

ಕೀವ್: 21ನೇ ಶತಮಾನದ ಅತಿದೊಡ್ಡ ದುರಂತದಲ್ಲಿ ಸೇರಿಕೊಂಡಿರುವ ರಷ್ಯಾ-ಯೂಕ್ರೇನ್ ಯುದ್ಧ ಎರಡು ತಿಂಗಳು ಪೂರೈಸಿ ಮೂರನೇ ತಿಂಗಳಿಗೆ ಪ್ರವೇಶಿಸಿದೆ.
ಈ ನಡುವೆ ಮೊದಲಿನಿಂದಲೂ ಯೂಕ್ರೇನ್ ಪರ ನಿಂತಿರುವ ಅಮೆರಿಕ ಮತ್ತೆ 165ಮಿಲಿಯನ್ ಡಾಲರ್ ಮಿಲಿಟರಿ ನೆರವು ನೀಡುವುದಾಗಿ ಘೋಷಿಸಿದೆ. ಮೌರಿಪೊಲ್ ಆಜೊಸ್ತಲ್ ಉಕ್ಕಿನ ಸ್ಥಾವರದಲ್ಲಿ 2000 ಯೂಕ್ರೇನಿಗರು ಸಿಲುಕಿದ್ದು,ಹೋರಾಟವನ್ನು ಮುಂದುವರಿಸಿದ್ದಾರೆ ಎಂದು ವರದಿಯಾಗಿದೆ.
ಎರಡು ತಿಂಗಳಿನಿಂದ ಯುದ್ಧದಿಂದ ನಲುಗಿರುವ ಯೂಕ್ರೇನ್ ಸಂಪೂರ್ಣ ಧ್ವಂಸವಾಗಿದೆ. ಆದರೂ ಇಲ್ಲಿನ ಜನತೆ ಹಾಗೂ ಮಿಲಿಟರಿ ಪಡೆಯ ಆತ್ಮಸ್ಥೈರ್ಯ ರಷ್ಯಾ ಸೇನೆಯನ್ನು ಕಂಗೆಡುವಂತೆ ಮಾಡಿರುವುದು ಸುಳ್ಳಲ್ಲ.ರಷ್ಯಾ ಅಪ್ರಚೋದಿತ ದಾಳಿಯಿಂದ ಅಧ್ಯಕ್ಷ ಪುಟಿನ್ಗೆ ಎಚ್ಚರಿಕೆ ನೀಡುತ್ತಾ ಬರುತ್ತಿರುವ ಅಮೆರಿಕ ಅಧ್ಯಕ್ಷ ಜೋ ಬೈಡನ್ ಎಂದಿಗೂ ಯೂಕ್ರೇನ್ ಪರವಾಗಿರುವುದಾಗಿ ತಿಳಿಸಿದ್ದಾರೆ.
ಯುದ್ಧಾರಂಭದ ಬಳಿಕ ರಾಯಭಾರಿಗಳ ಮೊದಲ ಭೇಟಿಯಲ್ಲಿ 700 ಮಿಲಿಯನ್ ಡಾಲರ್ ನೆರವನ್ನು ಅಮೆರಿಕ ನೀಡಿತ್ತು.ಮಾರಿಯೊಪೊಲ್ನ ಬಂದರು ತೀವ್ರ ಪತನದ ಅಂಚಿನಲ್ಲಿರುವುದರಿಂದ ಯೂಕ್ರೇನ್ ಅಧ್ಯಕ್ಷ ಝಲೆನ್ಸ್ಕಿ ಅವರು ಮಿಲಿಟರಿ ನೆರವು ಬಗ್ಗೆ ಭಾನುವಾರವಷ್ಟೇ ಸಭೆ ನಡೆಸಿದ್ದರು.
ಅಲ್ಲದೇ ಎರಡು ತಿಂಗಳ ಸುಧೀರ್ಘ ಯುದ್ಧದಲ್ಲಿ 21,000 ಯೋಧರನ್ನು ರಷ್ಯಾ ಕಳೆದುಕೊಂಡಿದೆ ಎಂದು ವಿದೇಶಿ ಮಾಧ್ಯಮಗಳು ವರದಿ ಮಾಡಿವೆ.