ಅಮ್ಮನಿಗೆ ಹೇಳಬೇಡ.. ಪೈಲಟ್​ ಆಗಲು ಬಿಡಲ್ಲ ಎಂದಿದ್ದಳು ವ್ಯೋಮಿಕಾ ​: ಇದೀಗ ಭಾರತ ಹೆಮ್ಮೆಯ ಪುತ್ರಿ ಎಂದು ನೆನೆದ ತಂದೆ! | Vyomika Singh

dk - 2025-05-11T192045.416
Published on

Vyomika Singh: ಪಾಕಿಸ್ತಾನದಲ್ಲಿನ 9 ಉಗ್ರ ತಾಣಗಳ ಮೇಲೆ ದಾಳಿ ಮಾಡಿ ಧ್ವಂಸ ಮಾಡಿದ ಬಳಿಕ ಜಗತ್ತಿಗೆ ಗೊತ್ತಾಗಿದ್ದು ಈ ಇಬ್ಬರು ಭಾರತೀಯ ಹೆಣ್ಣು ಮಕ್ಕಳು,  ವಿಂಗ್​​ ಕಮಾಂಡರ್​ ವ್ಯೋಮಿಕಾ ಸಿಂಗ್​ ಹಾಗೂ ಕರ್ನಲ್​ ಸೋಫಿಯ ಖುರೇಷಿ. ಮೇ.7ರ ಬೆಳಿಗ್ಗೆ  ಪತ್ರಿಕಾಗೋಷ್ಠಿಗೆ ಬಂದಾಗ ಭಾರತದ ಮಹಿಳಾ ಶಕ್ತಿ ಈಗ ದೇಶವನ್ನು ಪ್ರತಿನಿಧಿಸುವ ಸಾಮರ್ಥ್ಯವನ್ನು ಹೊಂದಿದೆ ಎಂಬುದು ಇಡೀ ಜಗತ್ತಿಗೆ ಒಂದು ಸಂದೇಶವಾಗಿತ್ತು. ಅದೇ ರೀತಿ ವಿಂಗ್​​ ಕಮಾಂಡರ್​ ವ್ಯೋಮಿಕಾ ಸಿಂಗ್​ ಅವರ ಜೀವನ ಚರಿತ್ರೆಯೂ ಅದನ್ನೇ ಸಾರುತ್ತಿದೆ.

ಹೌದು, ಖಾಸಗಿ ಟಿವಿ ಸಂದರ್ಶನವೊಂದರಲ್ಲಿ ಮಾತನಾಡಿರುವ ವ್ಯೋಮಿಕಾ ಸಿಂಗ್​ ತಂದೆ-ತಾಯಿ ಮಗಳ ಸಾಧನೆ ಹಾಗೂ ಚಿಕ್ಕವಳಿದ್ದಾಗ ಅವರ ಚೇಷ್ಟೆಗಳನ್ನು ಹಂಚಿಕೊಂಡಿದ್ದಾರೆ.

ವ್ಯೋಮಿಕಾ ಸಿಂಗ್​ ತಂದೆ ಆರ್​.ಎಸ್​.ನಿಮ್​ ಮಾತನಾಡುತ್ತಾ, ''ನನ್ನ ಮಗಳು ಚಿಕ್ಕವಳಿಂದಲೂ ಎಲ್ಲರಿಗಿಂತ ತುಂಬಾ ವಿಭಿನ್ನವಾಗಿದ್ದಳು. ಅವಳು 10 ತರಗತಿಯಿಂದಲೇ ವಾಯುಪಡೆಗೆ ಸೇರಿಕೊಳ್ಳಬೇಕೆಂದು ಮಹತ್ತರ ಕನಸು ಹೊಂದಿದ್ದಳು. ಪಿಯುಸಿಯಲ್ಲಿ ಎಂಜಿನಿಯರಿಂಗ್​ ಸೇರಿಕೊಂಡಳು. ತನ್ನ ಅಧ್ಯಯನ ಪೂರ್ಣಗೊಂಡ ನಂತರ ನಾಲ್ಕೈದು ತಿಂಗಳು ಕೆಲಸ ಮಾಡಿದ ಬಳಿಕ ವಾಯುಪಡೆಗೆ ಸೇರಬೇಕೆಂಬ ಧೃಢ ನಿಶ್ಚಯ ಮಾಡಿದ್ದಳು. ಇದನ್ನು ತನ್ನ ತಾಯಿಗೆ ಹೇಳಬೇಡಿ, ಪೈಲಟ್​ ಆಗಲು ಬಿಡಲ್ಲ ಎಂದಿದ್ದಳು'', ಎಂದು ವ್ಯೋಮಿಕಾ ಸಿಂಗ್​ ಸಾಧನೆಯ ಹಾದಿಯನ್ನು ವಿವರಿಸಿದ್ದಾರೆ.

ವಾಯುಪಡೆಗೆ ಸೇರಿದ ನಂತರ ಕೂಡ ಈ ವಿಷಯವನ್ನು ಅಮ್ಮನ ಬಳಿ ಹೇಳುವುದನ್ನು ನಿಷೇಧಿಸಿದ್ದಳು. ಯಾಕೆಂದ್ರೆ ಅಮ್ಮ ಪ್ರೀತಿಯ ಮಗಳಾಗಿದ್ದರಿಂದ ವಾಯುಪಡೆಗೆ ಸೇರಲು ಅವಕಾಶ ನೀಡಲ್ಲ ಎಂದು ಹೆದರುತ್ತಿದ್ದಳು ಎಂದು ತಂದೆ ತಮ್ಮ ಮಗಳ ಬಾಲ್ಯದ ನೆನಪುಗಳನ್ನು ತಂದೆ ನೆನೆದರು.

ಮಗುವಿನ ಪಾದಗಳು ತೊಟ್ಟಿಲಿನಲ್ಲಿ ಕಾಣುತ್ತವೆ ಎಂದು ಹೇಳಲಾಗುತ್ತದೆ. ಆದ್ದರಿಂದ ಅವನ ನಡವಳಿಕೆ, ಆಲೋಚನೆಗಳು, ಸನ್ನೆಗಳು, ಕ್ರೀಡೆ ಮತ್ತು ಕಿಡಿಗೇಡಿತನದಿಂದ ಏನೋ ವಿಭಿನ್ನವಾಗಿದೆ ಎಂದು ತಾಯಿ ಕರುಣಾಸಿಂಗ್​ ಹೇಳಿದ್ದಾರೆ.

"ವ್ಯೋಮಿಕಾ ಇನ್ನು ಮುಂದೆ ನಮ್ಮ ಮಗಳಲ್ಲ, ಅವಳು ಇಡೀ ದೇಶದ ಮಗಳು. ಹುಡುಗಿಯರು ಮತ್ತು ಹುಡುಗರ ನಡುವೆ ಯಾವುದೇ ವ್ಯತ್ಯಾಸವಿಲ್ಲ ಎಂಬ ಸಂದೇಶವನ್ನು ನಾವು ಎಲ್ಲಾ ಹೆಣ್ಣುಮಕ್ಕಳಿಗೆ ನೀಡಲು ಬಯಸುತ್ತೇವೆ. ನೀವು ಏನು ಮಾಡಲು ಬಯಸುತ್ತೀರೋ ಅದನ್ನು ಸಾಧಿಸಲು ನಿಮ್ಮ ಎಲ್ಲಾ ಧೈರ್ಯ ಮತ್ತು ಶ್ರಮವನ್ನು ಬಳಸಿ" ಎಂದು ತಾಯಿ ಕರುಣಾ ಸಿಂಗ್ ಹೇಳಿದರು.

ವ್ಯೋಮಿಕಾ ಎಂದ್ರೆ ಆಕಾಶ ಎಂದರ್ಥ

ವ್ಯೋಮಿಕಾ ಎಂದ್ರೆ 'ಆಕಾಶದಲ್ಲಿ ವಾಸಿಸುವಳು' ಅಥಾವ 'ಆಕಾಶದ ಮಗಳು' ಎಂದರ್ಥ. ಒಮ್ಮೆ ಶಾಲೆಯಲ್ಲಿ ಹೆಸರುಗಳ ಬಗ್ಗೆ ಚರ್ಚೆ ನಡೆದಾಗ ವ್ಯೋಮಿಕಾ ಎಂದರೆ ಅರ್ಥ ಏನು ಎಂದು ಕೇಳಿದ್ದಾರಂತೆ. ವ್ಯೋಮಿಕಾ ಎಂದ್ರೆ 'ಆಕಾಶದಲ್ಲಿ ವಾಸಿಸುವಳು' ಅಥಾವ 'ಆಕಾಶದ ಮಗಳು' ಎಂದು ಹೇಳಿದ್ದರಂತೆ. ಹಾಗಾಗಿ ಅಂದಿನಿಂದ ವ್ಯೋಮಿಕಾ, ಪೈಲಟ್​ ಆಗುವ ಕನಸು ಕಂಡಿದ್ದಳಂತೆ ಎಂದು ತಂದೆ ವಿವರಿಸಿದ್ದಾರೆ.

ಇಂದು, ವ್ಯೋಮಿಕಾ ಸಿಂಗ್ ದೇಶದ ಹೆಣ್ಣುಮಕ್ಕಳಿಗೆ ಸ್ಫೂರ್ತಿಯಾಗಿದ್ದಾಳೆ. ಅವರ ಹೋರಾಟ ಮತ್ತು ಸಮರ್ಪಣೆಯ ಕಥೆಗಳು ಎಲ್ಲರಿಗೂ ಸ್ಫೂರ್ತಿ ನೀಡುತ್ತವೆ. ಕನಸು ಕಾಣುವುದು ಎಷ್ಟು ಮುಖ್ಯವೋ ಅದನ್ನು ಸಾಧಿಸುವುದು ಅಷ್ಟೇ ಮುಖ್ಯ ಎಂಬುದಕ್ಕೆ ವ್ಯೋಮಿಕಾ ಸಿಂಗ್ ಅವರೇ ಸಾಕ್ಷಿ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net