ಭಾರತಕ್ಕೆ ಹೆದರಿದ ಪಾಕಿಸ್ತಾನ; ಆಹಾರ ನೀರನ್ನು ಸಂಗ್ರಹಿಸಿಟ್ಟುಕೊಳ್ಳುಂತೆ ಪಿಒಕೆ ಜನರಿಗೆ ಮನವಿ| Pakistan

pakisthan pm
Published on

Pakistan | ಭಾರತ ಖಂಡಿತವಾಗಿಯೂ ತನ್ನ ಮೇಲೆ ದಾಳಿ ಮಾಡುತ್ತದೆ ಎಂದು ಪಾಕಿಸ್ತಾನಕ್ಕೆ ಸಂಪೂರ್ಣವಾಗಿ ಮನವರಿಕೆಯಾಗಿದೆ. ಭಾರತದಿಂದ ದಾಳಿ ನಡೆಯುವ ಸಾಧ್ಯತೆ ಇರುವುದರಿಂದ ಪಾಕಿಸ್ತಾನದ ತುಂಬಾ ಭಯ ಭೀತಿ ಆವರಿಸಿದೆ. ಏಪ್ರಿಲ್ 22 ರಂದು ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಭಾರತ ಘೋಷಿಸಿದೆ. ಹಾಗಾಗಿ ಪಾಕಿಸ್ತಾನದ ಸ್ಥಿತಿ ಇನ್ನಷ್ಟು ಹದಗೆಟ್ಟಿದ್ದು, ಈ ದಾಳಿಯಿಂದ ತನ್ನನ್ನು ತಾನು ರಕ್ಷಿಸಿಕೊಳ್ಳಲು ಪಾಕಿಸ್ತಾನ ಪರದಾಟ ನಡೆಸುತ್ತಿದೆ.

ಭಾರತೀಯ ಸೇನೆಯ ದಾಳಿಯನ್ನು ತಪ್ಪಿಸಲು ಪಾಕಿಸ್ತಾನವು ಪ್ರತಿಯೊಂದು ಹಂತದಲ್ಲೂ ಸಿದ್ಧತೆಗಳನ್ನು ಆರಂಭಿಸಿದೆ. ಖೈಬರ್ ವಾಯುದಾಳಿ ಸೈರನ್‌ಗಳನ್ನು ಅಳವಡಿಸಿದ ನಂತರ ಮತ್ತು ಗಡಿ ಹಳ್ಳಿಗಳ ಸುತ್ತಲೂ ಬಂಕರ್‌ಗಳನ್ನು ನಿರ್ಮಿಸುವ ಪ್ರಯತ್ನಗಳನ್ನು ತೀವ್ರಗೊಳಿಸಿದೆ. ಇದೀಗ ಪಾಕಿಸ್ತಾನ ಸರ್ಕಾರವು ಪಿಒಕೆ ನಾಗರಿಕರನ್ನು ದೀರ್ಘಕಾಲದವರೆಗೆ ಆಹಾರ ಧಾನ್ಯಗಳನ್ನು ಸಂಗ್ರಹಿಸುವಂತೆ ಒತ್ತಾಯಿಸಿದೆ. ಯುದ್ಧದ ಸಂದರ್ಭದಲ್ಲಿ ಅಲ್ಲಿನ ನಾಗರಿಕರು ಆಹಾರ ಮತ್ತು ನೀರಿನ ಕೊರತೆಯನ್ನು ಎದುರಿಸದಂತೆ ನೋಡಿಕೊಳ್ಳಲು ಪಾಕಿಸ್ತಾನ ಈ ಯೋಜನೆ ರೂಪಿಸಿಕೊಂಡಿದೆ.

(ಏಜೆನ್ಸೀಸ್)

ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ ಗಡಿಯ ಬಳಿ ಹೆಚ್ಚಿದ ಉದ್ವಿಗ್ನತೆಯನ್ನು ಗಮನದಲ್ಲಿಟ್ಟುಕೊಂಡು ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಈ ಆದೇಶವನ್ನು ಹೊರಡಿಸಿದೆ. ಪಾಕಿಸ್ತಾನವು ಎಲ್‌ಒಸಿ ನಿವಾಸಿಗಳಿಗೆ ಸಾಕಷ್ಟು ಆಹಾರ ಪದಾರ್ಥಗಳನ್ನು ಸಂಗ್ರಹಿಸುವಂತೆ ಕೇಳಿಕೊಂಡಿದೆ. ಈ ಮೂಲಕ ಭಯೋತ್ಪಾದಕ ದಾಳಿಗೆ ಭಾರತೀಯ ಸೇನೆ ಖಂಡಿತವಾಗಿಯೂ ಸೇಡು ತೀರಿಸಿಕೊಳ್ಳುತ್ತದೆ ಎಂದು ಪಾಕಿಸ್ತಾನ ಒಪ್ಪಿಕೊಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net