ಗಾಜಾ: ಗಾಜಾ ಪಟ್ಟಿಯಲ್ಲಿ ಇಸ್ರೇಲ್ ಮತ್ತೊಮ್ಮೆ ಪ್ರಮುಖ ವಾಯುದಾಳಿ(Israeli Airstrike) ನಡೆಸಿದೆ. ಮಂಗಳವಾರ (ಮಾರ್ಚ್ 18) ಬೆಳಗ್ಗೆ ಇಸ್ರೇಲಿ ವಾಯುದಾಳಿಯಿಂದ ಇಡೀ ಗಾಜಾ ಪಟ್ಟಿ ನಡುಗಿತು. ಇಸ್ರೇಲ್ ನಡೆಸಿದ ಈ ದಾಳಿ ಕಳೆದ 15 ತಿಂಗಳುಗಳಲ್ಲಿ ನಡೆದ ಅತ್ಯಂತ ಭಯಾನಕ ದಾಳಿಗಳಲ್ಲಿ ಒಂದಾಗಿದೆ. ಈ ದಾಳಿಯೊಂದಿಗೆ 57 ದಿನಗಳ ಶಾಂತಿಯ ನಂತರ ಗಾಜಾದಲ್ಲಿ ರಕ್ತಸಿಕ್ತ ಆಟ ಮತ್ತೆ ಪ್ರಾರಂಭವಾಯಿತು.
ಇದನ್ನು ಓದಿ: ಕೆನಡಾದ ಕಾರ್ನಿ ಸರ್ಕಾರದಲ್ಲಿ ಭಾರತೀಯ ಮೂಲದ ಮಹಿಳೆ ಆರೋಗ್ಯ ಸಚಿವೆ; ಕಮಲ್ ಖೇರಾ ಅವರ ಸಂಪೂರ್ಣ ಮಾಹಿತಿ ಇಲ್ಲಿದೆ | Kamal Khera
ಇಸ್ರೇಲಿ ದಾಳಿಯಲ್ಲಿ ಹಮಾಸ್ ಮಂತ್ರಿ ಮತ್ತು ಬ್ರಿಗೇಡಿಯರ್ ಸೇರಿದಂತೆ ಗಾಜಾದಲ್ಲಿ ಕನಿಷ್ಠ 330 ಜನರು ಮೃತಪಟ್ಟಿದ್ದಾರೆ ಎಂದು ಗಾಜಾ ಆರೋಗ್ಯ ಸಚಿವಾಲಯ ತಿಳಿಸಿದೆ. ಇಸ್ರೇಲ್‌ನ ಈ ಉಗ್ರ ದಾಳಿಯೊಂದಿಗೆ ಇಸ್ರೇಲ್ ಮತ್ತು ಗಾಜಾ ನಡುವಿನ ಕದನ ವಿರಾಮ ಒಪ್ಪಂದವು ಮುರಿದುಹೋಗಿದೆ ಎಂದು ಅಲ್ ಜಜೀರಾ ವರದಿ ಮಾಡಿದೆ.
ವರದಿಯ ಪ್ರಕಾರ, ಗಾಜಾದ ಆಂತರಿಕ ಮತ್ತು ರಾಷ್ಟ್ರೀಯ ಭದ್ರತಾ ಸಚಿವಾಲಯದ ಸಂಘಟನೆ ಮತ್ತು ಆಡಳಿತ ಪ್ರಾಧಿಕಾರದ ಮುಖ್ಯಸ್ಥ ಮತ್ತು ಹಿರಿಯ ಹಮಾಸ್ ಅಧಿಕಾರಿ ಬ್ರಿಗೇಡಿಯರ್ ಬಹಜತ್ ಹಸನ್ ಅಬು ಸುಲ್ತಾನ್ ಮತ್ತು ಉಪ ಆಂತರಿಕ ಸಚಿವ ಜನರಲ್ ಮಹಮೂದ್ ಅಬು ವಾಟ್ಫಾ ಅವರು ಇಸ್ರೇಲಿ ವೈಮಾನಿಕ ದಾಳಿಯಲ್ಲಿ ಮೃತಪಟ್ಟಿದ್ದಾರೆ. ಈ ತಿಂಗಳಲ್ಲಿ ನಡೆದ ವಾಯುದಾಳಿಯಲ್ಲಿ ಹೆಚ್ಚಾಗಿ ಮಕ್ಕಳು, ಮಹಿಳೆಯರು ಮತ್ತು ವೃದ್ಧರು ಸಾವನ್ನಪ್ಪಿದ್ದಾರೆ ಮತ್ತು ಸುಮಾರು 150 ಜನರು ಗಾಯಗೊಂಡಿದ್ದಾರೆ ಎಂದು ಗಾಜಾದ ನಾಗರಿಕ ರಕ್ಷಣಾ ಸಂಸ್ಥೆ ತಿಳಿಸಿದೆ.
42 ದಿನಗಳ ಮೊದಲ ಹಂತದ ನಂತರ ಎರಡನೇ ಹಂತದ ಕದನ ವಿರಾಮ ಒಪ್ಪಂದದ ನಿಯಮಗಳನ್ನು ಇಸ್ರೇಲ್ ಒಪ್ಪಿಕೊಳ್ಳಲು ನಿರಾಕರಿಸಿತು. ಇದಾದ ನಂತರ ಕದನ ವಿರಾಮದ ಕುರಿತು ಮಾತುಕತೆ ಮತ್ತೆ ಪ್ರಾರಂಭವಾಯಿತು. ಹಮಾಸ್ ಇಸ್ರೇಲಿ ಒತ್ತೆಯಾಳುಗಳನ್ನು ಬಿಡುಗಡೆ ಮಾಡಲು ಪದೇ ಪದೆ ನಿರಾಕರಿಸಿದ ನಂತರ ಮತ್ತು ಶಾಂತಿ ಮಾತುಕತೆ ವಿಫಲವಾದ ನಂತರ ಇಸ್ರೇಲ್ ಈ ವಾಯುದಾಳಿ ನಡೆಸಲು ನಿರ್ಧರಿಸಿದೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಕಚೇರಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
Prime Minister Benjamin Netanyahu and Defense Minister Israel Katz have instructed the IDF to take strong action against the Hamas terrorist organization in the Gaza Strip.
— Prime Minister of Israel (@IsraeliPM) March 18, 2025
ಗಾಜಾ ಪಟ್ಟಿಯಲ್ಲಿರುವ ಹಮಾಸ್ ಭಯೋತ್ಪಾದಕ ಸಂಘಟನೆಗೆ ಸೇರಿದ ಭಯೋತ್ಪಾದಕ ಗುರಿಗಳ ಮೇಲೆ ವ್ಯಾಪಕ ದಾಳಿಗಳನ್ನು ನಡೆಸುತ್ತಿದೆ ಇಸ್ರೇಲ್ ರಕ್ಷಣಾ ಪಡೆಗಳು ತಿಳಿಸಿವೆ.(ಏಜೆನ್ಸೀಸ್)
In accordance with the political echelon, the IDF and ISA are currently conducting extensive strikes on terror targets belonging to the Hamas terrorist organization in the Gaza Strip. pic.twitter.com/mYZ1WBPVPG
— Israel Defense Forces (@IDF) March 18, 2025
ಬಾಹ್ಯಾಕಾಶದಲ್ಲಿ 9 ತಿಂಗಳ ಹೆಚ್ಚುವರಿ ಕೆಲಸ; ಸುನೀತಾ ವಿಲಿಯಮ್ಸ್ ಸಂಭಾವನೆ ಎಷ್ಟಿರಬಹುದು? | Sunita Williams