ಬುದ್ಧಿಗೊಂದು ಗುದ್ದು: ಯಾವ ಲೋಟದಲ್ಲಿ ಹೆಚ್ಚು ನೀರಿದೆ? ಜೀನಿಯಸ್​ ಮಾತ್ರ ಇದಕ್ಕೆ ಉತ್ತರ ಹೇಳಬಲ್ಲರು! Optical Illusion

Optical Illusion
Published on

Optical Illusion : ನಮ್ಮ ಕಣ್ಣುಗಳಿಗೆ ಸವಾಲು ಎಸೆಯುವಂತಹ ಚಿತ್ರಗಳು ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣ (Social Media) ಗಳಲ್ಲಿ ಆಗಾಗ ಕಾಣ ಸಿಗುತ್ತವೆ. ಅದು ಪ್ರಾಣಿ-ಪಕ್ಷಿಗಳಾಗಿರಬಹುದು ಅಥವಾ ವಸ್ತುಗಳನ್ನು ಪತ್ತೆ ಹಚ್ಚುವುದಾಗಿರಬಹುದು. ಆದರೆ, ನೆಟ್ಟಿಗರ ತಲೆಗೆ ಹುಳ ಬಿಡುವುದಂತೂ ನಿಜ. ಅಂಥದ್ದೇ ಮತ್ತೊಂದು ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ದೃಷ್ಟಿ ಭ್ರಮೆ ಎಂದರೇನು?

ಸಾಮಾನ್ಯವಾಗಿ ಮಾನವನ ಮೆದುಳು ವಿಷಯಗಳನ್ನು ಅಥವಾ ಚಿತ್ರಗಳನ್ನು ಹೇಗೆ ನೋಡುತ್ತದೆ ಎಂಬುದರ ಆಧಾರದ ಮೇಲೆ ಅದರ ಗ್ರಹಿಕೆ ನಿರ್ಧಾರವಾಗುತ್ತದೆ. ಆದರೆ, ಕೆಲವೊಮ್ಮೆ ನಾವು ನೋಡುವುದಕ್ಕೂ ಮತ್ತು ಗ್ರಹಿಸಿವುದಕ್ಕೂ ವಿಭಿನ್ನವಾಗಿರುತ್ತದೆ. ಇದನ್ನೇ ನಾವು ದೃಷ್ಟಿ ಭ್ರಮೆ (Optical Illusion​) ಎಂದು ಕರೆಯುತ್ತೇವೆ.

ಮೋಜಿನ ಮಾರ್ಗ

ಈ ದೃಷ್ಟಿ ಭ್ರಮೆ ಅಥವಾ ಆಪ್ಟಿಕಲ್ ಇಲ್ಯೂಷನ್​ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿವೆ. ಈ ಸವಾಲುಗಳನ್ನು ಸಾಕಷ್ಟು ಜನರು ಸ್ವೀಕರಿಸಿ, ಅದರಲ್ಲಿ ತೊಡಗುತ್ತಾರೆ. ನೆಟಿಗ್ಗರು ಹೊಸ ಹೊಸ ಆಪ್ಟಿಕಲ್ ಇಲ್ಯೂಷನ್ ಸವಾಲುಗಳನ್ನು ಸ್ವೀಕರಿಸುವುದನ್ನು ಆನಂದಿಸುತ್ತಾರೆ. ತಮ್ಮನ್ನು ಮನರಂಜಿಸುವ ಮೋಜಿನ ಮಾರ್ಗವಾಗಿದೆ ಮತ್ತು ಸ್ನೇಹಿತರೊಂದಿಗೆ ತಮ್ಮ ಬುದ್ಧಿವಂತಿಕೆಯನ್ನು ಸಾಬೀತುಪಡಿಸುವ ಮಾರ್ಗವಾಗಿದೆ ಎಂದು ಭಾವಿಸುತ್ತಾರೆ. ಇದರ ಹೊರತಾಗಿ, ವೀಕ್ಷಣಾ ಕೌಶಲ್ಯ ಮತ್ತು ಏಕಾಗ್ರತೆಯನ್ನು ಸುಧಾರಿಸುವಲ್ಲಿ ಆಪ್ಟಿಕಲ್ ಇಲ್ಯೂಷನ್​ಗಳು ಸಹ ಪ್ರಯೋಜನಕಾರಿ ಎಂದು ಸಾಬೀತುಪಡಿಸುತ್ತದೆ.

ನಿಮ್ಮ ಬುದ್ಧಿವಂತಿಕೆಯನ್ನು ಪರಿಶೀಲಿಸಲು ಬಯಸುವಿರಾ? ಹಾಗಾದರೆ, ಈ ಸವಾಲನ್ನು ಸ್ವೀಕರಿಸಿ….

Optical Illusion 1

ಸದ್ಯ ವೈರಲ್​​​ ಆಗಿರುವ ಫೋಟೋದಲ್ಲಿ ಒಂದೇ ಅಳತೆಯ ನಾಲ್ಕು ಗಾಜಿನ ಲೋಟಗಳನ್ನು ಕಾಣಬಹುದು. ನಾಲ್ಕೂ ಲೋಟದಲ್ಲಿ ನೀರು ತುಂಬಿದೆ. ಆದರೆ, ಒಂದೊಂದು ಲೋಟದಲ್ಲಿ ಒಂದೊಂದು ವಸ್ತುವಿದೆ. ಮೊದಲ ಲೋಟದಲ್ಲಿ ಕತ್ತರಿ ಇದ್ದರೆ, ಎರಡನೇ ಲೋಟದಲ್ಲಿ ಪೇಪರ್​ ಪಿನ್​, ಮೂರನೇ ಲೋಟದಲ್ಲಿ ಸಣ್ಣ ಡಬ್ಬಿ ಹಾಗೂ ನಾಲ್ಕನೇ ಲೋಟದಲ್ಲಿ ಕೈಗಡಿಯಾರವನ್ನು ಇಡಲಾಗಿದೆ. ನಾಲ್ಕೂ ವಸ್ತುಗಳು ನೀರಿನಲ್ಲಿ ಮುಳುಗಿವೆ ಮತ್ತು ನೀರಿನ ಮಟ್ಟ ಒಂದೇ ರೀತಿ ಇದೆ. ಇದರಲ್ಲಿ ನಿಮ್ಮ ಸವಾಲು ಏನೆಂದರೆ, ನಾಲ್ಕು ಲೋಟದಲ್ಲಿ ಯಾವ ಲೋಟದಲ್ಲಿ ಹೆಚ್ಚು ನೀರಿದೆ ಎಂಬುದನ್ನು ಪತ್ತೆಹಚ್ಚಬೇಕು. ನಿಮಗೆ 10 ಸೆಕೆಂಡ್​ ಸಮಯ ನೀಡಲಾಗುತ್ತದೆ ಬುದ್ಧಿವಂತರಾಗಿದ್ದರೆ ಅಷ್ಟರಲ್ಲಿ ಉತ್ತರ ಹೇಳಬೇಕು. ನಿಮ್ಮ ಸಮಯ ಈಗ ಶುರು. ನಿರ್ದಿಷ್ಟ ಸಮಯದೊಳಗೆ ನೀವು ಉತ್ತರ ಕಂಡುಕೊಳ್ಳುತ್ತೀರಿ ಎಂದು ಭಾವಿಸುತ್ತೇವೆ.

10 ಸೆಕೆಂಡ್​ ಸಮಯದಲ್ಲಿ ನೀವು ಉತ್ತರ ಕಂಡುಕೊಳ್ಳದೇ ಪರದಾಡುತ್ತಿದ್ದರೆ ಚಿಂತಿಸಬೇಡಿ. ಉತ್ತರವನ್ನು ನಾವು ಹೇಳುತ್ತೇವೆ. ನೀರಿನಲ್ಲಿ ಮುಳುಗಿರುವ ವಸ್ತುವು ತನ್ನದೇ ಆದ ಪರಿಮಾಣದಂತೆಯೇ ಅದೇ ಪ್ರಮಾಣದ ನೀರನ್ನು ಸ್ಥಳಾಂತರಿಸುತ್ತದೆ. ಆದ್ದರಿಂದ ಪೇಪರ್ ಪಿನ್ ಇತರ ವಸ್ತುಗಳಿಗಿಂತ ಕಡಿಮೆ ಪರಿಮಾಣವನ್ನು ಹೊಂದಿರುವುದರಿಂದ, ಗಾಜಿನಲ್ಲಿ ಕಡಿಮೆ ನೀರನ್ನು ಹಿಡಿದಿಟ್ಟುಕೊಳ್ಳುತ್ತದೆ. ಹೀಗಾಗಿ ಉತ್ತರ ಪೇಪರ್​ ಪಿನ್​ ಇರುವ ಗಾಜಿನ ಲೋಟ. (ಏಜೆನ್ಸೀಸ್​)

Optical Illusion 2
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net