More

    3 ರಾಜ್ಯಗಳ ಚುನಾವಣಾ ಫಲಿತಾಂಶ: ನಾಗಾಲ್ಯಾಂಡ್​, ತ್ರಿಪುರಾದಲ್ಲಿ BJPಗೆ ಭರ್ಜರಿ ಮುನ್ನಡೆ, ಮೇಘಾಲಯದಲ್ಲಿ 2ನೇ ಸ್ಥಾನ

    ನವದೆಹಲಿ: ಫೆಬ್ರವರಿಯಲ್ಲಿ ಚುನಾವಣೆ ಎದುರಿಸಿದ ಈಶಾನ್ಯದ ತ್ರಿಪುರಾ, ನಾಗಾಲ್ಯಾಂಡ್ ಮತ್ತು ಮೇಘಾಲಯಗಳಲ್ಲಿ ಇಂದು ಬೆಳಗ್ಗೆ ಮತಎಣಿಕೆ ಆರಂಭವಾಗಿದ್ದು, ಸದ್ಯದ ಟ್ರೆಂಡ್​ ಪ್ರಕಾರ ನಾಗಾಲ್ಯಾಂಡ್​ ಮತ್ತು ತ್ರಿಪುರಾದಲ್ಲಿ ಬಿಜೆಪಿ ಭರ್ಜರಿ ಮುನ್ನಡೆಯನ್ನು ಕಾಯ್ದುಕೊಂಡಿದೆ. ಮೇಘಾಲಯದಲ್ಲಿ ನ್ಯಾಷನಲ್​ ಪೀಪಲ್ಸ್​ ಪಾರ್ಟಿ (ಎನ್​ಪಿಪಿ) ಮುನ್ನಡೆ ಸಾಧಿಸಿದ್ದು, ಬಿಜೆಪಿ ಎರಡನೇ ಸ್ಥಾನದಲ್ಲಿದೆ.

    ಬೆಳಗ್ಗೆ 10 ಗಂಟೆಯ ವೇಳೆಗೆ ನಾಗಾಲ್ಯಾಂಡ್​ನಲ್ಲಿ ಬಿಜೆಪಿ 45 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದರೆ, ತ್ರಿಪುರಾದಲ್ಲಿ 32 ಸ್ಥಾನಗಳಲ್ಲಿ ಮುಂದಿದೆ. ಮೇಘಾಲಯದಲ್ಲಿ 10 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಎಂದಿನಂತೆ ಬಾರಿಯು ಕಾಂಗ್ರೆಸ್​ಗೆ ಮೂರು ರಾಜ್ಯಗಳಲ್ಲಿ ಮುಖಭಂಗವಾಗಿದೆ.

    ಇದನ್ನೂ ಓದಿ: ಇತ್ತೀಚೆಗಷ್ಟೇ ಮದ್ವೆಯಾಗಿದ್ದ ಯುವ ವೈದ್ಯೆ ಫ್ರೆಂಡ್​ ಫ್ಲ್ಯಾಟ್​ನಲ್ಲಿ ಶವವಾಗಿ ಪತ್ತೆ

    ಈ ಮೂರೂ ರಾಜ್ಯಗಳು ತಲಾ 60 ಕ್ಷೇತ್ರಗಳನ್ನು ಹೊಂದಿವೆ. ತ್ರಿಪುರಾ ಮತ್ತು ನಾಗಾಲ್ಯಾಂಡ್​ನಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಈಗಾಗಲೇ ಚುನಾವಣೋತ್ತರ ಸಮೀಕ್ಷೆಗಳು ಹೇಳಿವೆ. ಇದೀಗ ಅದಕ್ಕೆ ಪೂರಕವಾಗಿಯೇ ಮತಎಣಿಕೆಗೆ ಆರಂಭಿಕ ಸೂಚನೆ ಇದೆ. ಫಲಿತಾಂಶ ಹೀಗೆ ಮುಂದುವರಿದರೆ ನಾಗಾಲ್ಯಾಂಡ್​ ಮತ್ತು ತ್ರಿಪುರಾದಲ್ಲಿ ಬಿಜೆಪಿ ಭರ್ಜರಿ ಬಹುಮತದೊಂದಿಗೆ ಅಧಿಕಾರದ ಗದ್ದುಗೆ ಏರಲಿದೆ. ಈಗಾಗಲೇ ಬಿಜೆಪಿ ಪಾಳಯದಲ್ಲಿ ಸಂಭ್ರಮ ಮನೆ ಮಾಡಿದೆ. ಮಧ್ಯಾಹ್ನದ ಹೊತ್ತಿಗೆ ಸ್ಪಷ್ಟ ಫಲಿತಾಂಶ ಹೊರಬೀಳಲಿದೆ.

    ಚುನಾವಣೆ ಫಲಿತಾಂಶಕ್ಕೂ ಮುನ್ನವೇ ಅಸ್ಸಾಂ ಸಿಎಂ ಹಿಮಂತ ಬಿಸ್ವ ಶರ್ಮ ಮತ್ತು ಮೇಘಾಲಯ ಸಿಎಂ ಕನ್ರಾಡ್ ಸಂಗ್ಮಾ ಮಂಗಳವಾರ ತಡರಾತ್ರಿ ಗುವಾಹಟಿಯಲ್ಲಿ ಭೇಟಿ ಮಾಡಿರುವುದು ಕುತೂಹಲ ಕೆರಳಿಸಿದೆ. ಮೇಘಾಲಯದಲ್ಲಿ ಅಸ್ಪಷ್ಟ ಜನಾದೇಶ ಹೊರಬೀಳುವ ಸಾಧ್ಯತೆ ಹಿನ್ನೆಲೆಯಲ್ಲಿ ಬಿಜೆಪಿ ಜತೆ ಚುನಾವಣೋತ್ತರ ಮೈತ್ರಿ ಮಾಡಿಕೊಳ್ಳುವ ಕುರಿತು ಎನ್​ಪಿಪಿ ನಾಯಕ ಸಂಗ್ಮಾ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.

    ಚುನಾವಣೆ ಹಿನ್ನೆಲೆಯಲ್ಲಿ ಜ್ಯೋತಿಷಿಗಳಿಗೆ ಭಾರಿ ಡಿಮಾಂಡ್: ಮಂಗಳಮುಖಿಯರಿಗೆ ಮೊರೆ!

    ರಾಜ್ಯದಲ್ಲಿ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ 126% ಸಾಧನೆ: ಸಚಿವ ಸುಧಾಕರ್

    ಕೈಲಾಸಕ್ಕೆ ವಿಶ್ವಸಂಸ್ಥೆ ಮಾನ್ಯತೆ ಸಿಕ್ಕಿತೆಂದು ಕತೆ ಕಟ್ಟಿದ ನಿತ್ಯಾನಂದ- ಅಸಲಿ ಕಥೆ ಏನು ಗೊತ್ತಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts