ತಿರುಪತಿ-ತಿರುಮಲೆಯ ಶೇಷಾಚಲ ಅರಣ್ಯದಲ್ಲಿ ಕಾಣಿಸಿಕೊಂಡ ಅಪರೂಪದ ಬಂಗಾರು ಹಲ್ಲಿ!

golden gecko (1)
Published on

ತಿರುಪತಿ: ವಿಶ್ವವಿಖ್ಯಾತ ಧಾರ್ಮಿಕ ಯಾತ್ರಾಸ್ಥಳ ತಿರುಪತಿ- ತಿರುಮಲೆಗೆ ಹೊಂದಿಕೊಂಡಿರುವ ಶೇಷಾಚಲಂ ಅರಣ್ಯ ಜೀವವೈವಿಧ್ಯತೆಯ ತಾಣ ಎಂಬುದು ತಿಳಿದ ಸಂಗತಿಯೇ. ಅದೇ ರೀತಿ ಈಗ ಮತ್ತೊಂದು ವಿಸ್ಮಯಕ್ಕೆ ಈ ಕಾಡು ಸಾಕ್ಷಿಯಾಗಿದೆ. ಗುರುವಾರ ಶೇಷಾಚಲಂ ಅರಣ್ಯದಲ್ಲಿ ಅಪರೂಪದ ಗೋಲ್ಡನ್ ಗೆಕ್ಕೋ(ಬಂಗಾರು ಹಲ್ಲಿ) ವನ್ಯಜೀವಿ ಛಾಯಾಗ್ರಾಹಕರಿಗೆ ಕಾಣಿಸಿಕೊಂಡಿದೆ.

ಅರಣ್ಯ ಇಲಾಖೆಯು ಶೆಡ್ಯೂಲ್-1ರ ಅಡಿಯಲ್ಲಿ ಪರಿಗಣಿಸಿರುವ ಚಿನ್ನದ ಹಲ್ಲಿಯು ಕತ್ತಲೆ ಆವರಿಸಿದ ಸ್ಥಳಗಳು ಮತ್ತು ಬಂಡೆಗಳಲ್ಲಿ ವಾಸಿಸುತ್ತದೆ.

ಇತ್ತೀಚೆಗೆ ಅರಣ್ಯದ ಕಲ್ಯಾಣಿ ಅಣೆಕಟ್ಟಿನ ಬಳಿ ವನ್ಯಜೀವಿ ಛಾಯಾಗ್ರಾಹಕ 'ಬರ್ಡ್‌ಮ್ಯಾನ್' ಕಾರ್ತಿಕ್ ಮತ್ತು ತಂಡ ತೆರಳಿದ್ದಾಗ ಭಾರತೀಯ ಗೋಲ್ಡನ್ ಗೆಕ್ಕೋ ಕಂಡುಬಂದಿದೆ.

ಅಪರೂಪದ ಈ ಸರೀಸೃಪವು ಪೂರ್ವ ಘಟ್ಟಗಳಲ್ಲಿ ಅಪರೂಪದಲ್ಲಿ ಅಪರೂಪ ಎಂಬಂತೆ ಕಂಡುಬರುತ್ತದೆ. ವನ್ಯಜೀವಿ ಛಾಯಾಗ್ರಾಹಕರ ತಂಡದಲ್ಲಿ ಕಾರ್ತಿಕ್, ಸಿದ್ಧಾರ್ಥ ಮತ್ತು ಎಲ್. ಗೋಪಿ ಪಕ್ಷಿಗಳು ಮತ್ತು ಸರೀಸೃಪಗಳ ಹುಡುಕಾಟದಲ್ಲಿ ಮುಂದುವರಿಯುತ್ತಿದ್ದಾಗ ಅವರ ಕಣ್ಣಿಗೆ ಬಿದ್ದಿದೆ.

ಬಂಗಾರು ಹಲ್ಲಿ ರಾತ್ರಿಯ ಪ್ರಾಣಿ. ಹಗಲಿನಲ್ಲಿ ಇದರ ದರ್ಶನ ಕಾಣುವುದು ಅಪರೂಪ. ಚಿನ್ನದ ಬಣ್ಣ ಮಾತ್ರವಲ್ಲ. ಇತರ ಬಣ್ಣಗಳಲ್ಲೂ ಬದಲಾಗುತ್ತದೆ. ಚರ್ಮದ ವಿನ್ಯಾಸ ತುಂಬಾ ತೆಳುವಾಗಿದೆ. ಇದು ಶಾಖವನ್ನು ಸಹಿಸುವುದಿಲ್ಲ. ಇದನ್ನು ತಂಪು, ಮಬ್ಬಾದ ಪ್ರದೇಶಗಳಲ್ಲಿ ಮಾತ್ರ ಕಾಣುತ್ತೇವೆ. ಈ ಜಾತಿಯವು ತಮಿಳುನಾಡು, ಒಡಿಶಾ, ತಿರುಪತಿ, ವಿಶಾಖಪಟ್ಟಣಂ ಮತ್ತು ಆಂಧ್ರಪ್ರದೇಶದ ಕೆಲವು ಭಾಗಗಳು ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಕಂಡುಬರುತ್ತವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net