ಕುಕ್ಕೆಯಲ್ಲಿ ಬಲೀಂದ್ರ ಕಂಬಕ್ಕೆ ಪೂಜೆ

New Project (18)
Published on

ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇಗುಲದಲ್ಲಿ ದೀಪಾವಳಿ ಅಮಾವಾಸ್ಯೆ ಹಿನ್ನೆಲೆಯಲ್ಲಿ ಸೋಮವಾರ ಬಲೀಂದ್ರ(ದೀಪಾಲೆ) ಮರವನ್ನು ಸಂಪ್ರದಾಯದ ಪ್ರಕಾರ ಏರಿಸಲಾಯಿತು.

ದೀಪಾಲೆ ಮರವನ್ನು ದೇವಳದ ಮುಂಭಾಗದಲ್ಲಿ ಇರಿಸಿ ತೀರ್ಥ ಸಿಂಪಡಿಸಿ ಪ್ರಸಾದ ಹಚ್ಚಲಾಯಿತು. ಪುಷ್ಪಾಲಂಕಾರ ಮಾಡಿ ಹೊರಾಂಗಣದಲ್ಲಿ ದೇಗುಲದ ಗರ್ಭಗುಡಿ ಮುಂಭಾಗದಲ್ಲಿ ಏರಿಸಲಾಯಿತು. ರಾತ್ರಿ ಅವಲಕ್ಕಿ ಪಲ್ಲಪೂಜೆ ಬಳಿಕ ಬಲೀಂದ್ರ ಕಂಬಕ್ಕೆ ಪೂಜೆ, ಪ್ರಸಾದ ವಿತರಣೆ ನಡೆಯಿತು.

ದೇಗುಲ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಎಸ್.ಇಂಜಾಡಿ, ಸಹಾಯಕ ಕಾರ್ಯನಿರ್ವಹಣಾಧಿಕಾರಿ ಎಸ್.ಜೆ.ಯೇಸುರಾಜ್, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಡಾ.ರು, ಸೌಮ್ಯಾ ಭರತ್, ಲೀಲಾ ಮನಮೋಹನ್, ಪ್ರವೀಣ ರೈ ಮರುವಂಜ ಮೊದಲಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net