More

    ಇದೋ ಬಂದಿದೆ ಕಿಸ್ಸಿಂಗ್ ಡಿವೈಸ್; ಚುಂಬಿಸುವ ಇಬ್ಬರು ಎಷ್ಟೇ ದೂರದಲ್ಲಿದ್ದರೂ ಸಿಗುವುದು ನೈಜ ಮುತ್ತಿನ ಗಮ್ಮತ್ತು!

    ನವದೆಹಲಿ: ಪ್ರೀತಿಸುವ ಹೃದಯಗಳನ್ನು ಬೆಸೆದು ಕೊಂಡಿರುವಂತೆ ಮಾಡಲು ಅಂತರವೊಂದು ಸಮಸ್ಯೆಯೇ ಅಲ್ಲ. ಪ್ರೀತಿ ಇದ್ದಾಗ ಪ್ರೀತಿಸುವವರು ಎಷ್ಟೇ ದೂರದಲ್ಲಿದ್ದರೂ ಮನಸು-ಹೃದಯ ಒಂದು ಅವ್ಯಕ್ತ ಅಗೋಚರ ಸಂಬಂಧ ಹೊಂದಿರುತ್ತವೆ.

    ಪ್ರೀತಿಸುವವರು ಎಷ್ಟೇ ದೂರದಲ್ಲಿದ್ದರೂ ಪ್ರೀತಿಯನ್ನು ಪರಸ್ಪರ ಫೀಲ್​ ಮಾಡಬಹುದು. ಆದರೆ ಅವರೇ ಚುಂಬನವನ್ನು ಆಲಿಂಗನವನ್ನು ಅನುಭವಿಸಬೇಕು ಎಂದರೆ ಕೈಗೆಟುಕುವಷ್ಟು ಹತ್ತಿರದಲ್ಲೇ ಇರಬೇಕು. ಅದಾಗ್ಯೂ ಇದೀಗ ಎಷ್ಟೇ ದೂರದಲ್ಲಿದ್ದರೂ ಪ್ರೀತಿಸುವವರಿಬ್ಬರು ಪರಸ್ಪರ ಚುಂಬಿಸಬಹುದು. ಹಾಗಂತ ಇದು ಫ್ಲೈಯಿಂಗ್ ಕಿಸ್​ ಥರ ಅಲ್ಲ ಮತ್ತು ನಿಜವಾದ ಮುತ್ತಲ್ಲದಿದ್ದರೂ ನಿಜವಾದ ಕಿಸ್​ ಕೊಡುವ ಫೀಲ್​ಗೇನೂ ಕಡಿಮೆ ಇರುವುದಿಲ್ಲ. ದೂರದಿಂದಲೇ ಅಂಥದ್ದೊಂದು ನೈಜ ಮುತ್ತಿನ ಅನುಭವಕ್ಕೆಂದೇ ಚುಂಬನ ಸಾಧನ ಅರ್ಥಾತ್ ಕಿಸ್ಸಿಂಗ್ ಡಿವೈಸ್ ಇದೀಗ ಲಭ್ಯವಿದೆ.

    ಇದನ್ನೂ ಓದಿ: ಆಸ್ತಿ ಆಸೆಗೆ ಒಂದೇ ಮನೆಯ ನಾಲ್ವರ ಕೊಲೆ; ಮಕ್ಕಳಿಬ್ಬರ ಪ್ರಾಣ ಉಳಿಸಿತೇ ನಿದ್ರೆ-ಆಟ!?

    ಚೀನಾದ ಜಿಯಾಂಗ್ ಝೋಂಗ್ಲಿ ಎಂಬಾತ ಈ ಸಾಧನನ್ನು ವಿನ್ಯಾಸ ಮಾಡಿದ್ದಾನೆ. ದೂರದಲ್ಲಿರುವ ತನ್ನ ಪ್ರೇಯಸಿಗೆ ಮುತ್ತು ಕೊಡಲು ಹಾಗೂ ಅದು ಹತ್ತಿರದಲ್ಲೇ ಇದ್ದು ಕೊಡುವ ಮುತ್ತಿನಷ್ಟೇ ನೈಜ ಅನುಭವ ನೀಡಲು ಆತ ಈ ಉಪಕರಣ ಕಂಡು ಹಿಡಿದಿದ್ದಾನೆ. ಇದನ್ನು ಚೀನಾದ ಚಾಂಗ್​ಝೌ ಯುನಿವರ್ಸಿಟಿಯಲ್ಲಿ ಅಭಿವೃದ್ಧಿ ಪಡಿಸಲಾಗಿದೆ.

    ಇದನ್ನೂ ಓದಿ: ಪತಿ ಹೃದಯಾಘಾತಕ್ಕೆ ಬಲಿ; ಒಂದೇ ಉರುಳಿಗೆ ಮಗನೊಂದಿಗೆ ಕೊರಳೊಡ್ಡಿ ಪ್ರಾಣ ಬಿಟ್ಟ ಪತ್ನಿ

    ಈ ಚುಂಬನ ಸಾಧನ ಟಚ್ ಸೆನ್ಸರ್, ಆ್ಯಕ್ಚುವೇಟರ್ಸ್​ ಹಾಗೂ ಸಿಲಿಕಾನ್ ಲಿಪ್​ಗಳನ್ನು ಒಳಗೊಂಡಿದೆ. ಇದರ ಮೂಲಕ ಮುತ್ತು ಹಂಚಿಕೊಂಡಾಗ ನಿಜವಾದ ಚುಂಬನದ ಸಂದರ್ಭದಲ್ಲಿನ ಚಲನೆ, ಶಬ್ದ ಹಾಗೂ ಬೆಚ್ಚನೆಯ ಅನುಭವ ಲಭಿಸಲಿದೆಯಂತೆ.

    ಇದನ್ನೂ ಓದಿ: ಅವರು ತಂದೆಯಂತೆ, ರಾಜಕೀಯವಾಗಿ ಬಿಎಸ್​​ವೈ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುವುದಿಲ್ಲ: ಜನಾರ್ದನ ರೆಡ್ಡಿ

    ಈ ಸಾಧನವನ್ನು ಬಳಸುವವರು ತಮ್ಮ ಮೊಬೈಲ್​ಫೋನ್​ನಲ್ಲಿ ಆ್ಯಪ್​ವೊಂದನ್ನು ಇನ್​ಸ್ಟಾಲ್ ಮಾಡಿಕೊಳ್ಳಬೇಕಾಗುತ್ತದೆ ಮತ್ತು ಈ ಸಾಧನವನ್ನು ಅವರ ಫೋನ್​ ಚಾರ್ಜಿಂಗ್ ಸಾಕೆಟ್​​ಗೆ ಅಳವಡಿಸಿಕೊಳ್ಳಬೇಕಾಗುತ್ತದೆ. ಪರಸ್ಪರ ಮುತ್ತು ಕೊಡಬೇಕಾದವರು ಈ ಆ್ಯಪ್​ ಬಳಸಿಕೊಂಡು ವಿಡಿಯೋ ಕಾಲ್ ಮಾಡಬೇಕಾಗುತ್ತದೆ. ನಂತರ ಅವರು ಮುತ್ತು ಕೊಟ್ಟರೆ ಇಬ್ಬರೂ ಹತ್ತಿರವಿದ್ದು ಮುತ್ತು ಕೊಟ್ಟಷ್ಟೇ ನೈಜವಾಗಿರುತ್ತದೆಯಂತೆ. ಇದೀಗ ಈ ಕಿಸ್ಸಿಂಗ್ ಡಿವೈಸ್ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡಲಾರಂಭಿಸಿದೆ.

    19ರ ಯುವಕ ಡ್ಯಾನ್ಸ್​ ಮಾಡುತ್ತಲೇ ಕುಸಿದು ಬಿದ್ದು ಸಾವು; ಸಂಭ್ರಮದ ಸಂದರ್ಭದಲ್ಲೇ ಶೋಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts