ತನ್ನ ಮದ್ವೆಯಲ್ಲಿ ಭಾರತೀಯ ಉಡುಗೆ ತೊಟ್ಟ ಪಾಕ್​ ನಟಿ ವಿರುದ್ಧ ಕಿಡಿ: ನೆಟ್ಟಿಗರ ವಾದ ಹೀಗಿದೆ….

Photo of Ushna Shah Pak Actress
Published on

ಇಸ್ಲಮಾಬಾದ್​: ಮದುವೆಯಲ್ಲಿ ಭಾರತೀಯ ಉಡುಗೆ ಧರಿಸಿದ್ದಕ್ಕೆ ಪಾಕಿಸ್ತಾನದ ನಟಿಯೊಬ್ಬಳು ತೀವ್ರ ಟೀಕೆಗೆ ಗುರಿಯಾಗಿದ್ದಾಳೆ.

ನಟಿ ಉಷ್ನಾ ಶಾ ಅವರು ತನ್ನ ಮದುವೆಯಲ್ಲಿ ಭಾರತೀಯ ಉಡುಗೆ ಧರಿಸಿದ್ದನ್ನು ವಿರೋಧಿಸಿ ಪಾಕ್​ನಲ್ಲಿ ಹಲವಾರು ಜನರು ಆಕೆಯನ್ನು ನಿಂದಿಸಿರುವುದಲ್ಲದೆ, ಅಪಹಾಸ್ಯ ಮಾಡಿದ್ದಾರೆ. ಉಷ್ನಾ ಅವರು ಗಾಲ್ಫ್ ಆಟಗಾರ ಹಮ್ಜಾ ಅಮೀನ್ ಅವರನ್ನು ವಿವಾಹವಾದರು. ಈ ಜೋಡಿಯ ವಿವಾಹದ ಫೋಟೋಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಲು ಪ್ರಾರಂಭಿಸಿದ ನಂತರ ವಿವಾದ ಭುಗಿಲೆದ್ದಿತು.

ಉಷ್ನಾ ಅವರು ಸಾಂಪ್ರದಾಯಿಕ ಭಾರತೀಯ ಉಡುಪುಗಳು ಮತ್ತು ಆಭರಣಗಳನ್ನು ಧರಿಸಿದ್ದಾರೆ ಎಂದು ಅನೇಕ ಮಂದಿ ಉಷ್ನಾ ಪೋಸ್ಟ್​ ಮಾಡಿರುವ ಫೋಟೋಗಳಿಗೆ ಕಾಮೆಂಟ್ ಮಾಡಿದ್ದಾರೆ. ಇತ್ತೀಚೆಗೆ, ಹಲವಾರು ಪಾಕಿಸ್ತಾನಿ ಹುಡುಗಿಯರು ತಮ್ಮ ಮದುವೆಗೆ ಇದೇ ರೀತಿಯ ಭಾರತೀಯ ಉಡುಗೆಗಳನ್ನು ಧರಿಸುತ್ತಿದ್ದಾರೆ. ಈ ಪ್ರವೃತ್ತಿ ಸರಿಯಲ್ಲ ಮತ್ತು ಪಾಕಿಸ್ತಾನದಲ್ಲಿರುವ ಜನರು ಭಾರತೀಯ ಸಂಸ್ಕೃತಿಯನ್ನು ಪ್ರಚಾರ ಮಾಡಬಾರದು ಎಂದು ಅವರು ಪಾಕಿಸ್ತಾನದ ನೆಟ್ಟಿಗರು ವಾದಿಸಿದರು.

ತನ್ನ ಮದುವೆಯ ಉಡುಗೆಯ ಬಗ್ಗೆ ವಿವಾದ ಭುಗಿಲೆದ್ದ ಬೆನ್ನಲ್ಲೇ ಎಲ್ಲ ಟೀಕೆಗಳಿಗೆ ಉಷ್ನಾ ಸ್ವತಃ ಉತ್ತರವನ್ನು ನೀಡಿದ್ದಾರೆ. ತನ್ನ ಮದುವೆಯ ಉಡುಗೆ, ಉಂಗುರ ಮತ್ತು ಮೆಹಂದಿಯ ಚಿತ್ರವನ್ನು ಹಂಚಿಕೊಳ್ಳುವ ಮೂಲಕ ತಿರುಗೇಟು ನೀಡಿದ್ದಾರೆ.

ನನ್ನ ಡ್ರೆಸ್‌ ಬಗ್ಗೆ ಅಸಮಾಧಾನ ಹೊಂದಿರುವವರಿಗೆ ನಾನು ಹೇಳುವುದೇನೆಂದರೆ, ನಾನು ನಿಮ್ಮನ್ನು ಮದುವೆಗೆ ಆಹ್ವಾನಿಸಿಲ್ಲ ಅಥವಾ ನನ್ನ ಉಡುಗೆಗೆ ನೀವೇನು ಹಣ ಪಾವತಿಸಿಲ್ಲ. ನನ್ನ ಆಭರಣ, ನನ್ನ ಜೋರಾ ಎಲ್ಲವೂ ಸಂಪೂರ್ಣ ಪಾಕಿಸ್ತಾನಿ ಸಂಪ್ರದಾಯದ್ದಾಗಿದೆ. ನನ್ನ ಹೃದಯವೂ ಕೂಡ. ಆದರೆ, ನಾನು ಅರ್ಧ ಆಸ್ಟ್ರಿಯನ್ ಎಂದು ಉಷ್ನಾ ಅವರು ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಬರೆದುಕೊಂಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net