

ವಿಜಯವಾಣಿ ಸುದ್ದಿಜಾಲ ಬಂಟ್ವಾಳ
ಸಾಧನೆ ಮಾಡುವ ಮನಸ್ಸಿದ್ದರೆ ಪ್ರಕೃತಿಯೇ ನಮಗೆ ಬೆಂಬಲವಾಗಿ ನಿಲ್ಲುತ್ತದೆ. ಸಮಸ್ಯೆಯನ್ನು ಮೀರಿ ನಿಲ್ಲುತ್ತೇವೆ ಎನ್ನುವ ಛಲ ಇದ್ದಾಗ ಸಾಧನೆ ಮಾಡಲು ಸಾಧ್ಯ ಎಂದು ಸಹಕಾರ ಸಂಗಳ ಜಂಟಿ ನಿಬಂಧಕಿ ಯಶಸ್ವಿನಿ ಶೆಟ್ಟಿ ಹೇಳಿದರು.
ಬಂಟರ ಸಂ ಬಂಟ್ವಾಳ ತಾಲೂಕು ವತಿಯಿಂದ ಮುಂಬೈ ಅಲ್ ಕಾರ್ಗೋ ಲಾಜಿಸ್ಟಿಕ್ ಅಧ್ಯಕ್ಷ ಡಾ.ಶಶಿಕಿರಣ್ ಶೆಟ್ಟಿ ಸಹಕಾರದೊಂದಿಗೆ ರಾಮಲ್‌ಕಟ್ಟೆ ಬಂಟವಾಳ ಬಂಟರ ಭವನದಲ್ಲಿ ಆಯೋಜಿಸಲಾಗಿದ್ದ ಶಿಕ್ಷಣ ಮತ್ತು ಸಾಮಾಜಿಕ ಕಲ್ಯಾಣ ಕಾರ್ಯಕ್ರಮ ವಿದ್ಯಾರ್ಥಿವೇತನ ವಿತರಣಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಉಪ ಕುಲಪತಿ ವಿಶಾಲ್ ಹೆಗ್ಡೆ ಮಾತನಾಡಿದರು. ಅಲ್ ಕಾರ್ಗೋ ಲಾಜಿಸ್ಟಿಕ್ಸ್‌ನ ಸಿಎಸ್‌ಆರ್ ಪ್ರಧಾನ ವ್ಯವಸ್ಥಾಪಕ ಡಾ.ನೀಲ್ ರತನ್ ಶೆಂಡೆ ಶುಭಹಾರೈಸಿದರು. ಶಾಸಕ ರಾಜೇಶ್ ನಾಕ್, ಮಾಜಿ ಸಚಿವ ಬಿ.ರಮಾನಾಥ ರೈ ಭೇಟಿ ನೀಡಿದರು.
ಉಪಾಧ್ಯಕ್ಷ ಐತಪ್ಪ ಆಳ್ವ ಸುಜೀರುಗುತ್ತು, ಕೋಶಾಧಿಕಾರಿ ಲೋಕೇಶ್ ಶೆಟ್ಟಿ ಕುಳ, ಜತೆ ಕಾರ್ಯದರ್ಶಿ ಶಿವಪ್ರಸಾದ್ ಶೆಟ್ಟಿ, ಶಿಕ್ಷಣ ಮತ್ತು ಸಾಮಾಜಿಕ ಕಲ್ಯಾಣ ಸಮಿತಿ ಸಂಚಾಲಕ ಉಮಾನಾಥ ರೈ ಮೇರಾವು, ಜತೆ ಕೋಶಾಧಿಕಾರಿ ಶ್ರೀವಿದ್ಯಾ ಎ.ರೈ, ಮಹಿಳಾ ವಿಭಾಗದ ಅಧ್ಯಕ್ಷೆ ಸುಜಾತಾ ಪಿ.ರೈ, ಯುವ ವಿಭಾಗದ ಅಧ್ಯಕ್ಷ ಗೋಕುಲ್ ಭಂಡಾರಿ ಬಿಜಂದಾರ್ ಗುತ್ತು ಉಪಸ್ಥಿತರಿದ್ದರು.
ಸಂದ ಅಧ್ಯಕ್ಷ ಜಗನ್ನಾಥ ಚೌಟ ಬದಿಗುಡ್ಡೆ ಸ್ವಾಗತಿಸಿದರು. ವಿವೇಕ್ ಶೆಟ್ಟಿ ಬದಿಗುಡ್ಡೆ ಅತಿಥಿಗಳನ್ನು ಪರಿಚಯಿಸಿದರು. ಬಾಲಕೃಷ್ಣ ಆಳ್ವ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ಕಂಪ ಸದಾನಂದ ಆಳ್ವ ವಂದಿಸಿದರು.
ಸಾಧಕರಿಗೆ ಅಭಿನಂದನೆ
ಎ.ಜೆ. ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಶಾಂತಾರಾಮ ರೈ, ದೈಹಿಕ ಶಿಕ್ಷಣ ಶಿಕ್ಷಕ ಜಗದೀಶ್ ರೈ, ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಆಗಿ ಆಯ್ಕೆಯಾದ ಸುಶ್ಮಿತಾ ಶೆಟ್ಟಿ ಬದಿಗುಡ್ಡೆ, ನೌಕದಳ ಲೆಫ್ಟಿನೆಂಟ್ ವಿಭಾ ಶೆಟ್ಟಿ ಫರಂಗಿಪೇಟೆ ಅವರನ್ನು ಅಭಿನಂದಿಸಲಾಯಿತು. ಏರ್ಯ ಲಕ್ಷ್ಮೀನಾರಾಯಣ ಆಳ್ವ ದತ್ತಿನಿಧಿಯನ್ನು ಲಹರಿ ರೈ ಅವರಿಗೆ ನೀಡಲಾಯಿತು. ಒಟ್ಟು 60 ಲಕ್ಷ ರೂ. ಮೊತ್ತದ ವಿದ್ಯಾರ್ಥಿವೇತನ ವಿತರಿಸಲಾಯಿತು.