More

    ತ್ರಿಪುರಾದಲ್ಲಿ ಮರುಸಂಘಟನೆಗೆ ಬಂಡುಕೋರರ ಪ್ರಯತ್ನ: ಮಾಣಿಕ್ ಸರ್ಕಾರ್ ಹೊಸ ರಾಜಕೀಯ ವರಸೆ

    ಅಗರ್ತಲಾ: ತ್ರಿಪುರಾದಾ ಮಾಜಿ ಮುಖ್ಯಮಂತ್ರಿ, ಸಿಪಿಐ(ಎಂ) ನಾಯಕ ಮಾಣಿಕ್ ಸರ್ಕಾರ್ ರಾಜಕೀಯದ ಹೊಸ ವರಸೆಯನ್ನು ಶುರುಮಾಡಿಕೊಂಡಿದ್ದಾರೆ. ದಶಕಗಳ ಕಾಲ ಆಳ್ವಿಕೆ ನಡೆಸಿದ್ದ ಅವರು ಈಗ ತ್ರಿಪುರಾದಲ್ಲಿ ಬಂಡುಕೋರರು ಮರುಸಂಘಟಿತರಾಗುತ್ತಿದ್ದಾರೆ ಎನ್ನುತ್ತ ರಾಜಕೀಯದ ಮಾತುಗಳನ್ನಾಡಿದ್ದಾರೆ!

    ತ್ರಿಪುರಾ ಟ್ರೈಬಲ್​ ಏರಿಯಾಸ್ ಅಟೋನಾಮಸ್​ ಡಿಸ್ಟ್ರಿಕ್ಟ್​ ಕೌನ್ಸಿಲ್​(ಟಿಟಿಎಡಿಸಿ) ಚುನಾವಣೆ ಸಮೀಪದಲ್ಲಿದೆ. ಇದನ್ನು ಗಮನದಲ್ಲಿರಿಸಿಕೊಂಡು ಬಂಡುಕೋರರ ಮರುಸಂಘಟನೆಗೆ ಪ್ರಯತ್ನ ಶುರುವಾಗಿದೆ. ರಾಜ್ಯದ ಹಲವು ಪ್ರದೇಶಗಳಲ್ಲಿ ಈ ಬೆಳವಣಿಗೆ ನಡೆದಿರುವುದು ಗಮನಕ್ಕೆ ಬಂದಿದೆ ಎಂದು ತ್ರಿಪುರಾದ ಮಾಜಿ ಮುಖ್ಯಮಂತ್ರಿ ಮಾಣಿಕ್ ಸರ್ಕಾರ್​ ತಿಳಿಸಿದ್ದಾರೆ.

    ಇದನ್ನೂ ಓದಿ: ಅವರಿನ್ನು ನನ್ನ ಜವಾಬ್ದಾರಿ … ಮೂರು ಮಕ್ಕಳನ್ನು ದತ್ತು ಪಡೆದ ಸೋನು

    ಅವರು ಸಿಪಿಐ(ಎಂ)ಪಕ್ಷದ ಕಚೇರಿಯಲ್ಲಿ ಸುದ್ದಿಗಾರರ ಜತೆ ಮಾತನಾಡುತ್ತ ಈ ವಿಷಯದ ಬಗ್ಗೆ ಗಮನಸೆಳೆದರು. ಖೋವಾಯಿ ಜಿಲ್ಲೆ, ಪಶ್ಚಿಮ ತ್ರಿಪುರಾದ ಲೆಫುಂಗಾ, ಉತ್ತರ ತ್ರಿಪುರಾದ ಪಣಿಸಾಗರ ಉಪವಲಯಗಳಲ್ಲಿ ಬಂಡುಕೋರರು ಮತ್ತೆ ಸಕ್ರಿಯರಾಗಿದ್ದಾರೆ. ಈ ಪ್ರದೇಶಗಳಲ್ಲಿ ಬಾಂಗ್ಲಾದೇಶದ ಗಡಿಭಾಗದಲ್ಲಿವೆ. ಅವರು ಮರುಸಂಘಟಿತರಾಗಿ ಪ್ರಾಬಲ್ಯ ಸಾಧಿಸಲು ಮುಂದಾಗಿದ್ದಾರೆ. ಈ ಪ್ರಯತ್ನವನ್ನು ಕೂಡಲೇ ವಿಫಲಗೊಳಿಸಬೇಕು. ಸರ್ಕಾರ ಈ ಬತಗ್ಗೆ ಕೂಡ ಗಮನಹರಿಸಬೇಕು ಎಂದು ಮಾಣಿಕ್ ಸರ್ಕಾರ್ ಆಗ್ರಹಿಸಿದ್ದಾರೆ.

    ಇದನ್ನೂ ಓದಿ: ಮೀನು ಮುಟ್ಟಿದ ಬಳಿಕ ಕೈ ನೋವೆಂದು ಆಸ್ಪತ್ರೆಗೆ ಹೋದ ವ್ಯಕ್ತಿ ವೈದ್ಯರ ಮಾತು ಕೇಳಿ ಕುಸಿದುಬಿದ್ದ!

    ನಮ್ಮ ಆಳ್ವಿಕೆಯ ಕಾಲದಲ್ಲಿ ಆಲ್ ತ್ರಿಪುರಾ ಟೈಗರ್ ಫೋರ್ಸ್​(ಎಟಿಟಿಎಫ್​) ಅನ್ನು ಸಿಂಪಲ್ಲಾಗಿ ನಿರ್ನಾಮ ಮಾಡಿದ್ದೆವು. ಅವರ ಬಳಿ ಇದ್ದ ಶಸ್ತ್ರಾಸ್ತ್ರಗಳನ್ನೆಲ್ಲ ಒಂದೋ ಬಾಂಗ್ಲಾದೇಶ ಸೆಕ್ಯುರಿಟಿ ಫೋರ್ಸ್​ಗಳು ಅಥವಾ ಇತರೆ ಬಂಡುಕೋರರ ಗುಂಪು ವಶಪಡಿಸಿಕೊಂಡಿದ್ದವು. ಅದೇ ರೀತಿ ದ ನ್ಯಾಷನಲ್ ಲಿಬರೇಷನ್ ಫ್ರಂಟ್​ ಆಫ್ ತ್ರಿಪುರಾ(ಎನ್​ಎಲ್​ಎಫ್​ಟಿ) ಕೂಡ 20 ವರ್ಷಗಳ ಎಡರಂಗ ಆಳ್ವಿಕೆಯಲ್ಲಿ ಅಸ್ತಿತ್ವ ಕಳೆದುಕೊಂಡಿತ್ತು ಎಂದು ಸರ್ಕಾರ್ ತಮ್ಮ ಬೆನ್ನುತಟ್ಟಿಕೊಂಡಿದ್ದಾರೆ.

    ಇದನ್ನೂ ಓದಿ: ವಿಮಾನಗಳೆರಡು ಮುಖಾಮುಖಿ ಡಿಕ್ಕಿಯಾಗಿ ಶಾಸಕ ಸೇರಿದಂತೆ ಏಳು ಮಂದಿ ದುರ್ಮರಣ

    ಟ್ರೈಬಲ್ ಕೌನ್ಸಿಲ್​ ಅನ್ನು ಮೇ 17ರಂದೇ ವಿಸರ್ಜಿಸಿದ್ದು, ಬಳಿಕ ಕೋವಿಡ್ ಕಾರಣಕ್ಕೆ ಕೌನ್ಸಿಲ್​ನ ಅವಧಿಯನ್ನು ಮತ್ತೆ ವಿಸ್ತರಿಸುವ ಅವಕಾಶವನ್ನೂ ರಾಜ್ಯಪಾಲರು ನೀಡಿಲ್ಲ. ಟಿಟಿಎಡಿಸಿಯ ಎಕ್ಸಿಕ್ಯೂಟಿವ್ ಕಮಿಟಿಯೂ ಅಸ್ತಿತ್ವ ಕಳೆದುಕೊಂಡಿದ್ದು, ಹೊಸ ಕಮಿಟಿ ರಚನೆಯಾಗಿಲ್ಲ. ರಾಜ್ಯಪಾಲ ರಮೇಶ್ ಬಯಾಸ್​ ಕೌನ್ಸಿಲ್​ಗೆ ಒಬ್ಬ ಆಡಳಿತಾಧಿಕಾರಿಯನ್ನು ನೇಮಿಸಿದ್ದಾರೆ ಎಂಬುದು ಸರ್ಕಾರ್ ಆರೋಪ. (ಏಜೆನ್ಸೀಸ್)

    ವಿಶಾಖಪಟ್ಟಣ ಹಡಗುಗಟ್ಟೆಯಲ್ಲಿ ಕುಸಿದ ಬೃಹತ್​ ಕ್ರೇನ್​, 11ಕ್ಕೂ ಹೆಚ್ಚು ಸಾವು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts