ನವದೆಹಲಿ: ಮನುಷ್ಯನಿಗೆ ಅದೃಷ್ಟ (Luck) ಯಾವಾಗ, ಹೇಗೆ ಬರುತ್ತದೆ ಎಂದು ಯಾರಿಂದಲೂ ಊಹಿಸಲು ಸಾಧ್ಯವಿಲ್ಲ. ಕೆಲವರು ತಮ್ಮ ಅದೃಷ್ಟವನ್ನು ಪರೀಕ್ಷಿಸಲು ಪ್ರತಿ ತಿಂಗಳು ಲಾಟರಿ ಟಿಕೆಟ್‌ಗಳನ್ನು (Lottery Ticket) ಖರೀದಿಸುತ್ತಲೇ ಇರುತ್ತಾರೆ. ಸಾಮಾನ್ಯ ವ್ಯಕ್ತಿಗಳಿಗೆ ಲಾಟರಿಯಲ್ಲಿ (Lottery) ಬಂಪರ್ ಹೊಡೆದಾಗ ನಮ್ಮ ಅದೃಷ್ಟ ಸರಿ ಇಲ್ಲ ಎಂದುಕೊಂಡಿರುತ್ತೇವೆ. ಆದರೆ, ಅದೆಲ್ಲಾ ಕಾಲದ ಮಹಿಮೆ ಎಂದರೆ ತಪ್ಪಾಗಲಾರದು. ಇದೀಗ ಮಹಿಳೆಯೊಬ್ಬರು ಆರೆಂಜ್ ಜ್ಯೂಸ್ನಿಂದಾಗಿ ಕೋಟ್ಯಧಿಪತಿಯಾಗಿದ್ದು, ಹಲವರಿಗೆ ಆಶ್ವರ್ಯ ಮೂಡಿಸಿದೆ. ಈ ವಿಚಾರ ಆಶ್ವರ್ಯವೆನಿಸಿದರು ಇದು ನಿಜವಾಗಿದೆ.
ಅಮೆರಿಕದ ಉತ್ತರ ಕೆರೊಲಿನಾದ ಕೆರ್ನರ್ಸ್‌ವಿಲ್ಲೆ ನಿವಾಸಿ ಕೆಲ್ಲಿ ಸ್ಪಾಹ್ರ್ ಕ್ವಾಲಿಟಿ ಮಾರ್ಟ್‌ನಲ್ಲಿ ಆರೆಂಜ್ ಜ್ಯೂಸ್ ಖರೀದಿಸಿದ್ದು, ಅಲ್ಲೇ ಲಾಟರಿ ಟಿಕೆಟ್‌ಗಳನ್ನು ಮಾರಾಟ ಮಾಡುತ್ತಿರುವುದನ್ನು ಕಂಡು $20 ಕೊಟ್ಟು ಖರೀದಿಸಿ ತಕ್ಷಣವೇ ಅದನ್ನು ಸ್ಕ್ರ್ಯಾಚ್ ಮಾಡಿ ಪರೀಕ್ಷಿಸಿದಾಗ ಅದರಲ್ಲಿ$ 25,000 ಗೆದ್ದಿರುವುದಾಗಿ ತೋರಿಸಿದೆ. ಅಂದರೆ ಭಾರತೀಯ ರೂಪಾಯಿಗಳಲ್ಲಿ ಇದು ಸುಮಾರು 2 ಕೋಟಿ ರೂಪಾಯಿ. ಕಿತ್ತಳೆ ಜ್ಯೂಸ್ ಜೊತೆಗೆ ಇಷ್ಟೊಂದು ದುಡ್ಡು ಸಿಗುತ್ತೆ ಅಂತ ಕೆಲ್ಲಿ ಊಹಿಸಿರಲಿಲ್ಲ. 20 ಡಾಲರ್‌ಗೆ ಕೋಟಿ ಕೋಟಿ ದುಡ್ಡು ಗೆದ್ದಿದ್ದಾರೆ.
ಈ ಬಗ್ಗೆ ಮಾತನಾಡಿರುವ ಕೆಲ್ಲಿ ಸ್ಪಾಹ್ರ್, ಈ ಗೆಲುವು ನನ್ನ ಕುಟುಂಬಕ್ಕೆ ದೊಡ್ಡ ಬದಲಾವಣೆ ತರಲಿದೆ . ಇದು ನಮಗೆ ಜೀವನವನ್ನು ಬದಲಾಯಿಸುವ ಮೊತ್ತವಾಗಿದೆ. ಅನೇಕ ಹೊಸ ಅವಕಾಶಗಳನ್ನು ತೆರೆಯುತ್ತದೆ. ನಾನು ಗ್ಯಾಸ್ ಸ್ಟೇಷನ್‌ನಲ್ಲಿದ್ದಾಗ ಹೊಸ ಟಿಕೆಟ್‌ಗಳು ಇವೆ ಎಂದು ನೋಡಿದೆ. ಆದ್ದರಿಂದ ನಾನು ಅವುಗಳನ್ನು ಖರೀದಿಸಲು ನಿರ್ಧರಿಸಿದೆ. ಟಿಕೆಟ್‌ನಲ್ಲಿ ಮಡಚುವ ಭಾಗವಿದೆ, ಇದು ನಮಗೆ ಇನ್ನೂ ಕೆಲವು ಬಾಗಿಲುಗಳನ್ನು ತೆರೆಯಿತು. ಈ ರೀತಿಯ ದೊಡ್ಡ ಗೆಲುವುಗಳು ನಿಜವಾಗಿಯೂ ಸಂಭವಿಸುತ್ತವೆ ಎಂದು ತಿಳಿದುಕೊಳ್ಳಲು ಸಂತೋಷವಾಗಿದೆ ಎಂದರು.
ಸ್ಪಾಹರ್ ಖರೀದಿಸಿದ ಟಿಕೆಟ್ ರಜಾದಿನದ ವಿಷಯದ ಮೆರ್ರಿ ಮಲ್ಟಿಪ್ಲೈಯರ್ ಆಟದಿಂದ ಬಂದಿದೆ. ಕೆಲ್ಲಿ ಸ್ಪಾಹರ್ ಅವರಿಗೆ ತೆರಿಗೆಗಳನ್ನು ಕಡಿತಗೊಳಿಸಿದ ನಂತರ ಅವರು ಸುಮಾರು $178,756 (ಅಂದಾಜು ರೂ. 1.5 ಕೋಟಿ) ಮನೆಗೆ ತೆಗೆದುಕೊಂಡು ಹೋದರು. ಲಾಟರಿ ಕಂಪನಿಯಲ್ಲಿ ನಡೆದ ಸಮಾರಂಭದಲ್ಲಿ ಅವರನ್ನು ಸನ್ಮಾನಿಸಿ ಬಹುಮಾನವನ್ನು ನೀಡಲಾಗಿದೆ.
ಸುಟ್ಟಿದ್ದು ನಮ್ಮನೆ, ಜೀವ ಹೋಗಿದ್ದು ನಮ್ಮವರದ್ದು; UP CM ಯೋಗಿ ಹೇಳಿಕೆಗೆ ಸಚಿವ Priyank Kharge ತಿರುಗೇಟು