ಕಾಸ್ಟಿಂಗ್ ಕೌಚ್ ಬಗ್ಗೆ ಮೌನ ಮುರಿದ ಶಿಲ್ಪಾ ಶಿಂಧೆ: ಬಾಲಿವುಡ್ ನಿರ್ಮಾಪಕನಿಂದ ಮೋಹಿಸಲು ಒತ್ತಡ..

shsilpha shindhe
Published on

ಮುಂಬೈ: ಕೇರಳದಲ್ಲಿ ಜಸ್ಟೀಸ್​ ಹೇಮಾ ಸಮಿತಿ ವರದಿ ಹೊರಬೀಳುತ್ತಿದ್ದಂತೆ ಮಾಲಿವುಡ್​ನಲ್ಲಿ ಹಲವರ ತಲೆದಂಡವಾಗಿದೆ. ಇದಕ್ಕೆ ದೇಶಾದ್ಯಂತ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ನಟಿ ಶಿಲ್ಪಾ ಶಿಂಧೆ ಟಿವಿ ಮತ್ತು ಚಲನಚಿತ್ರೋದ್ಯಮದಲ್ಲಿ ಲೈಂಗಿಕ ಕಿರುಕುಳದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.

ಒಬ್ಬ ಚಲನಚಿತ್ರ ನಿರ್ಮಾಪಕ ತನ್ನ ಮೇಲೆ ಬಲವಂತವಾಗಿ ದೈಹಿಕ ಸಂಬಂಧಕ್ಕೆ ಪ್ರಯತ್ನಿಸಿದ್ದ. ತನ್ನನ್ನು ಮೋಹಿಸುವಂತೆ ಒತ್ತಡ ಹೇರಿದ್ದ ಎಂದು ಈ ಹಿಂದೆ ತನಗಾದ ಅನುಭವವನ್ನು ಸಂದರ್ಶನವೊಂದರಲ್ಲಿ ಬಿಚ್ಚಿಟ್ಟಿದ್ದಾರೆ.

ಶಿಲ್ಪಾ ತಮ್ಮ ವೃತ್ತಿಜೀವನದ ಆರಂಭದಲ್ಲಿ ಹಿಂದಿ ಚಲನಚಿತ್ರ ನಿರ್ಮಾಪಕರಿಂದ ಆದ ಕಿರುಕುಳದ ಅನುಭವವನ್ನು ಧೈರ್ಯವಾಗಿ ಹಂಚಿಕೊಂಡಿದ್ದಾರೆ. ಆಡಿಷನ್‌ನಲ್ಲಿ ನಿರ್ಮಾಪಕರು ತನ್ನನ್ನು ಬಲವಂತಪಡಿಸಿದಾಗ ಹೊರಗೆ ಓಡಿಬಂದಿದ್ದೆ. ಆಗ ತಾನು ತುಂಬಾ ಮುಗ್ಧೆಯಾಗಿದ್ದೆ ಎಂದು ಅವರು ತೊಂದರೆಗೊಳಗಾದ ಘಟನೆಯನ್ನು ವಿವರಿಸಿದ್ದಾರೆ.

ಅವು 1998-99ರ ದಿನಗಳು. ನಾನು ಅವರ ಹೆಸರುಗಳನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ, ನಾನು ನಿನ್ನ ಬಾಸ್​, ನಿನ್ನ ಬಟ್ಟೆಗಳನ್ನು ಬಿಚ್ಚಿ ಬೇರೆ ಬಟ್ಟೆ ಹಾಕಿಕೊಂಡು ಬಂದು ನನ್ನ ಜೊತೆ ಮೋಹಿಸುವ ದೃಶ್ಯ ಮಾಡು ಎಂದು ಒತ್ತಾಯಿಸಿದ. ನಾನು ಬಟ್ಟೆ ಬದಲಿಸಿ ಆತನೆದುರು ನಿಂತಾಗ ಆ ವ್ಯಕ್ತಿ ನನ್ನನ್ನು ಬಲವಂತಪಡಿಸಲು ಪ್ರಯತ್ನಿಸಿದ. ನಾನು ತುಂಬಾ ಭಯಗೊಂಡೆ. ನಾನು ಅವನನ್ನು ತಳ್ಳಿ ಹೊರಗೆ ಓಡಿದೆ. ಏನಾಯಿತು ಎಂದು ಭದ್ರತಾ ಸಿಬ್ಬಂದಿ ಕೇಳಿ, ನಡೆದ ಘಟನೆ ಅರಿತು ನನ್ನನ್ನು ತಕ್ಷಣ ಹೊರಡುವಂತೆ ಹೇಳಿದರು. ನಾನು ಕೂಡಲೇ ಅಲ್ಲಿಂದ ಹೊರಟುಹೋದೆ ಎಂದು ಹೇಳಿದರು.

ಅವರಿಗೆ ನನ್ನ ವಯಸ್ಸಿನ ಮಕ್ಕಳಿದ್ದಾರೆ. ಆತ ಮತ್ತೆ ಭೇಟಿಯಾದಾಗ ಸ್ನೇಹಪರನಾಗಿದ್ದ. ನನಗೆ ಆತನ ಚಲನಚಿತ್ರದಲ್ಲಿ ಪಾತ್ರವನ್ನು ಸಹ ನೀಡಲು ಮುಂದೆ ಬಂದಿದ್ದ. ಆದರೆ ನಾನದನ್ನು ನಿರಾಕರಿಸಿದೆ ಎಂದು ಶಿಲ್ಪಾ ಶಿಂಧೆ ವಿವರಿಸಿದ್ದಾರೆ. ಉದ್ಯಮದಲ್ಲಿ ಅನೇಕರಿಗೆ ಇಂತಹವು ಸಾಮಾನ್ಯ ಅನುಭವವಾಗಿದೆ ಎಂದು ಶಿಲ್ಪಾ ಹೈಲೈಟ್ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net