ಎಪಿಎಂಸಿಯಲ್ಲಿ ರಾಗಿ ಮಾರಾಟಕ್ಕೆ ಮುಗಿಬಿದ್ದ ರೈತರು!

Raagi tumkur
Published on

ತುಮಕೂರು: ಬೆಂಬಲ ಬೆಲೆಯಲ್ಲಿ ರಾಗಿ ಮಾರಾಟ ಮಾಡಲು ರೈತರು ಸರತಿ ಸಾಲಿನಲ್ಲಿ ನಿಂತಿರುವ ದೃಶ್ಯ ಸೋಮವಾರ ಜಿಲ್ಲೆಯಾದ್ಯಂತ ಬಹುತೇಕ ಎಪಿಎಂಸಿಗಳಲ್ಲಿ ಕಂಡುಬಂದಿತು.

ಜಿಲ್ಲೆಯ ಹಲವು ಎಪಿಎಂಸಿಯ ರಾಗಿ ಖರೀದಿ ಕೇಂದ್ರಗಳ ಮುಂದೆ ಬೆಳಗ್ಗೆಯಿಂದಲೇ ಕ್ಯೂ ನಿಂತಿದ್ದು, ಹುಳಿಯಾರು,ತಿಪಟೂರು ತುಮಕೂರು ಎಪಿಎಂಸಿಗಳ ಮುಂದೆ ಸರತಿ ಸಾಲಿನಲ್ಲಿ ನಿಂತಿದ್ದಾರೆ.

ಬೆಂಬಲ ಬೆಲೆಯಲ್ಲಿ ಸರ್ಕಾರ ರಾಗಿ ಖರೀದಿಸುತ್ತಿರುವ ಹಿನ್ನಲೆಯಲ್ಲಿ ರೈತರು ಬೆಳಗ್ಗೆಯಿಂದ ಎಪಿಎಂಸಿ ರಾಗಿ ಕೇಂದ್ರದ ಮುಂದೆ ಸಾಲುಗಟ್ಟಿ ನಿಂತಿದ್ದಾರೆ.

ಕಂಪ್ಯೂಟರ್ ನೋಂದಣಿ ವಿಳಂಬದಿಂದ ಸರತಿ ಸಾಲು ದೊಡ್ಡದಾಗಿದ್ದು, ಬಿರುಬಿಸಿಲಿನಲ್ಲೂ ಗಂಟೆಗಟ್ಟಲೆ ಕಾದು ನಿಂತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net