ಗೋವಾದಲ್ಲಿ ಕೆಜಿಎಫ್ 2 ಸಕ್ಸಸ್ ಪಾರ್ಟಿ !

1269466
Published on

ಪಣಜಿ: ಗೋವಾದಲ್ಲಿ ಕೆಜಿಎಫ್​-2 ಸಕ್ಸಸ್​ ಪಾರ್ಟಿಯನ್ನು ಚಿತ್ರತಂಡ ಅದ್ಧೂರಿಯಾಗಿ ಆಚರಣೆ ಮಾಡಿದೆ. ಇದಕ್ಕಾಗಿಯೇ ರಾಕಿಂಗ್​ ಸ್ಟಾರ್​ ಯಶ್​, ನಿರ್ದೇಶಕ ಪ್ರಶಾಂತ್ ನೀಲ್​ ಸೇರಿದಂತೆ ಹಲವರು ತಮ್ಮ ಕುಟುಂಬದ ಜತೆ ಗೋವಾಗೆ ಹಾರಿದ್ದಾರೆ.

ಇಡೀ ಚಿತ್ರ ಜಗತ್ತು ಬೆಚ್ಚಿ ಬೀಳುವಂತೆ ಮಾಡಿರುವ ಕೆಜಿಎಫ್​-2 ಚಿತ್ರ ತಂಡ ಸದ್ಯ ರಿಲೀಫ್​ ಮೂಡಲ್ಲಿದೆ. ಹಾಗಾಗಿ ಯಶ್​ ಕುಟುಂಬ ಸಮೇತ ಗೋವಾಗೆ ಹಾರಿದ್ದರು. ಇವರೊಂದಿಗೆ ಪ್ರಶಾಂತ್ ನೀಲ್​ ಹಾಗೂ ವಿಜಯ್​ ಕಿರಗಂದೂರ್​ ಅವರು ಕೂಡ ತಮ್ಮ ಕುಟುಂಬದೊಂದಿಗೆ ಗೋವಾ ಪ್ರವಾಸ ಎಂಜಾಯ್​ ಮಾಡುತ್ತಿದ್ದಾರೆ.

ಕೇವಲ ಹತ್ತೇ ದಿನದಲ್ಲಿ 800 ಕೋಟಿ ರೂ. ಗಳಿಕೆ ಕಂಡಿದ್ದು, ಸಾವಿರ ಕೋಟಿಯತ್ತ ಮುನ್ನುಗ್ಗುತ್ತಿದೆ. ಇಷ್ಟೊಂದು ದೊಡ್ಡ ಮಟ್ಟದ ಯಶಸ್ಸು ಸಿಕ್ಕಿದ್ದರೂ ಸಹ ಚಿತ್ರತಂದ ಇದು ಆರಂಭವಷ್ಟೇ ಇನ್ನೂ ಬೇಜಾನ್​ ಇದೆ ಎಂದೇ ಹೇಳುತ್ತಿದೆ.ಮುಂದೆ ಯಾವ ಯೋಜನೆಯನ್ನು ನಿರ್ದೇಶಕರು ಹಾಕಿಕೊಂಡಿದ್ದಾರೆ ಎಂಬುದನ್ನು ಕಾದುನೋಡಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net