

ಕೋಲ್ಕತ್ತಾ: ಬಿಸಿಲಿನ ಜಳಕ್ಕೆ ರಸ್ತೆಯಲ್ಲಿ ಕುಸಿದು ಬಿದ್ದಿರುವ ಕುದುರೆಗೆ ಸಹಾಯ (Video Viral) ಮಾಡದೆ ಎಳೆದೊಯ್ದ ಮಾಲೀಕನ ವಿರುದ್ಧ ಪೊಲೀಸರು
ಎಫ್ಐಆರ್ ದಾಖಲಿಸಿದ ಘಟನೆ ಕೋಲ್ಕತ್ತಾದಲ್ಲಿ ನಡೆದಿದೆ.
ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ಈ ವಿಡಿಯೋದಲ್ಲಿ, ತುಂಬಾ ಬಳಲಿ ಸುಸ್ತಾಗಿರುವ ಕುದುರೆಯೊಂದು ರಸ್ತೆಯಲ್ಲಿ ಸಾಗುತ್ತಿದ್ದಾಗಲೇ ರಸ್ತೆ ಮಧ್ಯೆ ಕುಸಿದು ಬಿದ್ದಂತಹ ಘಟನೆ ನಡೆದಿದೆ. ಆದರೆ ಅದರ ಮಾಲೀಕ ಈ ಸಮಯದಲ್ಲಿ ಅದಕ್ಕೆ ನೀರು ಕೊಟ್ಟು ಸಹಾಯಕ್ಕೆ ಬರದೆ ಬದಲಿಗೆ ಅದನ್ನು ಮೇಲೆಳಿಸುವುದಕ್ಕೆ ಥಳಿಸಿದ್ದಾನೆ. ಈ ವೀಡಿಯೋ ಈಗ ವೈರಲ್ ಆಗಿದ್ದು ನೆಟ್ಟಿಗರು ಮಾಲೀಕನ ವರ್ತನೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಲ್ಲಿದೆ ವಿಡಿಯೋ
ಪೆಟಾ ಇಂಡಿಯಾ, Xನಲ್ಲಿ (ಏ.29) ಈ ವೀಡಿಯೊವನ್ನು ಹಂಚಿಕೊಂಡಿದ್ದು, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಇತರ ಅಧಿಕಾರಿಗಳನ್ನು ಟ್ಯಾಗ್ ಮಾಡಿ, ಕೋಲ್ಕತ್ತಾದಲ್ಲಿ ರಸ್ತೆಯಲ್ಲಿ ಸುಸ್ತಾಗಿದ್ದ ಕುದುರೆಯೊಂದು ಬಿಸಿಲಿನ ಹೊಡೆತಕ್ಕೆ ಕುಸಿದು ಬಿದ್ದು. ಕಡಿಮೆ ತೂಕ, ಬಾಯಾರಿಕೆ ಮತ್ತು ನೋವಿನಿಂದ ಬಳಲುತ್ತಿರುವ ಕುದುರೆಗಳು ಪ್ರವಾಸಿಗರ ಆಕರ್ಷಣೆಯಾಗಬಾರದು ಎಂದು ಬರೆದಿದ್ದಾರೆ. ದಯವಿಟ್ಟು ಕುದುರೆಯನ್ನು ಆಶ್ರಯತಾಣಕ್ಕೆ ಕಳುಹಿಸಿ ಮತ್ತು ಕ್ರೂರ ಕುದುರೆ ಎಳೆಯುವ ಬಂಡಿಗಳನ್ನು ಇ-ವಾಹನಗಳಾಗಿ ಬದಲಾಯಿಸಿ ಎಂದು ಮನವಿ ಮಾಡಿದ್ದಾರೆ. ಈ ವೀಡಿಯೋ ಸಾಕಷ್ಟು ವೈರಲ್ ಆಗಿ ಜನ ಇದರ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
FIR ದಾಖಲು
ಪ್ರತಿಕ್ರಿಯೆಯ ನಂತರ, ಕುದುರೆಯ ನಿರ್ವಾಹಕನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಕೋಲ್ಕತ್ತಾ ಪೊಲೀಸರು ದೃಢಪಡಿಸಿದರು. ಕುದುರೆ ಈಗ ವೈದ್ಯಕೀಯ ಮೇಲ್ವಿಚಾರಣೆಯಲ್ಲಿದೆ ಮತ್ತು ನಿಯಮಿತವಾಗಿ ಪಶುವೈದ್ಯಕೀಯ ಚಿಕಿತ್ಸೆಯನ್ನು ಪಡೆಯುತ್ತಿದೆ ಎಂದು ಅಧಿಕಾರಿಗಳು ಭರವಸೆ ನೀಡಿದ್ದಾರೆ.
ನೆಟ್ಟಿಗರ ಪ್ರತಿಕ್ರಿಯೆ
ಸಾಮಾಜಿಕ ಮಾಧ್ಯಮ ಬಳಕೆದಾರರು ಸಹ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದು, ಒಬ್ಬ ನೆಟ್ಟಿಗ "ಇದು ತುಂಬಾ ಕ್ರೂರ! ಅವರು ಕುದುರೆಗೂ ಆಹಾರ ನೀಡುತ್ತಾರೆಯೇ?" ಎಂದು ಕೇಳಿದರೆ, ಇನ್ನೊಬ್ಬರು "ಅಂತಹ ಜನರನ್ನು ಕರುಣೆಯಿಲ್ಲದೆ ಶಿಕ್ಷಿಸಬೇಕು" ಎಂದು ಹೇಳುವ ಮೂಲಕ ಕಠಿಣ ಶಿಕ್ಷೆಗೆ ಕರೆ ನೀಡಿದ್ದಾರೆ.(ಏಜೆನ್ಸೀಸ್)