ಕೋಲ್ಕತ್ತಾ: ಆರ್‌ಜಿ ಕಾರ್ ಮೆಡಿಕಲ್ ಕಾಲೇಜಿನ ಮಾಜಿ ಪ್ರಾಂಶುಪಾಲ ಸಂದೀಪ್ ಘೋಷ್ ಆರ್ಥಿಕ ಅವ್ಯವಹಾರ ನಡೆಸಿರುವ ಬಗ್ಗೆ ಜಾರಿ ನಿರ್ದೇಶನಾಲಯ (ಇಡಿ) ಪಿಎಂಎಲ್‌ಎ ಅಡಿಯಲ್ಲಿ ಮನಿ ಲಾಂಡರಿಂಗ್ ಪ್ರಕರಣವನ್ನು ದಾಖಲಿಸಿದ್ದು, ಶುಕ್ರವಾರ 6 ಸ್ಥಳಗಳ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಇದನ್ನೂ ಓದಿ: ಟ್ರೈನಿ ವೈದ್ಯೆ ಹತ್ಯೆ ಕೇಸ್; ಆರ್.ಜಿ. ಕರ್ ಮಾಜಿ ಪ್ರಾಂಶುಪಾಲನ ಮನೆ ಮೇಲೆ ED ದಾಳಿ
ಇದರಲ್ಲಿ ಘೋಷ್ ಅವರ ಬೆಲಿಯಾಘಾಟ ಮನೆಯೂ ಸೇರಿದೆ. ಇದಲ್ಲದೆ, ಹೌರಾ ಮತ್ತು ಸುಭಾಷ್‌ಗ್ರಾಮ್‌ನ ಇತರ ಎರಡು ಸ್ಥಳಗಳ ಮೇಲೆ ಸಹ ದಾಳಿ ನಡೆಸಿ ಶೋಧ ನಡೆಸುತ್ತಿದೆ.
ಮತ್ತೊಂದೆಡೆ ಸಿಬಿಐ ಕೂಡ ಈ ಬಗ್ಗೆ ತನಿಖೆ ನಡೆಸುತ್ತಿದೆ. ಆಗಸ್ಟ್ 13 ರಂದು, ಕಲ್ಕತ್ತಾ ಹೈಕೋರ್ಟ್ ಆರ್‌ಜಿ ಕಾರ್ ಅತ್ಯಾಚಾರ-ಕೊಲೆ ಪ್ರಕರಣ ಮತ್ತು ಆಸ್ಪತ್ರೆಯಲ್ಲಿನ ಹಣಕಾಸಿನ ಅಕ್ರಮಗಳ ತನಿಖೆಯನ್ನು ಸಿಬಿಐಗೆ ಹಸ್ತಾಂತರಿಸಿತ್ತು. ಸಿಬಿಐ ತನಿಖೆಯ ವಿರುದ್ಧ ಘೋಷ್ ಸಲ್ಲಿಸಿರುವ ಅರ್ಜಿಯ ವಿಚಾರಣೆ ಶುಕ್ರವಾರ ಸುಪ್ರೀಂ ಕೋರ್ಟ್‌ನಲ್ಲಿ ನಡೆಯಿತು. ನ್ಯಾಯಾಲಯ ಅರ್ಜಿಯನ್ನು ತಿರಸ್ಕರಿಸಿದೆ.
ಸಿಬಿಐ ಸೆಪ್ಟೆಂಬರ್ 2 ರಂದು ಘೋಷ್ ಅವರನ್ನು ಬಂಧಿಸಿತ್ತು. ಅವರನ್ನು 8 ದಿನ ಸಿಬಿಐ ಕಸ್ಟಡಿಗೆ ಒಪ್ಪಿಸಲಾಗಿದೆ. ಪಶ್ಚಿಮ ಬಂಗಾಳದ ಆರೋಗ್ಯ ಇಲಾಖೆ ಘೋಷ್ ಅವರನ್ನು ಅಮಾನತುಗೊಳಿಸಿದೆ. ಇದಕ್ಕೂ ಮುನ್ನ ಆಗಸ್ಟ್ 28 ರಂದು ಭಾರತೀಯ ವೈದ್ಯಕೀಯ ಸಂಘ (ಐಎಂಎ) ಸಂದೀಪ್ ಘೋಷ್ ಅವರ ಸದಸ್ಯತ್ವವನ್ನು ರದ್ದುಗೊಳಿಸಿತ್ತು.
ಆ.10 ರಂದು ಟ್ರೈನಿ ವೈದ್ಯೆಯ ಅತ್ಯಾಚಾರ, ಹತ್ಯೆಯ ಬಳಿಕ ಮರುದಿನವೇ ಸಂದೀಪ್ ಘೋಷ್ ಹತ್ಯೆ ನಡೆದ ಸೆಮಿನಾರ್ ಹಾಲ್ ಪಕ್ಕದ ಕೊಠಡಿಗಳನ್ನು ನವೀಕರಿಸಲು ಆದೇಶಿಸಿದ್ದಾರೆ ಎಂದು ಸಿಬಿಐ ತನಿಖೆಯಿಂದ ತಿಳಿದುಬಂದಿದೆ. ಆಗಸ್ಟ್ 9 ರಂದು ಬೆಳಗ್ಗೆ ಸೆಮಿನಾರ್ ಹಾಲ್‌ನಲ್ಲಿ ತರಬೇತಿ ವೈದ್ಯರ ಶವ ಪತ್ತೆಯಾಗಿತ್ತು.
ಅಕ್ರಮ ಹಣ ವರ್ಗಾವಣೆ ಪ್ರಕರಣ: ಕೇಜ್ರಿವಾಲ್ ಜಾಮೀನು ಅರ್ಜಿಯ ತೀರ್ಪು ಕಾಯ್ದಿರಿಸಿದ ಸುಪ್ರೀಂಕೋರ್ಟ್