ಪಿಡಬ್ಲುಡಿಯಲ್ಲಿ ಇಂಜಿನಿಯರ್ ಆಗಲು ಕೆಪಿಎಸ್​​ಸಿ ಕರೆ

ENGINEER
Published on

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್​ಸಿ) ಸರ್ಕಾರದ ವಿವಿಧ ಇಲಾಖೆಗಳಲ್ಲಿನ ವಿವಿಧ ಗ್ರೂಪ್ ಎ, ಬಿ ಮತ್ತು ಸಿ ತಾಂತ್ರಿಕ ವರ್ಗದ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಆನ್​ಲೈನ್ ಅರ್ಜಿ ಆಹ್ವಾನಿಸಿದೆ.

* ಗ್ರೂಪ್ ಎ ಹುದ್ದೆಗಳು (ಕರ್ನಾಟಕ ನಾಗರಿಕ ಸೇವೆಗಳು - ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ನೇರ ನೇಮಕಾತಿ ಹಾಗೂ ಆಯ್ಕೆ) : ಆಯುಷ್ ಇಲಾಖೆಯ ಆಯುಷ್ ವೈದ್ಯಕೀಯ ಮಹಾವಿದ್ಯಾಲಯಗಳಲ್ಲಿ ಪ್ರಾಧ್ಯಾಪಕರು / ಸಹ ಪ್ರಾಧ್ಯಾಪಕರು- 20 (ಬ್ಯಾಕ್​ಲಾಗ್) ಹುದ್ದೆಗಳು.

* ಗ್ರೂಪ್ ಬಿ ಹುದ್ದೆಗಳು: ಆಯುಷ್ ಇಲಾಖೆಯ ಆಯುಷ್ ವೈದ್ಯಕೀಯ ಮಹಾವಿದ್ಯಾಲಯಗಳಲ್ಲಿ ವಿವಿಧ ವಿಷಯಗಳಲ್ಲಿ ಸಹಾಯ ಪ್ರಾಧ್ಯಾಪಕರು (ಉಳಿಕೆ ಮೂಲ ವೃಂದ- 30, ಹೈಕ-17) 47 ಹುದ್ದೆಗಳು.

ಗ್ರೂಪ್ ಸಿ ಹುದ್ದೆಗಳು: ಶುಶ್ರೂಷಕರು- (ಉಳಿಕೆ ಮೂಲ ವೃಂದ-1, ಹೈಕ-22) -23 ಹುದ್ದೆಗಳು.

ಔಷಧ ವಿತರಕರು (ಬ್ಯಾಕ್​​ ಲಾಗ್-3, ಹೈಕ-73) 76 ಹುದ್ದೆಗಳು.

ಕರ್ನಾಟಕ ಆಯುರ್ವೇದ, ಯುನಾನಿ, ಸಿದ್ಧ, ಹೋಮಿಯೋಪಥಿ, ನೇಚರ್ ಕ್ಯೂರ್, ಯೋಗ (ಆಯುಷ್) ( ಫಿಜಿಷಿಯನ್​​ಗಳ ವಿಶೇಷ ನೇಮಕಾತಿ ಗ್ರೇಡ್-2) ನೇಮಕಾತಿ ಗ್ರೂಪ್ ಎ ಹುದ್ದೆಗಳು : ಆಯುಷ್ ಇಲಾಖೆಯ ಸರ್ಕಾರಿ ಆಸ್ಪತ್ರೆ ಹಾಗೂ ಚಿಕಿತ್ಸಾಲಯಗಳಲ್ಲಿ ವೈದ್ಯಾಧಿಕಾರಿ 83 + 27 = 110 ಹುದ್ದೆಗಳು.

ಕರ್ನಾಟಕ ನಾಗರಿಕ ಸೇವೆಗಳು (ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ನೇರ ನೇಮಕಾತಿ ಮತ್ತು ಆಯ್ಕೆ) ಲೋಕೋಪಯೋಗಿ ಇಲಾಖೆಯಲ್ಲಿನ ಸಹಾಯಕ ಇಂಜಿನಿಯರ್ (ಗ್ರೇಡ್1) (ಸಿವಿಲ್) 600+ 60 = 660 ಹುದ್ದೆಗಳು.

ಲೋಕೋಪಯೋಗಿ ಇಲಾಖೆಯಲ್ಲಿನ ಕಿರಿಯ ಇಂಜಿನಿಯರ್ (ಸಿವಿಲ್) 325+5= 330 ಹುದ್ದೆಗಳಿವೆ.

ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆಯುಷ್ ಇಲಾಖೆಯ ಹುದ್ದೆಗಳಿಗೆ ಆಗಸ್ಟ್ 12 ರಿಂದ ಹಾಗೂ ಲೋಕೋಪಯೋಗಿ ಇಲಾಖೆಯ ಹುದ್ದೆಗಳಿಗೆ ಆಗಸ್ಟ್ 17 ರಿಂದ ಆನ್​ಲೈನ್ ಅರ್ಜಿ ಸಲ್ಲಿಸಬಹುದು. ಮಾಹಿತಿಗೆ https://bit.ly/3k38gh5 ಅಥವಾ http://www.kpsc.kar.nic.in/ ಸಂಪಕಿರ್ಸಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net