More

    ಬೇಸಿಗೆಗೆ ಬೆಸ್ಟ್ ಫೇಸ್ ಮಿಸ್ಟ್: ತ್ವಚೆಗೆ ಏನೆಲ್ಲ ಲಾಭಗಳಿವೆ? ಯಾವ ಸಮಯದಲ್ಲಿ ಬಳಸಬೇಕು?

    ಫೇಸ್ ಮಿಸ್ಟ್… ಇತ್ತೀಚಿನ ದಿನಗಳಲ್ಲಿ ಇದನ್ನು ಉಪಯೋಗಿ ಸುವವರ ಸಂಖ್ಯೆ ಹೆಚ್ಚಾಗುತ್ತಿದೆ. ಸಾಮಾನ್ಯವಾಗಿ ಸುಡು ಬಿಸಿಲಿನಲ್ಲಿ ತ್ವಚೆ ತಂಪಾಗಿಡಲು ಫೇಸ್ ಮಿಸ್ಟ್ ಬಳಸಲಾಗುತ್ತದೆ. ಇದು ಸನ್ ಬರ್ನ್ಸ್ ಮತ್ತು ಉರಿಯೂತವನ್ನು ಶಮನಗೊಳಿಸಲು ಸಹಾಯ ಮಾಡುತ್ತದೆಯಲ್ಲದೆ, ತ್ವಚೆಯನ್ನು ಫ್ರೆಶ್ ಆಗಿ ಕಾಣುವಂತೆ ಮಾಡುತ್ತದೆ. ಕೆಲವರು ರೆಡಿಮೇಡ್ ಫೇಸ್ ಮಿಸ್ಟ್ ಖರೀದಿಸಿದರೆ, ಮತ್ತೆ ಕೆಲವರು ಮನೆಯಲ್ಲಿಯೇ ತಯಾರಿಸುತ್ತಾರೆ. ಅಂದಹಾಗೆ ಫೇಸ್ ಮಿಸ್ಟ್​ನಿಂದ ತ್ವಚೆಗೆ ಏನೆಲ್ಲಾ ಲಾಭಗಳಿವೆ?, ಯಾವ ಸಮಯದಲ್ಲಿ ಬಳಸಬೇಕು ನೋಡೋಣ ಬನ್ನಿ…

    | ಅಶ್ವಿನಿ ಎಚ್.ಆರ್. ಬೆಂಗಳೂರು

    ಫೇಸ್ ಮಿಸ್ಟ್?

    ಅನೇಕರಿಗೆ ಫೇಸ್ ಮಿಸ್ಟ್ ಪದ ಹೊಸತಂತೆ ಅನಿಸಿದರೂ ಇದು ಬಹಳ ವರ್ಷಗಳಿಂದಲೂ ಬಳಕೆಯಲ್ಲಿದೆ. ಸಾಮಾನ್ಯ ವಾಗಿ ಫೇಸ್ ಮಿಸ್ಟ್ ಅನ್ನು ಕ್ಲೆನ್ಸಿಂಗ್ ಮತ್ತು ಮೊಯಿ ಶ್ಚರೈಸಿಂಗ್ ಹಂತಗಳ ನಡುವೆ ಬಳಸಲಾಗುತ್ತದೆ. ಸೋಪಿಗಿಂತ ಫೇಸ್ ಮಿಸ್ಟ್ ಬಳಸುವುದರಿಂದ ತ್ವಚೆ ಯಲ್ಲಿನ ಪಿಎಚ್ ಬ್ಯಾಲೆನ್ಸ್ ಸಮತೋಲನದಲ್ಲಿಡಲು ಸಹಾಯ ಮಾಡುತ್ತದೆ ಎನ್ನುತ್ತಾರೆ ತಜ್ಞರು.

    ಪ್ರಯೋಜನಗಳೇನು?

    ಫೇಸ್ ಮಿಸ್ಟ್ ತ್ವಚೆಯನ್ನು ರಿಫ್ರೆಶ್ ಮಾಡಿ, ಹಿತವಾಗಿ ತಂಪಾಗಿಸುವುದರ ಜತೆಗೆ ಹಲವಾರು ಪ್ರಯೋಜನಗಳನ್ನು ನೀಡುತ್ತದೆ. ಕೆಲವು ಫೇಸ್ ಮಿಸ್ಟ್ ಗಳು ಅರೋಮಾಥೆರಪಿಯಾಗಿ ಕೆಲಸ ಮಾಡುತ್ತವೆ. ಏಕೆಂದರೆ ಇದು ಸಸ್ಯದ ಸಾರಗಳು ಮತ್ತು ಸಾರಭೂತ ತೈಲಗಳನ್ನು ಹೊಂದಿದೆ. ಪರಿಮಳಯುಕ್ತ ಫೇಸ್ ಮಿಸ್ಟ್ ಅನ್ನು ವಿಶೇಷವಾಗಿ ಪ್ರಯಾಣದ ಸಮಯದಲ್ಲಿ ಬಳಸುವುದರಿಂದ ಮನಸ್ಸು ಉಲ್ಲಾಸದಿಂದಿರುತ್ತದೆ. ಅಷ್ಟೇ ಅಲ್ಲ, ಫೇಸ್ ಮಿಸ್ಟ್​ಗಳಲ್ಲಿ ವಿಟಮಿನ್ ಸಿ, ವಿಟಮಿನ್ ಇ, ಅಥವಾ ಫೆರುಲಿಕ್ ಆಮ್ಲದಂತಹ ಉತ್ಕರ್ಷಣ ನಿರೋಧಕಗಳಿವೆ.

    ಇದನ್ನೂ ಓದಿ: ಪ್ರಧಾನಿ ಮೋದಿ ಕಾರ್ಯಕ್ರಮಕ್ಕೆ ಬಂದಿದ್ದ ಬಿಜೆಪಿ ಕಾರ್ಯಕರ್ತ ಕುಸಿದು ಬಿದ್ದು ಸಾವು

    ಬಳಸುವುದು ಹೇಗೆ?

    ಫೇಸ್​ವಿುಸ್ಟ್ ಅನ್ನು ಮುಖ ಮತ್ತು ಕುತ್ತಿಗೆಯ ಮೇಲೆ ನೇರವಾಗಿ ಅಪ್ಲೈ ಮಾಡಬಹುದು ಅಥವಾ ಕಾಟನ್ ಬಳಸಿ ಟೋನರ್ ಆಗಿ ಉಪಯೋಗಿಸಬಹುದು.

    ಮನೆಯಲ್ಲಿಯೇ ತಯಾರಿಸಿ

    ಸೌತೆಕಾಯಿ ವಿಶೇಷವಾಗಿ ತ್ವಚೆಯ ಮೇಲೆ ಅತ್ಯಂತ ಹಿತವಾದ ಭಾವನೆ ನೀಡುತ್ತದೆ. ಹಾಗಾಗಿ ಮನೆಯಲ್ಲಿಯೇ ಫೇಸ್ ಮಿಸ್ಟ್ ತಯಾರಿಸುವವರು ಒಂದು ಸೌತೆಕಾಯಿಯನ್ನು ತುರಿಯಿರಿ. ತುರಿದ ನಂತರ ರಸವನ್ನು ಸೋಸಿಕೊಳ್ಳಿ. ಈ ರಸವನ್ನು ಸ್ಪ್ರೇ ಬಾಟಲಿಯಲ್ಲಿ ಒಂದು ಚಮಚ ರೋಸ್​ವಾಟರ್, ಪುದೀನಾ ಎಲೆಗಳು ಮತ್ತು ಒಂದು ಚಮಚ ನಿಂಬೆ ರಸದೊಂದಿಗೆ ಮಿಶ್ರಣ ಮಾಡಿ. ನಂತರ ಮುಖದ ಮೇಲೆ ಸಿಂಪಡಿಸಿ.

    ಇದೋ ಬಂದಿದೆ ಕಿಸ್ಸಿಂಗ್ ಡಿವೈಸ್; ಚುಂಬಿಸುವ ಇಬ್ಬರು ಎಷ್ಟೇ ದೂರದಲ್ಲಿದ್ದರೂ ಸಿಗುವುದು ನೈಜ ಮುತ್ತಿನ ಗಮ್ಮತ್ತು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts