ಉಜ್ಜಯಿನಿ(ಮಧ್ಯಪ್ರದೇಶ): ಯುವಕನೊಬ್ಬ ಹಾಡಹಗಲೇ ಫುಟ್‌ಪಾತ್‌ನಲ್ಲಿ ಮಹಿಳೆಯ ಮೇಲೆ ಅತ್ಯಾಚಾರವೆಸಗಿರುವ ಆಘಾತಕಾರಿ ಘಟನೆ ಉಜ್ಜಯಿನಿಯಲ್ಲಿ ನಡೆದಿದೆ. ಈ ಅಸಹ್ಯಕರ ವೀಡಿಯೊ ಶುಕ್ರವಾರ ಸಾಮಾಜಿಕ ಮಾಧ್ಯಮಗಳಲ್ಲಿ ಕಾಳ್ಗಿಚ್ಚಿನಂತೆ ಹರಡಿದ್ದು, ಕಾರ್ಯಪ್ರವೃತ್ತರಾದ ಪೊಲೀಸರು ಯುವಕನನ್ನು ಬಂಧಿಸಿದ್ದಾರೆ.
ಇದನ್ನೂ ಓದಿ: ಕಾಸ್ಟಿಂಗ್ ಕೌಚ್ ಬಗ್ಗೆ ಮೌನ ಮುರಿದ ಶಿಲ್ಪಾ ಶಿಂಧೆ: ಬಾಲಿವುಡ್ ನಿರ್ಮಾಪಕನಿಂದ ಮೋಹಿಸಲು ಒತ್ತಡ..
ಉಜ್ಜಯಿನಿಯ ಕೊಯ್ಲಾ ಫಟಕ್ ನ ರಸ್ತೆ ಬದಿಯ ಪಾದಚಾರಿ ಮಾರ್ಗದಲ್ಲಿ ಬುಧವಾರ ಈ ಘಟನೆ ನಡೆದಿದೆ. ಆರೋಪಿಯನ್ನು ಉಜ್ಜಯಿನಿ ನಿವಾಸಿ ಲೋಕೇಶ್ ಎಂದು ಗುರುತಿಸಲಾಗಿದೆ. ಲೋಕೇಶ್ ಸಂತ್ರಸ್ತೆಗೆ ಮದ್ಯಪಾನ ಮಾಡಿಸಿ ಹಗಲಿನಲ್ಲಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ.
ಘಟನೆ ನಂತರ ಸಂತ್ರಸ್ತೆ ದೂರು ದಾಖಲಿಸಿದ್ದು, ಲೋಕೇಶ್ಆರಂಭದಲ್ಲಿ ತನ್ನನ್ನು ಮದುವೆಯಾಗುವುದಾಗಿ ಆಮಿಷವೊಡ್ಡಿದ್ದ ಎಂದು ಬಹಿರಂಗಪಡಿಸಿದ್ದಾಳೆ. ಮದುವೆ ನೆಪದಲ್ಲಿ ನಂತರ ಬಯಲಿನಲ್ಲಿ ಅತ್ಯಾಚಾರ ಎಸಗಿದ್ದಾನೆ. ಘೋರ ಕೃತ್ಯ ಎಸಗಿದ ಬಳಿಕ ಸಂತ್ರಸ್ತ ಮಹಿಳೆಯನ್ನು ರಸ್ತೆಯಲ್ಲೇ ಬಿಟ್ಟು ಲೋಕೇಶ್ ಎದ್ದು ಹೋಗಿದ್ದಾನೆ.
शर्मसार हुई धर्मनगरी उज्जैन :
वैहशी दरिंदे ने किया भिक्षुक महिला के साथ खुलेआम कुकर्म, प्रदेश की क़ानून व्यवस्था हुई तार-तार !!
"सत्ताधीशों शर्म से डूब मरो या कुर्सी छोड़ दो" pic.twitter.com/yl1066BGTu
— MP Congress (@INCMP) September 5, 2024
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ವೈರಲ್ ವಿಡಿಯೋವನ್ನು ಪರಿಶೀಲಿಸಿದ ನಂತರ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಸಂತ್ರಸ್ತೆಯನ್ನು ಪೊಲೀಸ್ ಠಾಣೆಗೆ ಕರೆತಂದು ಹೇಳಿಕೆ ಪಡೆದಿದ್ದಾರೆ. ಕೂಡಲೇ ಲೋಕೇಶ್‌ನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಅಪರಾಧಕ್ಕೆ ಸಾಕ್ಷಿಯಾಗಿದ್ದರೂ ಮಧ್ಯಪ್ರವೇಶಿಸದ ಪ್ರೇಕ್ಷಕರು, ವೀಡಿಯೋ ಸೆರೆಹಿಡಿದ ವ್ಯಕ್ತಿ, ಸಾರ್ವಜನಿಕರ ಬೇಜವಾಬ್ದಾರಿ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದ್ದು, ಇವರಿಗೂ ತಕ್ಕ ಪಾಠ ಕಲಿಸಬೇಕು ಎಂದು ನೆಟ್ಟಿಗರು ಒತ್ತಾಯಿಸುತ್ತಿದ್ದಾರೆ.
ತಿರುಪತಿ-ತಿರುಮಲೆಯ ಶೇಷಾಚಲ ಅರಣ್ಯದಲ್ಲಿ ಕಾಣಿಸಿಕೊಂಡ ಅಪರೂಪದ ಬಂಗಾರು ಹಲ್ಲಿ!