ಐಸಿಸಿ ಅಧ್ಯಕ್ಷರಾಗಿ Jay Shah ಪದಗ್ರಹಣ; ಬಿಸಿಸಿಐ ಮುಂದಿನ ಕಾರ್ಯದರ್ಶಿ ಯಾರು ಗೊತ್ತಾ?

Jay Shah
Published on

ನವದೆಹಲಿ: ಬಿಸಿಸಿಐ ಕಾರ್ಯದರ್ಶಿಯಾಗಿ (BCCI Secretary) ಕಾರ್ಯನಿರ್ವಹಿಸಿದ್ದ ಜಯ್​ ಷಾ (Jay Shah) ಇದೀಗ ಅಂತಾರಾಷ್ಟ್ರೀಯ ಕ್ರಿಕೆಟ್​ ಮಂಡಳಿಯ ಅಧ್ಯಕ್ಷರಾಗಿ (ICC President) ಅಧಿಕಾರ ವಹಿಸಿಕೊಂಡಿದ್ದು, ಇದೀಗ ಬಿಸಿಸಿಐ ಕಾರ್ಯದರ್ಶಿ ಸ್ಥಾನ ತೆರವಾಗಿದೆ. ಇದೀಗ ಈ ಸ್ಥಾನಕ್ಕೆ ಪೈಪೋಟಿ ಆರಂಭವಾಗಿದ್ದು, ಮುಂದಿನ ಕಾರ್ಯದರ್ಶಿ ಯಾರಾಗಲಿದ್ದಾರೆ ಎಂಬ ಕುತೂಹಲ ಶುರುವಾಗಿದೆ.

ಇದೀಗ ಈ ಸ್ಥಾನಕ್ಕೆ ಬಿಸಿಸಿಐ ಜಂಟಿ ಕಾರ್ಯದರ್ಶಿ ದೇವ್‌ಜಿತ್ ಸೈಕಿಯಾ, ಡಿಡಿಸಿಎ ಅಧ್ಯಕ್ಷ ರೋಹನ್ ಜೇಟ್ಲಿ, ಅನಿಲ್​ ಪಟೇಲ್​ ಹೆಸರು ಕೇಳಿ ಬರುತ್ತಿದ್ದು, ಅಂತಿಮವಾಗಿ ಈ ಸ್ಥಾನಕ್ಕೆ ಯಾರು ಆಯ್ಕೆಯಾಗಲಿದ್ದಾರೆ ಎಂದು ಕಾದು ನೋಡಬೇಕಿದೆ. 

ಈ ಬಗ್ಗೆ ಮಾತನಾಡಿರುವ ಬಿಸಿಸಿಐನ (BCCI) ಹಿರಿಯ ಅಧಿಕಾರಿಯೊಬ್ಬರು, ಏನಾಗುತ್ತಿದೆ ಎಂಬುದು ನಮಗೆ ತಿಳಿದಿಲ್ಲ. ಪ್ರಸ್ತುತ ಈ ವಿಚಾರವಾಗಿ ರಾಜ್ಯ ಕ್ರಿಕೆಟ್​ ಮಂಡಳಿಗಳು ಮೌನ ವಹಿಸಿದ್ದು, ಯಾರಾಗುತ್ತಾರೆ ಎಂಬ ಪ್ರಶ್ನೆ ನಮ್ಮನ್ನು ಕಾಡಲು ಶುರು ಮಾಡಿದೆ. ದಿನದಿಂದ ದಿನಕ್ಕೆ ವ್ಯವಹರಿಸಬೇಕಾದ ಸಮಸ್ಯೆಗಳಿವೆ ಮತ್ತು ಯಾರಾದರೂ ಬಿಸಿಸಿಐ ಅನ್ನು ಹೇಗೆ ನಡೆಸುತ್ತಾರೆ ಎಂಬುದರ ಕುರಿತು ಸ್ವಲ್ಪ ಜ್ಞಾನವನ್ನು ಹೊಂದಿರಬೇಕು. 

ಮೊದಲೇ ಈ ಬಗ್ಗೆ ನಿರ್ಧರಿಸಬೇಕಿತ್ತು. ವಿಶ್ವದ ಅತ್ಯಂತ ಶಕ್ತಿಶಾಲಿ ಕ್ರಿಕೆಟ್ ಸಂಸ್ಥೆಯಾದ ಬಿಸಿಸಿಐನಲ್ಲಿ ಇದೀಗ ಕಾರ್ಯದರ್ಶಿಯ ಹುದ್ದೆ ಖಾಲಿ ಇದ್ದು, ಸಾಕಷ್ಟು ಕೆಲಸಗಳು ಬಾಕಿ ಉಳಿದಿವೆ. ಅಂತಿಮವಾಗಿ ಈ ಸ್ಥಾನಕ್ಕೆ ಯಾರು ಬಂದು ಕೂರಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ ಎಂದು ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net