ಪಹಲ್ಗಾಮ್ ಭಯೋತ್ಪಾದಕ ದಾಳಿ; ಗಡೀಪಾರು ಎದುರಿಸುತ್ತಿರುವ ಆಕ್ಸೆಂಚರ್ ಉದ್ಯೋಗಿಗೆ ಸುಪ್ರೀಂ ಪರಿಹಾರ| Terror attack

Supreme Court
Published on

Terror attack | ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಪಾಕಿಸ್ತಾನಕ್ಕೆ ತೆರಳುವಂತೆ ಸೂಚಿಸಿದ ನಂತರ ಬೆಂಗಳೂರಿನ ಆಕ್ಸೆಂಚರ್ ಸಂಸ್ಥೆಯ ಉದ್ಯೋಗಿಯೊಬ್ಬರು ಸುಪ್ರೀಂ ಕೋರ್ಟ್‌ನಿಂದ ತಡೆಯಾಜ್ಞೆ ತಂದಿದ್ದಾರೆ.

ಪಹಲ್ಗಾಮ್‌ ದಾಳಿ ಬಳಿಕ ಭಾರತದಲ್ಲಿರುವ ಎಲ್ಲಾ ಪಾಕಿಸ್ತಾನಿಯರ ವೀಸಾ ರದ್ದಾಗಿದ್ದು, ಭಾರತ ತೊರೆಯುವಂತೆ ಕೇಂದ್ರ ಸರ್ಕಾರ ಆದೇಶ ಹೊರಡಿಸಿತ್ತು. ಅದರಂತೆ ಬೆಂಗಳೂರಿನಲ್ಲಿ ನೆಲೆಸಿದ್ದ ಆಕ್ಸೆಂಚರ್ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದ ಪಾಕಿಸ್ತಾನ ಮೂಲದ ಅಹ್ಮದ್‌ ತಾರಿಕ್ ಭಟ್ ಎಂಬುವವರಿಗೂ ದೇಶ ತೊರೆಯುವಂತೆ ಆದೇಶ ನೀಡಲಾಗಿತ್ತು. ಈ ಆದೇಶದ ವಿರುದ್ಧ ಅವರು ಸುಪ್ರೀಂಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ಇದೀಗ ಆತನನನ್ನು ಪಾಕಿಸ್ತಾನಕ್ಕೆ ಗಡೀಪಾರು ಮಾಡುವುದಕ್ಕೆ ಸುಪ್ರೀಂಕೋರ್ಟ್ ತಡೆ ನೀಡಿದೆ.

ತನ್ನ ಆರು ಜನರಿರುವ ಕುಟುಂಬ ಭಾರತದ ಆಧಾರ್‌ ಕಾರ್ಡ್ ಪಾಸ್‌ಪೋರ್ಟ್ ಹೊಂದಿದ್ದರೂ ನಮಗೆ ದೇಶ ತೊರೆಯುವಂತೆ ಆದೇಶ ಬಂದಿದೆ ಎಂದು ಹೇಳಿ ಅಹ್ಮದ್ ತಾರಿಖ್ ಭಟ್ ಕೋರ್ಟ್ ಮೊರೆ ಹೋಗಿದ್ದರು. ಇವರ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್‌, ಪರಿಶೀಲನೆ ಪೂರ್ಣಗೊಳ್ಳುವವರೆಗೆ ಅಹ್ಮದ್‌ ತಾರಿಖ್ ಬಟ್ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳಬಾರದು ಎಂದು ಹೇಳಿ ಅವರ ದಾಖಲೆಗಳ ಪರಿಶೀಲನೆ ಮಾಡುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

ಅಹ್ಮದ್ ತಾರಿಕ್ ಬಟ್ ಭಾರತಕ್ಕೆ ಹೇಗೆ ಬಂದರು?

ಆಕ್ಸೆಂಚರ್ ಉದ್ಯೋಗಿ 1997 ರಲ್ಲಿ ತನ್ನ ತಂದೆಯೊಂದಿಗೆ ಭಾರತಕ್ಕೆ ಬಂದರು. ಅವರ ತಂದೆ ಪಾಕಿಸ್ತಾನಿ ಪಾಸ್‌ಪೋರ್ಟ್ ಹೊಂದಿದ್ದರು. ತಾರಿಕ್ ಬಟ್ ನ್ಯಾಯಾಲಯದಲ್ಲಿ, ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್‌ಗೆ ಬಂದ ನಂತರ ತನ್ನ ಪಾಕ್ ಪಾಸ್‌ಪೋರ್ಟ್ ಅನ್ನು ಒಪ್ಪಿಸಿ, ನಂತರ ಭಾರತೀಯ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸಿ ಪಡೆದುಕೊಂಡರು ಎಂದು ಹೇಳಿದ್ದಾರೆ.

(ಏಜೆನ್ಸೀಸ್)

ವಿಚಾರಣೆಯ ಸಮಯದಲ್ಲಿ, ಅವರ ಕುಟುಂಬದ ಇತರ ಸದಸ್ಯರು ಮೂರು ವರ್ಷಗಳ ನಂತರ 2000 ರಲ್ಲಿ ಭಾರತಕ್ಕೆ ಬಂದು ಕಾನೂನುಬದ್ಧವಾಗಿ ಭಾರತೀಯ ಪೌರತ್ವ ಮತ್ತು ಪಾಸ್‌ಪೋರ್ಟ್ ಪಡೆದುಕೊಂಡಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ಈ ದಾಖಲೆಗಳ ಹೊರತಾಗಿಯೂ, ಮತ್ತು ಅವರ ಕುಟುಂಬ ಸದಸ್ಯರೆಲ್ಲರೂ ಆಧಾರ್ ಕಾರ್ಡ್‌ಗಳನ್ನು ಹೊಂದಿದ್ದಾರೆ ಎಂಬ ಅಂಶದ ಹೊರತಾಗಿಯೂ, ಕಳೆದ ವಾರ ಗೃಹ ಸಚಿವಾಲಯದ ಆದೇಶವು ಎಲ್ಲರಿಗೂ ದೇಶವನ್ನು ತೊರೆಯುವಂತೆ ನೋಟಿಸ್ ನೀಡಿದೆ ಎಂದು ಬಟ್ ಹೇಳಿದರು. ಅವಧಿ ಮೀರಿದ ನಂತರ ಮತ್ತು ವೀಸಾ ಮೂಲಕ ಭಾರತಕ್ಕೆ ಬಂದ ಆರೋಪ ಸುಳ್ಳು ಎಂದು ಬಟ್ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net