ಗ್ರಾಮಸ್ಥರು, ಜನಪ್ರತಿನಿಧಿಗಳ ಸಹಯೋಗದಿಂದ ಗ್ರಾಮಾಭಿವೃದ್ಧಿ : ಕೆ.ಮಹಮ್ಮದ್ ರಫೀಕ್ ಪ್ರತಿಪಾದನೆ

New Project (22)
Published on

ಉಳ್ಳಾಲ: ಜನಪ್ರತಿನಿಧಿಗಳು, ಅಧಿಕಾರಿಗಳು, ಗ್ರಾಮಸ್ಥರು ಒಗ್ಗಟ್ಟಾಗಿ ಕೆಲಸ ಮಾಡಿದಾಗ ಗ್ರಾಮದ ಅಭಿವೃದ್ಧಿ ಸಾಧ್ಯ ಎನ್ನುವುದಕ್ಕೆ ಪಜೀರ್ ಗ್ರಾಮ ಸಾಕ್ಷಿ. ಸ್ಪೀಕರ್ ಖಾದರ್ ಅವರು ಎರಡನೇ ಹಂತದಲ್ಲಿ 60 ಲಕ್ಷ ರೂ. ಅನುದಾನ ಘೋಷಣೆ ಮಾಡಿದ್ದು ಬಾಕಿಯುಳಿದ ರಸ್ತೆಗಳ ಅಭಿವೃದ್ಧಿ ಕಾಮಗಾರಿ ನಡೆಯಲಿದೆ ಎಂದು ಪಜೀರ್ ಗ್ರಾಪಂ ಅಧ್ಯಕ್ಷ ಕೆ.ಮಹಮ್ಮದ್ ರಫೀಕ್ ತಿಳಿಸಿದರು.

ಸ್ಪೀಕರ್ ಯು.ಟಿ.ಖಾದರ್ ಅನುದಾನದಲ್ಲಿ ಪಜೀರ್ ಗ್ರಾಪಂ ಸಂಪರ್ಕ ರಸ್ತೆ, ಮಾದುಮೂಲೆ ಮತ್ತು ಜೋಗಿಬೆಟ್ಟು ರಸ್ತೆ ಕಾಂಕ್ರೀಟ್ ಕಾಮಗಾರಿಗೆ ಸೋಮವಾರ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕಾಲುದಾರಿ ರಸ್ತೆಯಾಗಿ ಮಾರ್ಪಡಿಸಿದ ಬಳಿಕ ಗ್ರಾ.ಪಂ. ಕಚೇರಿಗೆ ತೆರಳಲು ಸಾರ್ವಜನಿಕರಿಗೆ ಅನುಕೂಲ ಆಗಿರುವುದರಿಂದ ಸ್ಥಳೀಯರ ಸಹಕಾರದಲ್ಲಿ 12 ಅಡಿ ಅಗಲದ ರಸ್ತೆಯನ್ನಾಗಿ ಮಾರ್ಪಡಿಸುವ ಪ್ರಯತ್ನ ನಡೆಸಲಾಗುತ್ತಿದೆ. ಟ್ಯಾಂಕ್ ನಿರ್ಮಿಸಿ ಸ್ಥಳೀಯ ಪ್ರದೇಶದಲ್ಲಿ ನೀರಿನ ಸಮಸ್ಯೆ ಬಗೆಹರಿಸಲಾಗಿದೆ ಎಂದು ಮಾಜಿ ಅಧ್ಯಕ್ಷ ಇಮ್ತಿಯಾಝ್ ಪಜೀರು ತಿಳಿಸಿದರು.

ಗ್ರಾಪಂ ಉಪಾಧ್ಯಕ್ಷೆ ಫ್ಲೋರಿನ್ ಡಿಸೋಜ, ಮಾಜಿ ಅಧ್ಯಕ್ಷರಾದ ಭರತ್‌ರಾಜ್ ಶೆಟ್ಟಿ ಪಜೀರುಗುತ್ತು, ಸೀತಾರಾಮ ಶೆಟ್ಟಿ, ನಝೀರ್ ಮೊಯಿದ್ದೀನ್, ಬಂಟ್ವಾಳ ತಾಪಂ ಮಾಜಿ ಅಧ್ಯಕ್ಷ ಚಂದ್ರಹಾಸ ಕರ್ಕೇರ, ಮಾಜಿ ಸದಸ್ಯ ಸೇಸಪ್ಪ ಟೈಲರ್, ಗ್ರಾ.ಪಂ. ಸದಸ್ಯರಾದ ಶೇಖರ್, ಸೆವರಿನ್, ಮೀನಾಕ್ಷಿ, ಅಭಿವೃದ್ಧಿ ಅಧಿಕಾರಿ ಶ್ರೀಕಾಂತ್ ಸಿಂಪಗಿರಿ, ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘದ ಅಧ್ಯಕ್ಷ ವಿಜೇತ್ ಪಜೀರು, ಪಜೀರು ಮಸೀದಿ ಉಪಾಧ್ಯಕ್ಷ ಸಿ.ಎಚ್.ಮೊಯ್ದೀನ್, ಕಾರ್ಯದರ್ಶಿ ಅಬೂಬಕ್ಕರ್, ಪ್ರಮುಖರಾದ ಯೂಸುಫ್ ಪಾನೇಲ, ಶಾಫಿ ಪಾನೇಲ, ಗಂಗಾಧರ ಮಾಸ್ಟರ್ ಸುದರ್ಶನನಗರ, ಬಶೀರ್, ರೋಶನ್, ಬೆನಡಿಕ್ಟ್, ಉಮೇಶ್, ಅಬ್ದುಲ್ ಖಾದರ್, ಎಲ್.ಟಿ.ಸುವರ್ಣ, ಹಿರಿಯರಾದ ಮಹಮ್ಮದ್, ಶುಕೂರು ಇನ್ನಿತರರು ಉಪಸ್ಥಿತರಿದ್ದರು. ಗ್ಯಾರಂಟಿ ಸಮಿತಿ ಸದಸ್ಯ ಸಮೀರ್ ಪಜೀರ್ ಸ್ವಾಗತಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net