More

    ರಾಷ್ಟ್ರೀಯ ಶಿಕ್ಷಣ ನೀತಿಯ ತಿರಳು ಎಲ್​ಆರ್​ಐ : ಪ್ರಧಾನಿ ನರೇಂದ್ರ ಮೋದಿ

    ನವದೆಹಲಿ: ಇಪ್ಪತ್ತೊಂದನೇ ಶತಮಾನ ತಿಳಿವಳಿಕೆ ಅಥವಾ ಅರಿವಿನ ಯುಗವಾಗಿದ್ದು, ಕಲಿಕೆ, ಸಂಶೋಧನೆ ಮತ್ತು ನವೋನ್ವೇಷಣೆ(Learning, Research, Innovation) ಯ ಕಡೆಗೆ ಗಮನಹರಿಸುವುದಕ್ಕೆ ಸಕಾಲ. ಇದುವೇ ನಮ್ಮ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಕೇಂದ್ರ ಬಿಂದುವೂ ಆಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

    ಅವರು ಇಂದು ಸ್ಮಾರ್ಟ್​ ಇಂಡಿಯಾ ಹ್ಯಾಕಥಾನ್ 2020ರ ಗ್ರ್ಯಾಂಡ್ ಫಿನಾಲೆ ಕಾರ್ಯಕ್ರಮವನ್ನು ಉದ್ದೇಶಿಸಿ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದರು. ಇದಕ್ಕೂ ಮುನ್ನ ಅವರು ವಿದ್ಯಾರ್ಥಿಗಳ ಜತೆಗೆ ಸಂವಾದವನ್ನೂ ಮಾಡಿದ್ದರು.

    ಹೊಸ ಶಿಕ್ಷಣ ನೀತಿಯು ನಿಮ್ಮ ಶಾಲೆ, ಕಾಲೇಜು ಮತ್ತು ವಿಶ್ವವಿದ್ಯಾಲಯದ ಅನುಭವವನ್ನು ವಿಸ್ತಾರಗೊಳ್ಳುವಂತೆ ಮಾಡಲು ಬಯಸುತ್ತದೆ. ನಿಮ್ಮ ಸಹಜವಾದ ಅಭಿರುಚಿಯನ್ನು ಉತ್ತೇಜಿಸಿ ನಿಮಗ ಸೂಕ್ತ ಮಾರ್ಗದರ್ಶನ ನೀಡಲು ಬಯಸುತ್ತದೆ. ಈ ಹ್ಯಾಕಥಾನ್ ನೀವು ಪ್ರಯತ್ನಿಸಿದ ಮೊದಲ ಸಮಸ್ಯೆಯೂ ಅಲ್ಲ, ಕೊನೆಯದ್ದೂ ಅಲ್ಲ. ಯುವಜನರಾದ ನಿಮ್ಮಿಂದ ನಾನು ಬಯಸುವುದು ಮೂರು ಅಂಶಗಳನ್ನು- ಕಲಿಯುವುದು, ಪ್ರಶ್ನಿಸುವುದು ಮತ್ತು ಸಮಸ್ಯೆ ಬಗೆಹರಿಸುವುದು ಈ ಮೂರು ಅಂಶಗಳನ್ನು ನೀವು ರೂಢಿಸಿಕೊಳ್ಳಬೇಕು. ನಮ್ಮ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯೂ ಇದೇ ಅಂಶವನ್ನು ಪ್ರತಿಫಲಿಸುತ್ತಿದೆ

    ಇದನ್ನೂ ಓದಿ: ತ್ರಿಪುರಾದಲ್ಲಿ ಮರುಸಂಘಟನೆಗೆ ಬಂಡುಕೋರರ ಪ್ರಯತ್ನ: ಮಾಣಿಕ್ ಸರ್ಕಾರ್ ಹೊಸ ರಾಜಕೀಯ ವರಸೆ

    ನಿಮ್ಮ ಶಾಲಾ ಬ್ಯಾಗಿನ ಭಾರ ಅದು ಶಾಲೆಯಿಂದಾಚೆಗೆ ಇರುವುದಿಲ್ಲ. ಬದುಕಿಗೆ ಅಗತ್ಯವಾದ ಕಲಿಕೆಯನ್ನು ಉತ್ತೇಜಿಸುವ ಪ್ರಯತ್ನವನ್ನು ಹೊಸ ನೀತಿ ಮಾಡುತ್ತದೆ. ಸರಳವಾಗಿ ನೆನಪಿಡುವುದರಿಂದ ಹಿಡಿದು ನಿರ್ಣಾಯಕ ಚಿಂತನೆಗಳನ್ನು ಉದ್ದೀಪಿಸಲಾಗುತ್ತದೆ. ಒಂದು ವಿಷಯ ನಿಮ್ಮನ್ನು ವ್ಯಾಖ್ಯಾನಿಸಲಾಗದು ಅದೇ ರೀತಿ ಒಂದೇ ಗಾತ್ರ ಎಲ್ಲರಿಗೂ ಸರಿಹೊಂದುವುದೂ ಇಲ್ಲ. ಹೀಗಾಗಿ ಅಂತರ್​ಸಂಬಂಧದ ವಿಷಯಗಳ ಅಧ್ಯಯನ ಹೊಸ ನೀತಿಯ ವಿಶೇಷ ಆಸಕ್ತಿದಾಯ ಅಂಶವಾಗಿದೆ. ಈ ಪರಿಕಲ್ಪನೆಯೇ ಹೊಸ ಶಿಕ್ಷಣ ನೀತಿಗೆ ಜನಪ್ರಿಯತೆಯನ್ನು ಒದಗಿಸಲಿದೆ.

    ಇದನ್ನೂ ಓದಿ: ಶಿಶುಗಳಿಗೇಕೆ ಸ್ತನ್ಯಪಾನಮಾಡಿಸಬೇಕು- ಅದರ ಮಹತ್ವ ಏನು?

    ಸಮಾಜ ಅಥವಾ ಕುಟುಂಬದವರು ಬಯಸಿದ್ದನ್ನು ಕಲಿಯುವುದರ ಬದಲು ವಿದ್ಯಾರ್ಥಿಗಳು ಅವರಿಗೆ ಏನು ಬೇಕೋ ಅದನ್ನು ಕಲಿಯುವುದಕ್ಕೆ ಮತ್ತು ಆ ವಿಷಯಗಳ ಕಡೆಗೆ ಗಮನಹರಿಸುವುದಕ್ಕೆ ಹೊಸ ನೀತಿ ನೆರವಾಗಲಿದೆ. ಇಂಟರ್ ಡಿಸಿಪ್ಲಿನರಿ ಸ್ಟಡೀಸ್ ನಿಮಗೆ ಇಡೀ ಕಲಿಕೆಯ ಹಿಡಿತವನ್ನು ನಿಮಗೆ ಕೊಡಲಿದೆ. ರಾಷ್ಟ್ರೀಯ ಶಿಕ್ಷಣ ನೀತಿಯು ಎಲ್ಲರಿಗೂ ಶಿಕ್ಷಣ ಎಂಬ ಕನಸನ್ನು ನನಸಾಗಿಸಲಿದೆ. ಇದು ಪ್ರಾಥಮಿಕ ಶಿಕ್ಷಣದಿಂದ ಹಿಡಿದು ಉನ್ನತ ಶಿಕ್ಷಣದ ತನಕವೂ ಅನ್ವಯ. ಉನ್ನತ ಶಿಕ್ಷಣದಲ್ಲಿ ಒಟ್ಟು ನೋಂದಣಿ ಪ್ರಮಾಣವನ್ನು ಶೇಕಡ 50ಕ್ಕೆ ಏರಿಸುವ ಕೆಲಸ 2035ರ ವೇಳೆಗೆ ಆಗಬೇಕು.

    LIVE: ಸ್ಮಾರ್ಟ್​ ಇಂಡಿಯಾ ಹ್ಯಾಕಥಾನ್ 2020ರಲ್ಲಿ ಶಿಕ್ಷಣ ನೀತಿ ಬಗ್ಗೆ ಪ್ರಧಾನಿ ಮೋದಿ ಮಾತು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts