More

    ಶಿಶುಗಳಿಗೇಕೆ ಸ್ತನ್ಯಪಾನಮಾಡಿಸಬೇಕು- ಅದರ ಮಹತ್ವ ಏನು?

    ಸಮರ್ಥ ಸಾಗರ (ಸ್ನಾತಕೋತ್ತರ ವಿದ್ಯಾರ್ಥಿ)

    “ಆರೋಗ್ಯಕರ ಜೀವನಕ್ಕಾಗಿ ಸ್ತನ್ಯಪಾನವನ್ನು ಬೆಂಬಲಿಸಿ” ಇದು “World Alliance for Breastfeeding Action (WABA)” ಇದರ 2020ನೇ ಸಾಲಿನ ವಿಷಯ. ಪ್ರತಿ ವರ್ಷವು 1990ರ “ಇನ್ನೋಸೆಂಟಿ ಘೋಷಣೆಯನ್ನು” (Innocenti Declaration) ಜ್ಞಾಪಿಸುತ್ತ ಆಗಸ್ಟ್ ತಿಂಗಳ ಮೊದಲನೆ ವಾರ ವಿಶ್ವ ಸ್ತನ್ಯಪಾನ ಸಪ್ತಾಹವನ್ನಾಗಿ ಆಚರಿಸಲಾಗುತ್ತದೆ. ಸ್ತನ್ಯಪಾನವನ್ನು ಆರೈಕೆ ಮಾಡುವುದು ಎಂದೂ ಕರೆಯಾಲಾಗುತ್ತದೆ. ಸ್ತನ್ಯಪಾನ/ಆರೈಕೆಯೆಂದರೆ ಶಿಶುಗಳಿಗೆ ಮೊಲೆಹಾಲನ್ನು ಉಣಿಸುವುದೆಂದರ್ಥ. ಇದು ಸಸ್ತನಿಗಳ ಮುಖ್ಯಗುಣಲಕ್ಷಣಗಳಲ್ಲೊಂದಾಗಿದೆ. ತಜ್ಞರು ಶಿಶುವಿನ ಜನನದ ಮೊದಲನೇ 6 ತಿಂಗಳು ಸ್ತನ್ಯಪಾನ ಮಾಡುವುದು ಒಳ್ಳೆಯದು ಎಂದು ಅಭಿಪ್ರಾಯ ಪಡುತ್ತಾರೆ. ಸ್ತನ್ಯಪಾನ ಮಾಡುವುದರಿಂದ ಶಿಶುಗಳ ಸಾವಿನ ಸಂಖ್ಯೆ ಕಡಿಮೆಯಾಗುತ್ತದೆ. ಸ್ತನ್ಯಪಾನವು ಶಿಶುವಿನ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಆದರೂ ಸಹ ಮಹಿಳೆಯರು ಆರೋಗ್ಯ ತಜ್ಞರು ಹಾಗು ಸರ್ಕಾರ ಶಿಫಾರಸ್ಸು ಮಾಡಿದ ಸ್ತನ್ಯಪಾನ ಮಾಡಬೇಕಾದ ನಿರ್ಧಿಷ್ಟ ಸಮಯದವರೆಗೆ ಆರೈಕೆ ಮಾಡಲು ಮನಸ್ಸು ಮಾಡಬೇಕಿದೆ.

    ಸ್ತನ್ಯಪಾನ ಏಕೆ ಮಾಡಬೇಕು: ಸ್ತನ್ಯಪಾನ ಮಾಡುವುದರಿಂದ ಶಿಶುವಿನ ಆರೋಗ್ಯ ವೃದ್ಧಿಸುತ್ತದೆ. ಕೊಲೊಸ್ಟ್ರಮ್ ಎಂಬುದು ಶಿಶುವು ಜನಿಸಿದ ತಕ್ಷಣ ಸ್ತನಗಳಿಂದ ಉತ್ಪಾದನೆಯಾಗುವ ದಪ್ಪನೆಯ, ಅರಿಶಿಣ ಬಣ್ಣದ, ಕಡಿಮೆ ಪ್ರಮಾಣದ ಹಾಲು. ಕೊಲೊಸ್ಟ್ರಮ್ ಹಾಲಿನ ಪ್ರಥಮ ರೂಪ. ಇದು ಶಿಶುವಿನ ಬೆಳವಣಿಗೆಗೆ ಅಗತ್ಯವಾಗಿ ಬೇಕಾದ ಪೌಷ್ಟಿಕಾಂಶವನ್ನು, ಪ್ರತಿರಕ್ಷಣ ಕೋಶಗಳನ್ನು, ವಿಟಮಿನ್ಸ್ (ವೈಟಮಿನ್ಸ್), ಮಿನರಲ್ಸ್, ಬೆಳವಣಿಗೆಯ ಅಂಶಗಳು, ಮ್ಯಾಕ್ರೋ ಹಾಗೂ ಮೈಕ್ರೋನ್ಯೂಟ್ರಿಯೆಂಟ್ಸ್‍ನ್ನು ಒದಗಿಸುತ್ತದೆ. ಆರೈಕೆ ಮಾಡುವುದರಿಂದ ಶಿಶುವನ್ನು ಹಲವಾರು ತರಹದ ಅಲರ್ಜಿಗಳಿಂದ, ಕಾಯಿಲೆಗಳಿಂದ ಹಾಗೂ ಬೊಜ್ಜುಮೈ ಬರುವುದರಿಂದ ಕಾಪಡಬಹುದು. ಹಲವಾರು ಸೋಂಕಿನಿಂದ ಪಾರುಮಾಡಬಹುದು. ಸ್ತನ್ಯಪಾನವು ಸುಲಭವಾಗಿ ಜೀರ್ಣವಾಗುವುದರಿಂದ ಶಿಶುವಿಗೆ ಮಲಬದ್ಧತೆ, ಅತಿಸಾರ ಅಥವಾ ಹೊಟ್ಟೆ ಉಬ್ಬರ ಉಂಟಾಗುವುದಿಲ್ಲ. ಶಿಶುವಿನ ತೂಕವನ್ನು ಸಹ ಹೆಚ್ಚಿಸುತ್ತದೆ ಹಾಗೂ ಐಕ್ಯೂ ಅಂಕವನ್ನು ವರ್ಧಿಸುತ್ತದೆ. ತಾಯಿ ಮಗುವಿನ ದೈಹಿಕ ನಿಕಟತೆ, ಚರ್ಮ ಹಾಗು ತ್ವಚೆಯ ಸ್ಪರ್ಶದಿಂದ ಮತ್ತು ಕಣ್ಣಲ್ಲಿ ಕಣ್ಣಿಟ್ಟು ನೋಡುವುದರಿಂದ ಮಗುವಿಗೆ ತಾಯಿಯೊಡನೆ ಉತ್ತಮ ಸಂಬಂಧ ಹಾಗೂ ಸುರಕ್ಷತಾ ಭಾವನೆಯನ್ನು ಬೆಳೆಸುತ್ತದೆ.

    ಸ್ತನ್ಯಪಾನ ಮಾಡುವುದರಿಂದ ಹಲವು ಕ್ಯಾಲೋರಿಗಳು ಬರ್ನ್ ಆಗುತ್ತದೆ ಹಾಗಾಗಿ ತಾಯಿಯು ತನ್ನ ಗರ್ಭಾವಸ್ಥೆಯಲ್ಲಿ ಪಡೆದ ಹೆಚ್ಚಿನ ತೂಕವನ್ನು ಕಡಿಮೆಮಾಡಿಕೊಳ್ಳಬಹುದು. ಆರೈಕೆ ಮಾಡುವುದರಿಂದ ಅಕ್ಸಿಟೋಸಿನ್ (Oxytocin) ಎಂಬ ಹಾರ್ಮೋನ್ ಬಿಡುಗಡೆಯಾಗುತ್ತದೆ, ಇದು ಗರ್ಭಾಶಯವನ್ನು ಗರ್ಭಧಾರಣೆಯ ಮೊದಲಿನ ಸ್ಥಿತಿಗೆತರಲು ಹಾಗೂ ಗರ್ಭಾಶಯದಿಂದಾಗುವ ರಕ್ತಸ್ರಾವವನ್ನು ಕಡಿಮೆಯಾಗಿಸಲು ನೆರೆವಾಗುತ್ತದೆ. ಸ್ತನ್ಯಪಾನ ಮಾಡುವುದರಿಂದ ಸ್ತನ ಹಾಗೂ ಅಂಡಾಶಯದ ಕ್ಯಾನ್ಸರ್‍ನ ಅಪಾಯ ಕಡಿಮೆಯಾಗುತ್ತದೆ. ಇದೆಲ್ಲದರ ಜೊತೆಗೆ ಸ್ತನ್ಯಪಾನದ ಕಾರಣದಿಂದಾಗಿ ಯಾವುದೆರೀತಿಯ ಅಳತೆಯ ಸೂತ್ರ, ಸ್ಟೆರೆಲೈಜೆಡ್ ನಿಪ್ಪಲ್ಸ್, ವಾರ್ಮ್ ಬೊಟಲ್ಸ್‍ಗಳನ್ನು ಕರೀದಿಸುವ ಅವಶ್ಯಕತೆ ಇರುವುದಿಲ್ಲ, ಇದರಿಂದ ಸಮಯ ಹಾಗು ಖರ್ಚು ಸಹ ಕಡಿಮೆಯಾಗುತ್ತದೆ. ಆರೈಕೆ ಮಾಡುವುದರಿಂದ ವಿಶ್ರಾಂತಿ ಸಿಗುತ್ತದೆ ಹಾಗೆಯೇ ಮಗುವಿನೊಂದಿಗೆ ಉತ್ತಮ ಸಂಬಂದ ಬೆಸೆಯುತ್ತದೆ.

    ಸ್ತನ್ಯಪಾನ ಮಾಡುವ ಭಂಗಿಗಳು:
    ಸ್ತನ್ಯಪಾನ ಮಾಡಲು ಹಲವಾರು ಭಂಗಿಗಳಿರುತ್ತದೆ. ಯಾವ ಭಂಗಿಯಲ್ಲಿ ತಾಯಿಗೆ ಹಾಗೂ ಶಿಶುವಿಗೆ ಹೆಚ್ಚಿನ ಆರಾಮದಾಯಕ ಹಾಗೂ ಆಯಾಸವೆನಿಸದೊ ಮತ್ತು ಯಾವ ಭಂಗಿಯಲ್ಲಿ ಕೂರುವುದರಿಂದ ಯಾವುದೇರೀತಿಯ ದಣಿವಾಗುವುದಿಲ್ಲವೊ ಅದೆ ಸ್ತನ್ಯಪಾನ ಮಾಡಲು ಉತ್ತಮವಾದ ಭಂಗಿಯಾಗಿರುತ್ತದೆ. ಸ್ತನ್ಯಪಾನ ಮಾಡಲು ಹಲವಾರು ಭಂಗಿಗಳಿವೆ. ಅವು ಯಾವುದೆಂದರೆ:

    ಶಿಶುಗಳಿಗೇಕೆ ಸ್ತನ್ಯಪಾನಮಾಡಿಸಬೇಕು- ಅದರ ಮಹತ್ವ ಏನು?
    ತೊಟ್ಟಿಲಿನ ಭಂಗಿ
    ಶಿಶುಗಳಿಗೇಕೆ ಸ್ತನ್ಯಪಾನಮಾಡಿಸಬೇಕು- ಅದರ ಮಹತ್ವ ಏನು?
    ಫುಟ್ಬಾಲ್ ಭಂಗಿ
    ಶಿಶುಗಳಿಗೇಕೆ ಸ್ತನ್ಯಪಾನಮಾಡಿಸಬೇಕು- ಅದರ ಮಹತ್ವ ಏನು?
    ಅಡ್ಡ-ಶಯನ ಭಂಗಿ
    ಶಿಶುಗಳಿಗೇಕೆ ಸ್ತನ್ಯಪಾನಮಾಡಿಸಬೇಕು- ಅದರ ಮಹತ್ವ ಏನು?
    ತಲೆಕೆಳಗಾದ ಅಡ್ಡ-ಶಯನ ಭಂಗಿ

    ಸ್ತನ್ಯಪಾನದ ಮೂರು “ಅ”ಗಳು:
    · ಅ- ಅರಿವುಮೂಡಿಸುವುದು. ಶಿಶುವನ್ನು ಗಮನಿಸುತ್ತ, ಶಿಶುವಿಗೆ ಹಸಿವಾಗುತ್ತಿದ್ದಂತೆಯೆ ಹಾಲುಣಿಸುವುದು. ಮೊದಲನೆ ಕೆಲವು ವಾರಗಳು ದಿನಕ್ಕೆ 8-12ಬಾರಿ ಹಾಲುಣಿಸಬೇಕಾಗಬಹುದು. ಹಸಿವಾಗುತ್ತಿದ್ದಂತೆಯೆ ಶಿಶುವು ತನ್ನ ಕೈಯನ್ನು ತನ್ನ ಬಾಯಿಯೆಡೆಗೆ ಸರಿಸತೊಡಗುತ್ತದೆ, ಹೀರುವ ಶಬ್ಧವನ್ನು (sucking noise) ಅಥವಾ ಸ್ತನದೆಡೆಗೆ ಮುಖಮಾಡುತ್ತದೆ. ಶಿಶುವು ಅಳುವವರೆಗೂ ಕಾಯದೆ ಸ್ತನಪಾನ್ಯ ಮಾಡಬಹುದು ಏಕೆಂದರೆ ಇವೆಲ್ಲವು ಶಿಶುವಿಗೆ ಅಥೀವ ಹಸಿವಾಗಿದೆ ಎಂದು ತೋರುವ ಸಂಕೇತಗಳು.
    · ಅ- ಅತೃಪ್ತಿ. ಮಗುವಿಗೆ ತೃಪ್ತಿಯಾಗುವಷ್ಟು ಮೊಲೆಯುಣ್ಣಲು ಬಿಡಿ. ಶಿಶುವನ್ನು ಅವಸರವಾಗಿ ಮೊಲೆಯುಣಿಸಬೇಡಿ. ಶಿಶುವು ಕೇವಲ 10-20 ನಿಮಿಷಗಳಕಾಲ ಸ್ತನ್ಯಪಾನ ಮಾಡುವವು.
    · ಆ- ಆರಾಮದಾಯಕ. ಇದು ಅತಿ ಮುಖ್ಯ. ಸ್ತನ್ಯಪಾನ ಮಾಡುವಾಗ ಆರಾಮವೆನಿಸುವ ಸ್ಥಿತಿಯಲ್ಲಿ ಕುಳಿತು ಸ್ತನ್ಯಪಾನ ಮಾಡಿ. ಆಗ ಹಾಲು ನಿರಾಯಾಸವಾಗಿ (let-down) ಹಾಗು ಸುಲಭವಾಗಿ ಹರಿಯಲಾರಂಭಿಸುತ್ತದೆ. ಅವಶ್ಯಕತೆಯಿದ್ದಲ್ಲಿ ಕೈಗಳಿಗೆ, ತಲೆಯ ಭಾಗಕ್ಕೆ, ಕುತ್ತಿಗೆಗೆ ಅಥವಾ ಕಾಲಿಗೆ ಬೇಕಾದಲ್ಲಿ ದಿಂಬಿನ ಸಹಾಯ ಪಡೆಯಿರಿ.

    ವೈದ್ಯಕೀಯ ಪರಿಗಣನೆಗಳು:
    ಹಲವು ಸಂದರ್ಭಗಳಲ್ಲಿ ಸ್ತನ್ಯಪಾನ ಮಾಡುವುದು ಶಿಶುವಿಗೆ ತೊಂದರೆಯನ್ನುಂಟುಮಾಡಬಹದು, ಅವು ಯಾವುದೆಂದರೆ:
    ಎಚ್.ಐ.ವಿ. ಪೊಸಿಟಿವ್ ಇರುವ ತಾಯಿ ಸ್ತನ್ಯಪಾನ ಮಾಡಬಾರದು, ಮಾಡಿದ್ದಲ್ಲಿ ಎಚ್.ಐ.ವಿ ವೈರಾಣು ಶಿಶುವಿಗು ಸಹ ಹಾಲಿನ ಮುಖಾಂತರ ತಲಪುತ್ತದೆ.
    ಟಿಬಿ ರೋಗವಿದ್ದರೆ ಸ್ತನ್ಯಪಾನ ಮಾಡಬೇಡಿ.
    ಕ್ಯಾನ್ಸ್‍ರ್ ಅಥವಾ ಕೀಮೋಥೆರಪಿ (Chemotheraphy) ಪಡೆಯುತ್ತಿರುವವರು ಹಾಲುಣಿಸಬೇಡಿ.
    ಮಾದಕ ವಸ್ತು ಸೇವನೆ ಮಾಡುವವರು ಆರೈಕೆ ಮಾಡಬೇಡಿ.
    ಶಿಶುವಿಗೆ ಗ್ಯಾಲಕ್ಟೋಸೀಮಿಯಾ (Galactosemia) ಇದ್ದಲ್ಲಿ ಹಾಲುಣಿಸಬೇಡಿ.
    ತಾಯಿಯು ಯಾವುದೇ ಚಿಕಿತ್ಸೆ ಪಡೆಯುತ್ತಿದ್ದಲ್ಲಿ (ಮೈಗ್ರೇನ್, ಅರ್‍ಥ್ರಿಟಿಸ್ ಅಥವಾ ಪಾರ್ಕಿನ್ಸ್‍ನ್) ಸ್ತನ್ಯಪಾನ ಮಾಡಬೇಡಿ.

    ಸ್ತನ್ಯಪಾನ ಮಾಡುವಾಗ ಎದುರಿಸಬೇಕಾದ ಹಲವು ಸವಾಲುಗಳು:
    · ನೋಯುವ ಮೊಲೆತೊಟ್ಟುಗಳು: ಮೊದಲನೆ ಕೆಲ ವಾರಗಳು ಮೊಲೆತೊಟ್ಟುಗಳು ನೋಯುವ ಸಾಧ್ಯತೆಯಿರುತ್ತದೆ.
    · ಸಾಕಷ್ಟು ಪ್ರಮಾಣದ ಹಾಲು ಉತ್ಪಾದನೆ: ಸ್ತನದ ಗಾತ್ರ ಸಣ್ಣ ಇದ್ದ ಮಾತ್ರಕ್ಕೆ ಕಡಿಮೆ ಹಾಲು ತಾಯರಾಗುತ್ತದೆಯೆಂದಲ್ಲ. ಶಿಶುವಿಗೆ ಬೇಕಾದ ಪ್ರಮಾಣದಲ್ಲಿ ಹಾಲು ಉತ್ಪತ್ತಿಯಾಗುತ್ತದೆ.
    · ನಿರ್ಬಂಧಿಸಿದ ನಾಳಗಳು: ಸೌಮ್ಯವಾಗಿ ಮಸಾಜ್ ಮತ್ತು ನಿಧಾನವಾಗಿ ಸ್ತನವನ್ನು ಒತ್ತುವುದರಿಂದ ನಿರ್ಬಂಧಿಸಿದ ನಾಳಗಳನ್ನು ಸಾಧಾರಣವಾಗಿ ತೆರೆಯಲು ಸಾಧ್ಯವಾಗುತ್ತದೆ ಹಾಗು ಹೆಚ್ಚಿನ ಸ್ತನ್ಯಪಾನ ಮಾಡುವುದರಿಂದ ನಾಳಗಳ ನಿರ್ಬಂದನೆಯನ್ನು ತಡೆಗಟ್ಟಬಹದು.
    · ಒತ್ತಡ: ಅತಿಯಾದ ಒತ್ತಡಕ್ಕೊಳಗಾಗುವುದರಿಂದ ಹಾಲಿನ ನಿರಾಳವಾಗಿ ಹರಿಯುವಿಕೆ (Let-down reflex) ಕಡಿಮೆಯಾಗುತ್ತದೆ. ಇದರಿಂದಾಗಿ ಸ್ತನಗಳ ನೈಸರ್ಗಿಕ ಹಾಲಿನ ನಾಳಗಳಿಗೆ ಕಡಿಮೆ ಪ್ರಮಾಣದ ಹಾಲು ಹರಿಯುತ್ತದೆ.

    ತ್ರಿಪುರಾದಲ್ಲಿ ಮರುಸಂಘಟನೆಗೆ ಬಂಡುಕೋರರ ಪ್ರಯತ್ನ: ಮಾಣಿಕ್ ಸರ್ಕಾರ್ ಹೊಸ ರಾಜಕೀಯ ವರಸೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts