ಬೆಂಗಳೂರು: ಅಲ್ಲು ಅರ್ಜುನ್-ರಶ್ಮಿಕಾ ನಟನೆಯ ಪುಷ್ಪ-2 (Pushpa-2) ಚಿತ್ರ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದ್ದು, ಸಿನಿಮಾವನ್ನು ವೀಕ್ಷಿಸಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಭಅರತ ಸೇರಿದಂತೆ ವಿಶ್ವಾದಾದ್ಯಂತ ಚಿತ್ರ ಬಿಡುಗಡೆಯಾಗುತ್ತಿದ್ದು, ಬೆಂಗಳೂರಿನಲ್ಲಿ ಚಿತ್ರದ ಪ್ರದರ್ಶನವನ್ನು ರದ್ದುಪಡಿಸುವಂತೆ ಆದೇಶ ಹೊರಡಿಸಲಾಗಿದೆ.
ಚಿತ್ರ ಬಿಡುಗಡೆಗೆ ಕ್ಷಣಗಣನೆ ಆರಂಭವಾಗುತ್ತಿದ್ದಂತೆ ಸಿನಿಮಾ ತಂಡಕ್ಕೆ ಬೆಂಗಳೂರು ನಗರ ಜಿಲ್ಲಾಧಿಕಾರಿ ಶಾಕ್ ನೀಡಿದ್ದಾರೆ. ಮಯ ಪಾಲನೆ ಮಾಡದೇ ಪುಷ್ಪ 2 ಪ್ರದರ್ಶನಕ್ಕೆ ಮುಂದಾದ ಚಿತ್ರಮಂದಿರಗಳಿಗೆ ಬೆಂಗಳೂರು ನಗರ ಜಿಲ್ಲಾಧಿಕಾರಿ ಶಾಕ್ ನೀಡಿದ್ದಾರೆ. ಅವಧಿಗೂ ಮುನ್ನ ಚಿತ್ರ ಪ್ರದರ್ಶನಕ್ಕೆ ಮುಂದಾಗಿದ್ದ ಥಿಯೇಟರ್ಗಳಿಗೆ ಜಿಲ್ಲಾಧಿಕಾರಿ ಕಡಿವಾಣ ಹಾಕಿದ್ದು, ಈ ಮೂಲಕ ಫ್ಯಾನ್ಸ್ ಹಾಗೂ ಚಿತ್ರತಂಡಕ್ಕೆ ಶಾಕ್ ನೀಡಿದ್ದಾರೆ.
ಕರ್ನಾಟಕದಲ್ಲಿ ಯಾವುದೇ ಸಿನಿಮಾವನ್ನು ಬೆಳಗ್ಗೆ 6:30ಕ್ಕೂ ಮುನ್ನ ಪ್ರದರ್ಶನ ಮಾಡಬಾರದೆಂದು ರಾಜ್ಯ ಸರ್ಕಾರ ನಿಯಮವನ್ನು ಹೊರಡಿಸಿದೆ. ಇದೆಲ್ಲದರ ಹೊರತಾಗಿಯೂ ಕೆಲವು ಚಿತ್ರಮಂದಿರಗಳಲ್ಲಿ ಬೆಳ್ಳಂಬೆಳಗೆ 3.45ರಿಂದ ಅಭಿಮಾನಿಗಳಿಗಾಗಿ ವಿಶೇಷ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ಈ ವಿಚಾರ ಹೊರಬರುತ್ತಿದ್ದಂತೆ ಜಿಲ್ಲಾಧಿಕಾರಿ ಇದಕ್ಕೆ ಕಡಿವಾಣ ಹಾಕಿದ್ದು, ಅವಧಿಗೂ ಮುನ್ನ ಯಾವ ಚಿತ್ರವನ್ನು ಪ್ರದರ್ಶಿಸಬಾರದೆಂದು ಆದೇಶ ಹೊರಡಿಸಿದ್ದಾರೆ.
ಚಲನಚಿತ್ರ ಪ್ರದರ್ಶನ ನಿಯಮದ ಪ್ರಕಾರ, ಕರ್ನಾಟಕ ರಾಜ್ಯದ ಚಿತ್ರಮಂದಿರಗಳಲ್ಲಿ ಮುಂಜಾನೆ 6 ಗಂಟೆಯ ಒಳಗೆ ಯಾವುದೇ ಚಿತ್ರಮಂದಿರಗಳಲ್ಲಿ ಸಿನಿಮಾಗಳನ್ನು ಪ್ರದರ್ಶನ ಮಾಡುವಂತೆ ಇಲ್ಲ ಎಂಬ ರಾಜ್ಯ ಸರ್ಕಾರದ ಆದೇಶವಿದ್ದರೂ ಕರ್ನಾಟಕದ ಕೆಲವು ಚಿತ್ರಮಂದಿರಗಳಲ್ಲಿ ಅವಧಿಗೂ ಮುನ್ನ ಚಿತ್ರ ಪ್ರದರ್ಶನಗೊಳ್ಳುತ್ತಿರುವುದು ಕಾನೂನು ಬಾಹಿರವಾಗಿರುತ್ತದೆ. ಈ ಸಂಬಂಧ 43 ಥಿಯೇಟರ್‌ಗಳ ವಿರುದ್ಧ ಸಿನಿಮಾ ಪ್ರದರ್ಶನ ಮಾಡದಂತೆ ಬೆಂಗಳೂರು ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
ಡಿಸೆಂಬರ್ 05ರಂದು ಪುಷ್ಪ-2 ದಿ ರೂಲ್ (Pushpa-2 The Rule) ಚಿತ್ರ ಬಿಡುಗಡೆಯಾಗಲಿದ್ದು, ಚಿತ್ರತಂಡ ಈಗಾಗಲೇ ದೇಶದ ವಿವಿಧ ನಗರಗಳಲ್ಲಿ ಭರ್ಜರಿ ಪ್ರಮೋಷನ್ ಮಾಡುತ್ತಿದೆ. ಪಾಟ್ನಾ, ಚೆನ್ನೈ, ಕೋಲ್ಕತ್ತಾ, ಕೊಚ್ಚಿ, ಮುಂಬೈ ಮತ್ತು ಹೈದರಾಬಾದ್ ಸೇರಿದಂತೆ ಮಹಾನಗರಗಳಿಗೆ ಭೇಟಿ ಕೊಡುವ ಮೂಲಕ ಪುಷ್ಪ ತಂಡ ಪ್ರಚಾರ ನಡೆಸಿದ್ದು, ಅಭಿಮಾನಿಗಳು ಚಿತ್ರವನ್ನು ವೀಕ್ಷಿಸಲು ಕಾತುರದಿಂದ ಕಾಯುತ್ತಿರುವ ನಡುವೆಯೇ ಬೆಂಗಳೂರು ನಗರ ಜಿಲ್ಲಾಧಿಕಾರಿಗಳು ಫ್ಯಾನ್ಸ್ಗೆ ಶಾಕ್ ನೀಡಿದ್ದಾರೆ.
ಐಸಿಸಿ ಅಧ್ಯಕ್ಷರಾಗಿ Jay Shah ಪದಗ್ರಹಣ; ಬಿಸಿಸಿಐ ಮುಂದಿನ ಕಾರ್ಯದರ್ಶಿ ಯಾರು ಗೊತ್ತಾ?