ಪಾದರಾಯನಪುರ ಕಾರ್ಪೊರೇಟರ್​ ಸಂಪರ್ಕದ ಪಾಲಿಕೆ ಅಧಿಕಾರಿಗಳಿಗೂ ಕರೊನಾ ಸೋಂಕು ದೃಢ

padarayanpura photo
Published on

ಬೆಂಗಳೂರು: ಪಾದರಾಯನಪುರ ವಾರ್ಡ್ ಕಾರ್ಪೊರೇಟರ್ ಇಮ್ರಾನ್ ಪಾಷಾ ಅವರ ಸಂಪರ್ಕದಲ್ಲಿದ್ದ ಪಾಲಿಕೆಯ ಶಿಕ್ಷಣ ವಿಭಾಗದ ಸಹಾಯಕ ಆಯುಕ್ತರಿಗೆ ಸೋಮವಾರ ಸೋಂಕು ದೃಢಪಟ್ಟಿದೆ.

ಇವರನ್ನು ಕ್ವಾರಂಟೈನ್ ಮಾಡಿ ಗಂಟಲು ದ್ರವ ಪರೀಕ್ಷೆ ನಡೆಸಿದಾಗ ಸೋಂಕು ಪತ್ತೆಯಾಗಿದೆ. ಸೋಂಕಿತ ಅಧಿಕಾರಿ ಕೇಂದ್ರ ಕಚೇರಿಯಲ್ಲಿ ನಿರಂತರ ಕೆಲಸ ಮಾಡಿದ್ದು, ವಾರ್ ರೂಂನಲ್ಲೂ ಕೆಲಸ ಮಾಡಿದ್ದು, ಆತಂಕ ಹೆಚ್ಚಾಗಿದೆ. ಇವರ ಸಂಪರ್ಕದಲ್ಲಿದ್ದ, ಇನ್ನಿಬ್ಬರು ಅಧಿಕಾರಿಗೂ ಕರೊನಾ ಸೋಂಕು ಪತ್ತೆಯಾಗಿದ್ದು, ಮತ್ತೊಮ್ಮೆ ಪರಿಶೀಲನೆ‌ ಮಾಡಲಾಗುವುದು ಎಂದು ಬಿಬಿಎಂಪಿ ಮುಖ್ಯ ಆರೋಗ್ಯಾಧಿಕಾರಿ ತಿಳಿಸಿದ್ದಾರೆ. ಆದರೆ ಮತ್ತಿಬ್ಬರು ಅಧಿಕಾರಿಗಳು ಯಾರು ಎನ್ನುವುದು ಇನ್ನು ಬಹಿರಂಗವಾಗಿಲ್ಲ...

ಬಿಬಿಎಂಪಿ ಕೇಂದ್ರ ಕಛೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗೆ ಸೋಂಕು ಪ್ರಕರಣ ಪತ್ತೆಯಾಗಿರುವ ಹಿನ್ನಲೆಯಲ್ಲಿ, ಅಧಿಕಾರಿ ಕರ್ತವ್ಯ ನಿರ್ವಹಿಸುತ್ತಿರುವ ಕಛೇರಿಯ ಆವರಣ ಹಾಗೂ ಸದರಿ ಕಛೇರಿಯ ನೆಲಮಹಡಿ ಮತ್ತು ಮೊದಲನೆ ಮಹಡಿಯನ್ನು ಸಂಪೂರ್ಣ ಸ್ಯಾನಿಟೇಷನ್ (ಔಷದ ಸಿಂಪಡಣೆ ಹಾಗೂ ಸ್ವಚ್ಚತೆ) ಗೊಳಿಸಲಾಗುತ್ತಿದೆ. ಈ ಕಚೇರಿ ಸುತ್ತ ಮುತ್ತ ಸಾರ್ವಜನಿಕ ಭೇಟಿಯನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net