ನಮ್ಮ ರೈತರು ಮಾನವ ಹಕ್ಕು ಹೋರಾಟಗಾರರ ಅಕ್ರಮ ಬಂಧನವನ್ನೂ ಖಂಡಿಸಿದ್ದಾರೆ- ಪ್ರಶಾಂತ್ ಭೂಷಣ್ !

Prashanth Bhushan Rs 1
Published on

ನವದೆಹಲಿ: ನಮ್ಮ ರೈತರು ವಿಶಾಲ ಹೃದಯಿಗಳು ನೋಡಿ, ಮಾನವ ಹಕ್ಕುಗಳ ಹೋರಾಟಗಾರರನ್ನು ಅಕ್ರಮವಾಗಿ ಬಂಧಿಸಿದ ಕೇಂದ್ರ ಸರ್ಕಾರದ ಕ್ರಮವನ್ನೂ ಅವರು ತಮ್ಮ ಪ್ರತಿಭಟನೆಯ ವೇಳೆ ಖಂಡಿಸಿದ್ದಾರೆ ಎಂಬರ್ಥದ ಅಭಿಪ್ರಾಯದೊಂದಿಗೆ ತ್ರಿಕ್ರಿ ಬಾರ್ಡರ್​ನಲ್ಲಿ ನಡೆಯುತ್ತಿರುವ ರೈತ ಪ್ರತಿಭಟನೆಯಲ್ಲಿ ಗುಂಪೊಂದು ನಕ್ಸಲ್ ಹಿತೈಷಿಗಳು, ದೇಶ ವಿರೋಧಿ ಘೋಷಣೆ ಕೂಗಿದವರ ಬಿಡುಗಡೆಗೆ ಆಗ್ರಹಿಸಿದ 11 ಸೆಕೆಂಡ್​ಗಳ ವಿಡಿಯೋವನ್ನು ಹಿರಿಯ ನ್ಯಾಯವಾದಿ ಪ್ರಶಾಂತ್ ಭೂಷಣ್ ಟ್ವಿಟರ್​ನಲ್ಲಿ ಶೇರ್ ಮಾಡಿದ್ದಾರೆ.

ಅವರು ಟ್ವೀಟ್​ನಲ್ಲಿ ಹೇಳಿರುವುದಿಷ್ಟು - ತ್ರಿಕ್ರಿ ಬಾರ್ಡರ್​ನಲ್ಲಿ ನಡೆದ ಬೃಹತ್ ರೈತ ಪ್ರತಿಭಟನೆಯಲ್ಲಿ ರೈತರು ಕೂಡ ನಮ್ಮ ಮಾನವ ಹಕ್ಕು ಹೋರಾಟಗಾರರ ಅಕ್ರಮ ಬಂಧನವನ್ನು ಖಂಡಿಸಿದ್ದಾರೆ. ನಮ್ಮ ರೈತರು ವಿಶಾಲ ಹೃದಯದವರಾಗಿದ್ದು, ಮಾನವೀಯತೆ ಮತ್ತು ಪ್ರಜಾಪ್ರಭುತ್ವದ ಬಗ್ಗೆ ಕಾಳಜಿ ಉಳ್ಳವರಾಗಿದ್ದಾರೆ ಎಂದು ಪ್ರಶಾಂತ್ ಭೂಷಣ್ ಹೇಳಿದ್ದಾರೆ.

ಇದಕ್ಕೆ ಅನೇಕರು ಪ್ರತಿಕ್ರಿಯೆ ನೀಡಿದ್ದು, ಇದು ರೈತ ಪ್ರತಿಭಟನೆ ಅಲ್ಲ, ಸಿಎಎ ವಿರೋಧಿಸಿದ ಪ್ರತಿಭಟನೆಯ ಇನ್ನೊಂದು ರೂಪ ಎಂದೆಲ್ಲ ಟೀಕಿಸಿದ್ದಾರೆ. ಇಂದು ಬೆಳಗ್ಗೆ 9.52ಕ್ಕೆ ಮಾಡಿರುವ ಈ ಟ್ವೀಟ್ 950ಕ್ಕೂ ಹೆಚ್ಚು ಸಲ ರೀಟ್ವೀಟ್ ಆಗಿದೆ.

ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್​ಗಾಗಿ ನಮ್ಮ ಫೇಸ್​ಬುಕ್​ ಪುಟ ಲೈಕ್ ಮಾಡಿ ಮತ್ತು ಫಾಲೋ ಮಾಡಿ..

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net