುರಿತು ಪೋಸ್ಟ್ ಮಾಡುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಅನೇಕ ಬಾರಿ ಈ ರೀತಿ ಪೋಸ್ಟ್ ಮಾಡಿ ವ್ಯಾಪಕ ಟೀಕೆಗೆ ಗುರಿಯಾಗಿದ್ದಾರೆ.