ಪಾಕ್​ಗೆ ಸಲಹೆ ಕೊಡುವ ಮೊದಲು ನಿಮ್ಮ ಪ್ರದರ್ಶನ ಹೇಗಿದೆ ನೋಡ್ಕೊಳ್ಳಿ: ರೋಹಿತ್ ಪಡೆ ವಿರುದ್ಧ ತನ್ವಿರ್​ ಕಿಡಿ

ಲಾಹೋರ್​: ಇತ್ತೀಚೆಗಷ್ಟೇ ನಡೆದ ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯನ್ನು 3-0 ಅಂತರದಿಂದ ಕ್ಲೀನ್ ಸ್ವೀಪ್ ಮಾಡಿದ ಸೂರ್ಯಕುಮಾರ್ ನೇತೃತ್ವದ ಭಾರತ ತಂಡ, ರೋಹಿತ್ ಶರ್ಮ ಕ್ಯಾಪ್ಟನ್ಸಿಯಲ್ಲಿ ಏಕದಿನ ಸರಣಿಯನ್ನು 2-0 ಅಂತರದಲ್ಲಿ ಕಳೆದುಕೊಂಡಿತು. ಈ ಸೋಲು ಅಷ್ಟು ಕಾಡದೆ ಇದ್ದರೂ ಎರಡು 50 ಓವರ್​ ಪಂದ್ಯಗಳಲ್ಲಿ ಹೀನಾಯವಾಗಿ ಸೋತಿದ್ದು ಕ್ರಿಕೆಟ್ ಅಭಿಮಾನಿಗಳು ಹಾಗೂ ಮಾಜಿ ಕ್ರಿಕೆಟಿಗರಿಗೆ ಭಾರೀ ಬೇಸರ ತಂದೊಡ್ಡಿದೆ. ಆದ್ರೆ, ಈ ವಿಷಯ ಮಾತ್ರ ಪಾಕಿಸ್ತಾನದ ಕ್ರಿಕೆಟಿಗರಿಗೆ ಬಿರಿಯಾನಿ ತಿಂದಷ್ಟು ಖುಷಿ ಕೊಟ್ಟಿದೆ. ಆಲ್​ಔಟ್​ ಆಗಿ ಕಳಪೆ ಪ್ರದರ್ಶನ ನೀಡಿದ ರೋಹಿತ್ ಪಡೆಯನ್ನು ಗುರಿಯಾಗಿಸಿಕೊಂಡಿರುವ ಪಾಕ್ ಕ್ರಿಕೆಟಿಗರು, ಒಬ್ಬರಂತೆ ಒಬ್ಬರು ಇದೀಗ ಟೀಕಾಪ್ರಹಾರಕ್ಕೆ ಮುಂದಾಗಿದ್ದಾರೆ.

ಇದನ್ನೂ ಓದಿ: ಆ.15ರಂದು ಇಸ್ರೋ ಉಪಗ್ರಹ ಉಡಾವಣೆ; ಭೂ ಸರ್ವೆಕ್ಷಣಾ ಉದ್ದೇಶ 3 ಪೇಲೋಡ್ ಕಕ್ಷೆಗೆ

ಚಾಂಪಿಯನ್ಸ್ ಟ್ರೋಫಿ 2025ರ ಅತಿಥ್ಯ ವಹಿಸಿಕೊಂಡಿರುವ ಪಾಕಿಸ್ತಾನ, ತಮ್ಮ ನೆಲಕ್ಕೆ ಭಾರತವನ್ನು ಕರೆಸಿಕೊಳ್ಳಲು ನಾನಾ ಕಸರತ್ತು ನಡೆಸುತ್ತಿತ್ತು. ಅದಕ್ಕೆ ಬಲವಾದ ಕಾರಣಗಳು ಸಿಗುತ್ತಿರಲಿಲ್ಲ. ಆರಂಭಿಕ ಹಂತದಲ್ಲಿ ಬಿಸಿಸಿಐ ಮೊರೆ ಹೋಗಿದ್ದ ಪಾಕ್​, ತದನಂತರ ಐಸಿಸಿಗೆ ಗಾಳ ಹಾಕಿತ್ತು. ಇದ್ಯಾವುದು ಕೂಡ ತಮಗೆ ಲಾಭ ತಂದುಕೊಡುತ್ತಿಲ್ಲ ಎಂದು ತಿಳಿದ ಮಾಜಿ ಆಟಗಾರರು, ಈಗ ತಮ್ಮ ಟೀಕಾಪ್ರಹಾರದಿಂದ ಟೀಮ್ ಇಂಡಿಯಾವನ್ನು ಕೆರಳಿಸಲು ಮುಂದಾಗಿದ್ದಾರೆ. ಅದರಲ್ಲೂ ಇದೀಗ ಶ್ರೀಲಂಕಾ ವಿರುದ್ಧದ ಏಕದಿನ ಸರಣಿ ಸೋತ ಬಳಿಕ ಟೀಕಗೆಳು ಮತ್ತಷ್ಟು ಹೆಚ್ಚಿವೆ.

ರೋಹಿತ್ ಶರ್ಮ ನೇತೃತ್ವದ ಏಕದಿನ ತಂಡದ ವಿರುದ್ಧ ವ್ಯಂಗ್ಯವಾಡಿದ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ತನ್ವಿರ್ ಅಹಮ್ಮದ್​, “ಶರ್ಮ, ವಿರಾಟ್ ಕೊಹ್ಲಿ ಮತ್ತು ಜಸ್ಪ್ರಿತ್ ಬುಮ್ರಾ ಇಲ್ಲದ ಭಾರತ ತಂಡವನ್ನು ಪಾಕ್ ಅತ್ಯಂತ ಸುಲಭವಾಗಿ ಮಣಿಸಲಿದೆ. ನಿಮ್ಮ ಟೀಮ್​ನಲ್ಲಿ ಬೌಲಿಂಗ್ ಲೈನ್ ಪರವಾಗಿಲ್ಲ. ಆದ್ರೆ, ಬ್ಯಾಟಿಂಗ್ ಅಷ್ಟು ಪ್ರಯೋಜನವಿಲ್ಲ. ಕ್ರೀಸ್​ನಲ್ಲಿ ನಿಂತು ಬ್ಯಾಟ್ ಮಾಡಲು ಪರದಾಡುತ್ತೀರಾ” ಎಂದರು.

ಇದನ್ನೂ ಓದಿ: ನಾನು ಸಿಂಗಲ್ ಎಂದೂ ಯಾವತ್ತೂ ಹೇಳಿಲ್ಲ.. ಕೀರ್ತಿ ಸುರೇಶ್ ಇಂಟರೆಸ್ಟಿಂಗ್ ಕಾಮೆಂಟ್ಸ್!

“ಟೀಮ್ ಇಂಡಿಯಾ ಮುಂದಿನ ಭವಿಷ್ಯ ಕಷ್ಟವಾಗಲಿದೆ. ರೋಹಿತ್ ಮತ್ತು ಕೊಹ್ಲಿ ಹೊರತುಪಡಿಸಿದರೆ ಇನ್ಯಾರು ಕೂಡ ತಂಡವನ್ನು ಮುನ್ನಡೆಸಲು ಸಾಧ್ಯವಿಲ್ಲ. ಅಂತಹ ಪರಿಸ್ಥಿತಿ ನಿರ್ಮಾಣವಾಗಲಿದೆ” ಎಂದು ಲೇವಡಿ ಮಾಡಿದ್ದಾರೆ,(ಏಜೆನ್ಸೀಸ್).

ಬ್ರೆಜಿಲ್​ ವಿಮಾನ ದುರಂತ: ಮೃತರ ಸಂಖ್ಯೆ 62 ಅಲ್ಲ 63 ಆಗಬೇಕಿತ್ತು! ಕಣ್ಣೀರಿಟ್ಟ ಬದುಕುಳಿದ ಪ್ರಯಾಣಿಕ

Share This Article

ದೀಪಾವಳಿಗೆ ಮನೆ ಸ್ವಚ್ಛ ಮಾಡ್ತಾ ಇದ್ದೀರಾ? ಮನೆಯಲ್ಲಿ cockroach ಇದ್ರೆ ಹೀಗೆ ಮಾಡಿ…

ಬೆಂಗಳೂರು: ಅನೇಕ ಜನರು ತಮ್ಮ ಮನೆಯಲ್ಲಿ ಜಿರಳೆಗಳ ( cockroach )  ಸಮಸ್ಯೆಯನ್ನು ಎದುರಿಸುತ್ತಾರೆ. ಅವುಗಳನ್ನು…

Crab Sukka : ಭಾನುವಾರದ ಬಾಡೂಟಕ್ಕೆ ಮಾಡಿ ರುಚಿಯಾದ ಏಡಿ ಸುಕ್ಕ..

ಬೆಂಗಳೂರು: ವಾರದ ಕೊನೆಯಲ್ಲಿ ಮಧ್ಯಾಹ್ನದ ಸಮಯಕ್ಕೆ ರುಚಿಯಾದ ಅಡುಗೆ ಏನಾದರು ಮಾಡುವ ಪ್ಲಾನ್ (Plan)​ ಹಾಕಿಕೊಂಡಿದ್ದೀರಾ?ಆದಿತ್ಯವಾರದಂದು…

ಹಾವು ಕಚ್ಚಿದಾಗ ಮಾಡುವ ಈ ಒಂದು ತಪ್ಪಿನಿಂದ ಪ್ರಾಣ ಹೋಗುತ್ತೆ ಎಚ್ಚರ! ಈ ರೀತಿ ಮಾಡೋದನ್ನು ತಪ್ಪಿಸಿ | Snakes

ಕೊಲ್ಲಂ: ಹಾವುಗಳು ( Snakes ) ಕಚ್ಚಿದ ಸಂದರ್ಭದಲ್ಲಿ ಯಾವ ಹಾವು ಕಚ್ಚಿತ್ತು ಎಂಬುದನ್ನು ತಿಳಿದುಕೊಳ್ಳಲು…