Ceasefire: ಆಪರೇಷನ್ ಸಿಂಧೂರ ಭಾಗವಾಗಿ ಭಾರತ ಸಶಸ್ತ್ರಪಡೆಗಳು ಪಾಕಿಸ್ತಾನ ವಾಯುನೆಲೆಗಳ ಮೇಲೆ ಭಾರೀ ಪ್ರಮಾಣದಲ್ಲಿ ದಾಳಿ ಮಾಡಿ ಧ್ವಂಸಗೊಳಿಸಿದ ನಂತರ, ಯುದ್ಧವನ್ನೇ ನಿಲ್ಲಿಸುವುದಾಗಿ ಪ್ರತಿಜ್ಞೆ ಮಾಡಿ ಅಮೆರಿಕವನ್ನು ಸಂಪರ್ಕ ಮಾಡಿದ್ದು ಪಾಕಿಸ್ತಾನವೇ ಎಂದು ಇದೀಗ ಬಹಿರಂಗಗೊಂಡಿದೆ.

ಭಾರತ ಮತ್ತು ಪಾಕಿಸ್ತಾನ ಕದನ ವಿರಾಮಕ್ಕೆ ಒಪ್ಪಿಕೊಂಡ ಒಂದು ದಿನದ ನಂತರ, ಸರ್ಕಾರಿ ಮೂಲವೊಂದು ಸಿಎನ್‌ಎನ್-ನ್ಯೂಸ್ 18(ಇಂಗ್ಲಿಷ್)ಗೆ ತಿಳಿಸಿದ್ದಾಗಿ ವರದಿ ಉಲ್ಲೇಖಿಸಿದೆ.
ವರದಿ ಪ್ರಕಾರ, ಕದನ ವಿರಾಮವನ್ನು ಮಧ್ಯಸ್ಥಿಕೆ ವಹಿಸುವಲ್ಲಿ ಅಮೆರಿಕ ಯಾವುದೇ ಪಾತ್ರ ವಹಿಸಿಲ್ಲ ಎಂದು ಮೂಲಗಳು ಸ್ಪಷ್ಟಪಡಿಸಿದ್ದು, “ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಘೋಷಣೆ ಮಾಡುವ ಮೊದಲು ಭಾರತವನ್ನು ಉಲ್ಲೇಖಿಸಿಲ್ಲ ಮತ್ತು ಪಾಕಿಸ್ತಾನದೊಂದಿಗೆ ತಲುಪಿದ ತಿಳುವಳಿಕೆಯ ಬಗ್ಗೆ ಭಾರತ ಅವರಿಗೆ ತಿಳಿಸಿಲ್ಲ” ಎಂದಿದೆ.
ಕದನ ವಿರಾಮಕ್ಕೂ ಮುನ್ನ ನಡೆದಿದ್ದೇನು..?
ಮೇ.10ರಂದು ಪಾಕಿಸ್ತಾನದ ದಾಳಿಗೆ ಭಾರತ ಪ್ರತಿದಾಳಿ ಭೀಕರವಾಗಿದ್ದು, ಪಾಕ್ ವಾಯುನೆಲೆಗಳು ಒಂದೊಂದಾಗಿ ಧ್ವಂಸಗೊಳ್ಳತ್ತವೆ. ಇದನ್ನರಿತ ಪಾಕ್, ಮೊದಲು ಭಾರತ ಮಿಲಿಟರಿ ಕಾರ್ಯಚರಣೆ ಮಾಹಾ ನಿರ್ದೇಶಕರಿಗೆ ಮಧ್ಯಾಹ್ನ 1 ಗಂಟೆ ಸುಮಾರಿಗೆ ಕರೆ ಮಾಡಿದೆ. ಆದರೆ, ಕಾರ್ಯಚರಣೆಯಿಂದಾಗಿ ಮಧ್ಯಾಹ್ನ 3.35ರ ಸುಮಾರಿಗೆ ಭಾರತ ಪ್ರತಿಕ್ರಿಯೆ ನೀಡಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ:ಎಜುಕೇಷನ್ ಎಕ್ಸ್‌ಪೋದಿಂದ ಸುವರ್ಣ ಅವಕಾಶ: ಡಾ.ಎಚ್.ಬಸವನಗೌಡಪ್ಪ ಅಭಿಮತ
“ನಾವು ಅವರ ವಾಯುನೆಲೆಗಳ ಮೇಲೆ ತೀವ್ರವಾಗಿ ದಾಳಿ ಮಾಡಿದ ನಂತರ… ಅವರು ಅಮೆರಿಕದ ಹತ್ತಿರ ಪಾಕ್ ಅಳುತ್ತಾ ಹೋದರು”. ನಂತರ, ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಪಾಕಿಸ್ತಾನ ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್ ಅವರೊಂದಿಗೆ ಮತ್ತು ನಂತರ ವಿದೇಶಾಂಗ ಸಚಿವ ಜೈಶಂಕರ್ ಅವರೊಂದಿಗೆ ಮಾತನಾಡಿ, “ಪಾಕಿಸ್ತಾನಿಗಳು ಗುಂಡು ಹಾರಿಸುವುದನ್ನು ನಿಲ್ಲಿಸಲು ಸಿದ್ಧರಿದ್ದಾರೆ. ನೀವು ಹಾಗೆ ಮಾಡುತ್ತೀರಾ?” ಎಂದು ಕೇಳಿದರು. ಇದಕ್ಕೆ ಪ್ರತಿಕ್ರಿಯೆಯಾಗಿ, ಪಾಕಿಸ್ತಾನ ಗುಂಡಿನ ದಾಳಿಯನ್ನು ನಿಲ್ಲಿಸಿದರೆ, ಭಾರತವೂ ಅದೇ ರೀತಿ ಮಾಡುತ್ತದೆ ಎಂದು ಜೈಶಂಕರ್ ಗಮನಿಸಿದ್ದರು ಎಂದು ಮೂಲಗಳು ಬಹಿರಂಗಪಡಿಸಿವೆ.
ಇದಾದ ಬಳಿಕ ಭಾರತ ಮತ್ತು ಪಾಕಿಸ್ತಾನಗಳು ಪೂರ್ಣ ಮತ್ತು ತಕ್ಷಣದ ಕದನ ವಿರಾಮಕ್ಕೆ ಒಪ್ಪಿಕೊಂಡಿವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟ್ವೀಟ್ ಮಾಡಿದ್ದರು. ಟ್ರಂಪ್ ಹೇಳಿದ ಕೆಲವೇ ನಿಮಿಷಗಳ ಬಳಿಕ ಮಾತನಾಡಿರುವ ಭಾರತ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ, ಮೇ.10ರ ಸಂಜೆ 5ರಿಂದಲೇ ಕದನ ವಿರಾಮ ಜಾರಿಗೆ ಬರುವಂತೆ ಒಪ್ಪಂದ ಮಾಡಿಕೊಳ್ಳಲಾಗಿದೆ.ಮೇ.12ಕ್ಕೆ ಪಾಕ್ದೊಂದಿಗೆ ಮಾತುಕತೆ ನಡೆಸುವುದಾಗಿ ತಿಳಿಸಿದ್ದರು.(ಏಜೆನ್ಸೀಸ್)
ಆಪರೇಷನ್ ಸಿಂದೂರ್; ಪಾಕಿಸ್ತಾನದ 35-40 ಯೋಧರು ಸಾವು; DGMO ರಾಜೀವ್ ಘಾಯ್| operation sindoor