More

    ಕೈಲಾಸಕ್ಕೆ ವಿಶ್ವಸಂಸ್ಥೆ ಮಾನ್ಯತೆ ಸಿಕ್ಕಿತೆಂದು ಕತೆ ಕಟ್ಟಿದ ನಿತ್ಯಾನಂದ- ಅಸಲಿ ಕಥೆ ಏನು ಗೊತ್ತಾ?

    ನವದೆಹಲಿ: ಜಿನಿವಾ ನಗರದಲ್ಲಿ ನಡೆದಿದ್ದ ವಿಶ್ವಸಂಸ್ಥೆಯ ಅಂತಾರಾಷ್ಟ್ರೀಯ ಮಹಿಳಾ ಸಮ್ಮೇಳನವೊಂದರಲ್ಲಿ ನನ್ನ ಕೈಲಾಸ ದೇಶಕ್ಕೆ ಸಭೆಯಲ್ಲಿ ಭಾಗಿಯಾಗುವ ಅವಕಾಶ ಸಿಕ್ಕಿತ್ತು.  ಈ ಮೂಲಕವಾಗಿ ಕೈಲಾಸಕ್ಕೆ ವಿಶ್ವಸಂಸ್ಥೆಯ ಮಾನ್ಯತೆ ಸಿಕ್ಕಿದೆ. ನನ್ನ ಶಿಷ್ಯೆಯರು ಭಾಗಿಯಾಗಿದ್ದಾರೆಂದು ಸೋಶಿಯಲ್​​ ಮೀಡಿಯಾ ಮೂಲಕವಾಗಿ ಸ್ವಯಂಘೋಷಿತ ಧರ್ಮಗುರು ನಿತ್ಯಾನಂದ ಸ್ವಾಮಿ ಹೇಳಿಕೊಂಡಿದ್ದರು. ಆದರೆ ಈ ಸುದ್ದಿಯ ಹಿಂದಿನ ಅಸಲಿ ಕಥೆ ಬೇರೆ ಇದೆ ಎಂದು ತಿಳಿದು ಬಂದಿದೆ.

    ಇದನ್ನೂ ಓದಿ: ವಿಶ್ವಸಂಸ್ಥೆಯ ಸಮ್ಮೇಳನದಲ್ಲಿ ನಿತ್ಯಾನಂದನ ಕೈಲಾಸ ದೇಶದ ಪ್ರತಿನಿಧಿ!

    ಫೆಬ್ರವರಿ 23ರಂದು ನಡೆದಿದ್ದ ವಿಶ್ವಸಂಸ್ಥೆಯ ಅಂತಾರಾಷ್ಟ್ರೀಯ ಮಹಿಳಾ ಸಮ್ಮೇಳನವನ್ನು ವಿಶ್ವದ ಎಲ್ಲಾ ರಾಷ್ಟ್ರಗಳಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯಗಳನ್ನು ನಿಲ್ಲಿಸುವ ಸಲುವಾಗಿ ಈ ಸಮ್ಮೇಳನವನ್ನು ಕರೆಯಲಾಗಿತ್ತು. ಅಮೆರಿಕ, ಯುನೈಟೆಡ್ ಕಿಂಗ್ ಡಮ್, ಫ್ರಾನ್ಸ್, ಸ್ಲೊವೇನಿಯಾ ಮುಂತಾದ ರಾಷ್ಟ್ರಗಳಲ್ಲಿ ಕೈಲಾಸ ಶಾಖೆಗಳನ್ನು ಮುನ್ನಡೆಸುತ್ತಿರುವ ನಿತ್ಯಾನಂದ ಶಿಷ್ಯೆಯರು ಭಾಗವಹಿಸಿದ್ದರು. ಸಭೆಯಲ್ಲಿ ನಿತ್ಯಾನಂದ ಶಿಷ್ಯೆಯರು ಎಲ್ಲರೂ ಮಾತನಾಡಿ, ನಾನಾ ದೇಶಗಳಲ್ಲಿ ಮಹಿಳೆಯರು ಅನುಭವಿಸುತ್ತಿರುವ ಹಿಂಸೆಗಳು, ಪುರುಷ ಪ್ರಧಾನ ಸಮಾಜಗಳಲ್ಲಿ ಒಳಗಾಗುತ್ತಿರುವ ಅಪಮಾನಗಳ ಬಗ್ಗೆ ಮಾತನಾಡಿದರು ಎನ್ನಲಾಗಿತ್ತು.

    ಇದನ್ನೂ ಓದಿ: ಬೇರೊಬ್ಬಳೊಂದಿಗೆ ಓಡಿ ಹೋದ ಪತಿ; ಗಂಡನ ಜತೆಗೆ ಹೋದವಳ ಪತಿಯನ್ನೇ ವಿವಾಹವಾದ ಮಹಿಳೆ

    ಇದು ವಾಸ್ತವವಾಗಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಅಥವಾ ಇನ್ಯಾವುದೇ ಸದಸ್ಯ ದೇಶಗಳ ಸಭೆಯಲ್ಲ. ಬದಲಾಗಿ ವಿಶ್ವಸಂಸ್ಥೆ ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಹಕ್ಕುಗಳ ಕುರಿತಾದ ಸಮಿತಿಯು ಇತ್ತೀಚೆಗೆ ಜಿನೇವಾದಲ್ಲಿ ಹಮ್ಮಿಕೊಂಡಿದ್ದ ಸುಸ್ಥಿರ ಅಭಿವೃದ್ಧಿ ಕುರಿತಾದ ಸಾಮಾನ್ಯ ಸಮಾಲೋಚನಾ ಸಭೆಯಾಗಿತ್ತು. ಇದರಲ್ಲಿ ಸಾರ್ವಜನಿಕರಿಗೂ ಭಾಗಿಯಾಗಲು ಮುಕ್ತ ಅವಕಾಶ ನೀಡಲಾಗಿತ್ತು. ಈ ಸಭೆಯಲ್ಲಿ ಭಾಗಿಯಾಗಿದ್ದ ನಿತ್ಯಾನಂದನ ಶಿಷ್ಯರು, ‘ಇದನ್ನೇ ವಿಶ್ವಸಂಸ್ಥೆ ಸಭೆ, ಇದರಲ್ಲಿ ಭಾಗಿಯಾಗಲು ಅವಕಾಶ ಕಲ್ಪಿಸುವ ಮೂಲಕ ನಮ್ಮ ಕೈಲಾಸ ದೇಶಕ್ಕೆ ಮಾನ್ಯತೆ ನೀಡಲಾಗಿದೆ’ ಎಂದು ತಪ್ಪು ಮಾಹಿತಿ ರವಾನಿಸುವ ಕೆಲಸ ಮಾಡಿದ್ದಾರೆ ಎನ್ನಲಾಗಿದೆ.

    ಮೊಬೈಲ್​​ ಚಾರ್ಜ್​​ಗೆ ಹಾಕಿ ಮಾತನಾಡುವಾಗ ಸ್ಫೋಟ: ಸ್ಥಳದಲ್ಲೇ ಪ್ರಾಣ ಬಿಟ್ಟ ವೃದ್ಧ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts