

ನವದೆಹಲಿ: ಹೊಸ ಕೃಷಿ ಕಾನೂನುಗಳನ್ನು ವಿರೋಧಿಸಿ ರೈತ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿದ್ದರೆ, ಅವರಿಗೆ ಬೆಂಬಲ ನೀಡುತ್ತೇವೆ ಎನ್ನುತ್ತ ಸೇರಿಕೊಂಡವರೆಲ್ಲ ತಮ್ಮ ತಮ್ಮ ಬೇಳೆ ಬೇಯಿಸೋ ಪ್ರಯತ್ನ ನಡೆಸಿದ್ದಾರೆ.
ಇದರ ಫಲವೋ ಏನೋ ಎಂಬಂತೆ ತ್ರಿಕ್ರಿ ಬಾರ್ಡರ್ನಲ್ಲಿ ಪ್ರತಿಭಟನಾ ನಿರತ ರೈತ ಸಂಘಟನೆಯ ವೇದಿಕೆ ಮೇಲೆ ನಕ್ಸಲ್ ಹಿತೈಷಿ, ದೇಶ ವಿರೋಧಿ ಘೋಷಣೆ ಕೂಗಿದವರ ಬಿಡುಗಡೆಗೆ ಆಗ್ರಹಿಸಿದ ಬ್ಯಾಕ್ ಡ್ರಾಪ್ ಕಾಣಿಸಿಕೊಂಡಿದೆ! ಅಷ್ಟೇ ಅಲ್ಲ, ಒಂದು ಗುಂಪು ಈ ನಕ್ಸಲ್ ಹಿತೈಷಿ, ದೇಶ ವಿರೋಧಿ ಘೋಷಣೆ ಕೂಗಿದವರ ಫೊಟೋಗಳನ್ನು ಹಿಡಿದು ಪ್ರತಿಭಟನೆ ನಡೆಸುತ್ತಿರುವುದು ಕಂಡುಬಂತು.
ಎಲ್ಗಾರ್ ಪರಿಷದ್ ಕೇಸ್ ಮತ್ತು ದೆಹಲಿ ಗಲಭೆ ಕೇಸ್ನಲ್ಲಿ ಬಂಧಿತರಾದವರ ಫೋಟೋಗಳವು. ಯುಎಪಿಎ ಕಾನೂನು ಉಲ್ಲಂಘಿಸಿದ್ದಕ್ಕಾಗಿ ಬಂಧಿತರಾದವರ ಬಿಡುಗಡೆ ಆಗ್ರಹಿಸಿದ ಧ್ವನಿ ತ್ರಿಕ್ರಿ ಬಾರ್ಡರ್ನಲ್ಲಿ ನಿನ್ನೆ ಅನುರಣಿಸಿತ್ತು. ವರವರ ರಾವ್, ಉಮರ್ ಖಾಲಿದ್, ಶಾರ್ಜೀಲ್ ಇಮಾಮ್ ಮತ್ತು ಇತರರ ಬಿಡುಗಡೆಗೆ ಅಲ್ಲಿದ್ದವರು ಆಗ್ರಹಿಸಿ ಘೋಷಣೆ ಕೂಗಿದ್ದು ಗಮನಸೆಳೆದಿತ್ತು. (ಏಜೆನ್ಸೀಸ್)
ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್ಗಾಗಿ ನಮ್ಮ ಫೇಸ್ಬುಕ್ ಪುಟ ಲೈಕ್ ಮಾಡಿ ಮತ್ತು ಫಾಲೋ ಮಾಡಿ..