More

    ಸಾಕು ನಾಯಿಗೆ ಅದ್ಧೂರಿ ಸೀಮಂತ ಕಾರ್ಯ ಮಾಡಿದ ಮಾಲೀಕ! ವಿಡಿಯೋ ವೈರಲ್

    ಹಾವೇರಿ: ಸಾಮಾನ್ಯವಾಗಿ ಗರ್ಭಿಣಿ ಮಹಿಳೆಯರಿಗೆ ಸೀಮಂತ ಮಾಡುವುದನ್ನು ನೊಡಿದ್ದೇವೆ. ಆದರೆ ಇಲ್ಲೊಬ್ಬರು ತಮ್ಮ ಸಾಕು ನಾಯಿಗೆ ಸೀಮಂತ ಮಾಡುವ ಮೂಲಕ ಭಾರೀ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

    ಹಾವೇರಿ ಜಿಲ್ಲೆಯ ರಾಣೇಬೆನ್ನೂರು ವಾಗೀಶ್ ನಗರದಲ್ಲಿ ಮನೆಯ ಮಾಲೀಕ ಅಕ್ಷಯ್​ ಕುಮಾರ್​ ಎಂಬುವವರು ತಮ್ಮ ಸಾಕು ನಾಯಿ ರೂಬಿಗೆ ಕುಂಕುಮ ಇಟ್ಟು,ಹೂ ಹಾಕಿ ಸೀರೆ ಉಡಿಸಿ, ಹೆಂಗೆಳೆಯರು ಆರತಿ ಬೆಳಗಿ, ಸೀಮಂತ ಕಾರ್ಯ ಮಾಡಿದ್ದಾರೆ.

    ಮಹಿಳೆಯರಿಗೆ ಮಾಡುವಂತೆ ಸೀರೆ, ಬಳೆ ಹಾಗೂ ಕುಂಕಮವನ್ನು ಇಟ್ಟು ವಿಶೇಷವಾಗಿ ಅದಕ್ಕೆ ಇಷ್ಟವಾದ ತಿಂಡಿಯನ್ನೇ ಇಟ್ಟು, ಶಾಸ್ತ್ರೋಕ್ತವಾಗಿ ಸೀಮಂತ ಕಾರ್ಯ ನೆರವೇರಿಸಿದ್ದಾರೆ.

    ಅಷ್ಟೇ ಅಲ್ಲದೇ ಸಂಬಂಧಿಕರನ್ನೂ ಕರೆದು ಊಟದ ವ್ಯವಸ್ಥೆಯನ್ನು ಮಾಡಿದ್ದರು. ಥೇಟ್ ಗರ್ಭಿಣಿ ಮಹಿಳೆಯರಿಗೆ ಮಾಡುವ ಹಾಗೇ ಸಾಕು ಪ್ರಾಣಿಗೆ ಸೀಮಂತ ಮಾಡಿ ಪ್ರಾಣಿ ಪ್ರೇಮ ಮೆರೆದಿದ್ದಾರೆ.

    ಸದ್ಯ ಸೀಮಂತ ಕಾರ್ಯ ಮಾಡಿದ ದೃಶ್ಯಗಳು ಎಲ್ಲಡೆ ವೈರಲ್ ಆಗುತ್ತಿದ್ದು ಭಾರೀ ಜನಮೆಚ್ಚುಗೆ ಪಡೆಯುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts