More

    3 ರಾಜ್ಯಗಳ ಚುನಾವಣಾ ಫಲಿತಾಂಶ: ನಾಗಾಲ್ಯಾಂಡ್​, ತ್ರಿಪುರಾದಲ್ಲಿ ಮ್ಯಾಜಿಕ್​ ನಂಬರ್​ ದಾಟಿದ ಬಿಜೆಪಿ

    ನವದೆಹಲಿ: ಈಶಾನ್ಯ ರಾಜ್ಯಗಳಾದ ತ್ರಿಪುರಾ ಮತ್ತು ನಾಗಾಲ್ಯಾಂಡ್​ನಲ್ಲಿ ಮ್ಯಾಜಿಕ್​ ನಂಬರ್​ ದಾಟಿರುವ ಬಿಜೆಪಿ ಎರಡು ರಾಜ್ಯಗಳಲ್ಲಿ ಅಧಿಕಾರದ ಗದ್ದುಗೆ ಹಿಡಿಯುವುದು ಬಹುತೇಕ ಖಚಿತವಾಗಿದೆ. ಉಳಿದಂತೆ ಮೇಘಾಲಯದಲ್ಲಿ ನಾಲ್ಕನೇ ಸ್ಥಾನಕ್ಕೆ ಕುಸಿದಿರುವ ಬಿಜೆಪಿ ನ್ಯಾಷನಲ್​ ಪೀಪಲ್ಸ್​ ಪಾರ್ಟಿ (ಎನ್​ಪಿಪಿ) ಜೊತೆಗೂಡಿ ಸರ್ಕಾರ ರಚಿಸುವ ಸಾಧ್ಯತೆ ಇದೆ.

    ಮಧ್ಯಾಹ್ನ 12 ಗಂಟೆಯ ವೇಳೆಗೆ ನಾಗಾಲ್ಯಾಂಡ್​ನಲ್ಲಿ ಬಿಜೆಪಿ 38 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದರೆ, ತ್ರಿಪುರಾದಲ್ಲಿ 33 ಸ್ಥಾನಗಳಲ್ಲಿ ಮುಂದಿದೆ. ಮೇಘಾಲಯದಲ್ಲಿ ಕೇವಲ 5 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಮೇಘಾಲಯಲ್ಲಿ ನ್ಯಾಷನಲ್​ ಪೀಪಲ್ಸ್​ ಪಾರ್ಟಿ 26 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಳ್ಳುವ ಮೂಲಕ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮುತ್ತಿದೆ.

    ಮೂರು ರಾಜ್ಯಗಳಲ್ಲಿ ಕಾಂಗ್ರೆಸ್​ ಸ್ಥಿತಿ ಹೀನಾಯವಾಗಿದೆ. ತ್ರಿಪುರಾ (15ರಲ್ಲಿ ಮುನ್ನಡೆ) ಹೊರತುಪಡಿಸಿದರೆ ಉಳಿದ ಎರಡು ರಾಜ್ಯಗಲ್ಲಿ ಕಾಂಗ್ರೆಸ್​ ಒಂದಂಕಿಗೆ ತೃಪ್ತಿಪಟ್ಟುಕೊಂಡಿದೆ. ಮೇಘಾಲಯದಲ್ಲಿ 5 ಮತ್ತು ನಾಗಾಲ್ಯಾಂಡ್​ನಲ್ಲಿ 2 ಸ್ಥಾನಗಳಲ್ಲಿ ಕಾಂಗ್ರೆಸ್​ ಮುಂದಿದೆ.

    ಇದನ್ನೂ ಓದಿ: ನಿತ್ಯಾನಂದನ ಕೈಲಾಸ ರಾಯಭಾರಿ ವಿಜಯಪ್ರಿಯಾ ಬಗ್ಗೆ ನಿಮಗೆಲ್ಲರಿಗೂ ಗೊತ್ತಿರದ ಆಸಕ್ತಿಕರ ಸಂಗತಿ ಇಲ್ಲಿದೆ….

    ಮೂರು ರಾಜ್ಯಕ್ಕೂ ಫೆಬ್ರವರಿಯಲ್ಲಿ ಚುನಾವಣೆ ನಡೆದಿತ್ತು. ಈ ಮೂರೂ ರಾಜ್ಯಗಳು ತಲಾ 60 ಕ್ಷೇತ್ರಗಳನ್ನು ಹೊಂದಿವೆ. ತ್ರಿಪುರಾ ಮತ್ತು ನಾಗಾಲ್ಯಾಂಡ್​ನಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಈಗಾಗಲೇ ಚುನಾವಣೋತ್ತರ ಸಮೀಕ್ಷೆಗಳು ಹೇಳಿವೆ. ಅದಕ್ಕೆ ಪೂರಕವಾಗಿಯೇ ಮತಎಣಿಕೆಯ ಅಂಕಿ-ಅಂಶಗಳು ಬಂದಿವೆ.

    ಚುನಾವಣೆ ಫಲಿತಾಂಶಕ್ಕೂ ಮುನ್ನವೇ ಅಸ್ಸಾಂ ಸಿಎಂ ಹಿಮಂತ ಬಿಸ್ವ ಶರ್ಮ ಮತ್ತು ಮೇಘಾಲಯ ಸಿಎಂ ಕನ್ರಾಡ್ ಸಂಗ್ಮಾ ಮಂಗಳವಾರ ತಡರಾತ್ರಿ ಗುವಾಹಟಿಯಲ್ಲಿ ಭೇಟಿ ಮಾಡಿರುವುದು ಕುತೂಹಲ ಕೆರಳಿಸಿದೆ. ಮೇಘಾಲಯದಲ್ಲಿ ಅಸ್ಪಷ್ಟ ಜನಾದೇಶ ಹೊರಬೀಳುವ ಸಾಧ್ಯತೆ ಹಿನ್ನೆಲೆಯಲ್ಲಿ ಬಿಜೆಪಿ ಜತೆ ಚುನಾವಣೋತ್ತರ ಮೈತ್ರಿ ಮಾಡಿಕೊಳ್ಳುವ ಕುರಿತು ಎನ್​ಪಿಪಿ ನಾಯಕ ಸಂಗ್ಮಾ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. (ಏಜೆನ್ಸೀಸ್​)

    3 ರಾಜ್ಯಗಳ ಚುನಾವಣಾ ಫಲಿತಾಂಶ: ನಾಗಾಲ್ಯಾಂಡ್​, ತ್ರಿಪುರಾದಲ್ಲಿ BJPಗೆ ಭರ್ಜರಿ ಮುನ್ನಡೆ, ಮೇಘಾಲಯದಲ್ಲಿ 2ನೇ ಸ್ಥಾನ

    73 ದಿನ ಪ್ರಯಾಣ; ಬೈಕ್​​ನಲ್ಲಿ ತೆರಳಿದ್ದ ಯಾತ್ರಿಕನೋರ್ವ ಮೆಕ್ಕಾ ತಲುಪಿದ ಕೂಡಲೇ ಮೃತ್ಯು

    VIDEO | ಸಾರ್ವಜನಿಕವಾಗಿಯೇ ಗರ್ಲ್‌ಫ್ರೆಂಡ್​ಗೆ ಲಿಪ್‌ ಕಿಸ್ ಕೊಟ್ಟ ಹೃತಿಕ್ ರೋಷನ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts